ಹೌದು ಇತ್ತೀಚಿನ ಸಿನಿಮಾರಂಗದಲ್ಲಿ ಬಯೋಪಿಕ್ ಗಳದ್ದೇ ಕಾರುಬಾರು ನಡೆದಿದೆ. ಹೌದು ಸಿನಿಮಾರಂಗದಲ್ಲಿ ಹೆಸರು ಮಾಡಿರುವ ಗಣ್ಯವ್ಯಕ್ತಿಗಳ ಸಿನಿಮಾಗಳನ್ನು ಮಾಡಲು ಸಾಕಷ್ಟು ನಿರ್ಮಾಪಕರು ಇತ್ತೀಚೆಗೆ ಆಲೋಚನೆ ಮಾಡುತ್ತಿದ್ದಾರೆ ಎಂದು ಕೇಳಿಬಂದಿದೆ. ಅಂದಹಾಗೆ ರಾಜಕೀಯದಲ್ಲಿ, ಸಿನಿಮಾರಂಗದಲ್ಲಿ, ಕ್ರೀಡಾ ವಿಚಾರದಲ್ಲಿ, ಹೆಸರುಗಳಿಸಿರುವ ಗಣ್ಯವ್ಯಕ್ತಿಗಳ ಸಿನಿಮಾಗಳನ್ನು ತೆರೆಮೇಲೆ ತಂದು ಪ್ರೇಕ್ಷಕರಿಗೆ ಇವರ ಜೀವನ ದಾರಿತ ಸಿನಿಮಾಗಳನ್ನು ನೀಡಿ ಮಾದರಿ ಪಡುವಂತೆ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಅದೇ ನಿಟ್ಟಿನಲ್ಲಿ ದಕ್ಷಿಣ ಭಾರತ ಸಿನಿಮಾರಂಗದಲ್ಲಿ, ಹೆಸರು ಮಾಡಿದ್ದ ನಟಿ ಸೌಂದರ್ಯ ಅವರು, ಕನ್ನಡ, ಸಿನಿಮಾಗಳಲ್ಲಿ ಮಾತ್ರವಲ್ಲದೆ, ತೆಲುಗು ಮಲಯಾಳಂ ಹಿಂದಿ ಮತ್ತು ತಮಿಳು ಸಿನಿಮಾರಂಗದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯ ಮಾಡಿದ್ದಾರೆ. ಕನ್ನಡದ ಸಾಹಸಸಿಂಹ ವಿಷ್ಣುವರ್ಧನ್, ರಜನಿಕಾಂತ್, ಅಮಿತಾಬಚ್ಚನ್, ಜಗಪತಿಬಾಬು, ಮತ್ತು ಇನ್ನು ಕೆಲವು ಸ್ಟಾರ್ ನಟರ ಜೊತೆ ಸೌಂದರ್ಯ ಅವರು ತೆರೆ ಹಂಚಿಕೊಂಡಿದ್ದಾರೆ. ಮತ್ತು ಭಾರತ ತುಂಬೆಲ್ಲ ಸಾಕಷ್ಟು ಅಭಿಮಾನಿ ಬಳಗವನ್ನು ಕೂಡ ನಟಿ ಸೌಂದರ್ಯ ಹೊಂದಿದ್ದಾರೆ.

Sai-Pallavi

ಆದರೆ ಈಗ ಬಂದಿರುವ ಮಾಹಿತಿ ಪ್ರಕಾರ, ನಟಿ ಸೌಂದರ್ಯ ಅವರ ಜೀವನ ದಾರಿತ ಬಯೋಪಿಕ್ ಬರಲಿದೆ ಎನ್ನುವ ಮಾತುಗಳು ಕೇಳಿಬಂದಿದ್ದು, ಕನ್ನಡ ನಟಿ ಸೌಂದರ್ಯ ಅವರ ಪಾತ್ರವನ್ನು ಮಲಯಾಳಂ ನಟಿ ಸಾಯಿ ಪಲ್ಲವಿ ಅಭಿನಯ ಮಾಡಲಿದ್ದಾರಂತೆ. ಮತ್ತು ಅಲ್ಪಸಮಯದಲ್ಲೇ ಹೆಚ್ಚು ಸಾಧನೆ ಮಾಡಿದ ನಟಿ ಸೌಂದರ್ಯ 1992 ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟಿದ್ದು, ಹದಿಮೂರು ವರ್ಷಗಳ ಕಾಲ ಸಿನಿಮಾರಂಗದಲ್ಲಿ ಇದ್ದರು. ಮತ್ತು ಸಿನಿಮಾರಂಗದಲ್ಲಿ 6 ಫಿಲಂ ಫೇರ್ ಪ್ರಶಸ್ತಿ ಪಡೆದರು. ಒಂದು ರಾಷ್ಟ್ರ ಪ್ರಶಸ್ತಿ, ಐದು ರಾಜ್ಯ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

2004ರಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ರಮೇಶ್ ಅರವಿಂದ್ ಅಭಿನಯದ ‘ಆಪ್ತಮಿತ್ರ’ ಚಿತ್ರದಲ್ಲಿ ಅಭಿನಯ ಮಾಡಿದ ಸೌಂದರ್ಯ ಅವರು, ಇದೆ ಅವರ ಕೊನೆಯ ಚಿತ್ರವಾಗಿದ್ದು, ವಿಮಾನ ದುರಂತದಲ್ಲಿ ಸಾವನ್ನಪ್ಪಿದರು. ಮತ್ತು ಇವರ ಬಯೋಪಿಕ್ ಸಿನಿಮಾ ತೆರೆ ಮೇಲೆ ಬರುವ ವಿಚಾರವನ್ನು ಪೆಳ್ಳಿ ಚೂಪುಲು ಸಿನಿಮಾದ ನಿರ್ಮಾಪಕರು ಅಧಿಕೃತವಾಗಿ ಈ ಸಿನಿಮಾ ಬರಲಿದೆ ಎಂದು ಬಹಿರಂಗಪಡಿಸಿಲ್ಲ. ಮತ್ತು ಈ ಸಿನಿಮಾಕ್ಕೆ ಯಾವ ನಿರ್ದೇಶಕರು ಎಂಬುದಾಗಿ ತಿಳಿದುಬಂದಿಲ್ಲ.ಹೌದು ಮೇಲಿನ ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ ತಿಳಿಸಿ ಜೊತೆಗೆ ಶೇರ್ ಮಾಡಿ ಧನ್ಯವಾದಗಳು….

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •