ಹಣೆ ಮೇಲೆ ಕುಂಕುಮ ಇಡುವುದರಿಂದ ಆಗುವ ಲಾಭಗಳೇನು ಗೊತ್ತಾ.?ವಿಜ್ಞಾನಿಗಳು ಸಹ ಇದನ್ನು ಒಪ್ಪಿದ್ದಾರೆ.

Home Kannada News/ಸುದ್ದಿಗಳು

ಸಂಸ್ಕೃತಿ, ಸನಾತನ ಧರ್ಮವನ್ನು ಪೂಜಿಸಿಕೊಂಡು ಬಂದಿರುವ ದೇಶ ಭಾರತ. ಇಲ್ಲಿ ಕುಂಕುಮಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತದೆ. ಇದು ಮುತ್ತೈದೆ ಮಹಿಳೆಯರ ಒಂದು ಪ್ರಮುಖವಾದ ಸಂಕೇತವಾಗಿದೆ. ಇದು ಕೇವಲ ಸಂಪ್ರದಾಯ ಮಾತ್ರವಲ್ಲ ಇದನ್ನು ಹಣೆಗೆ ಹಚ್ಚೋದರಿಂದ ಹಲವಾರು ಪ್ರಯೋಜನಗಳಿವೆ.

ಹಣೆ ಮೇಲೆ ಕುಂಕುಮ ಇಡೋದರಿಂದ ಪ್ರಯೋಜನಗಳು ಯಾವುವು ನೋಡೋಣ, ಕುಂಕುಮವನ್ನು ಒಣಗಿದ ಅರಿಶಿನದಿಂದ ಮಾಡಲಾಗುತ್ತದೆ. ಇದಕ್ಕೆ ಹೆಚ್ಚು ಕೆಂಪು ಬಣ್ಣ ನೀಡುವುದು ನಿಂಬೆ ಹಣ್ಣು. ಇದು ಆರೋಗ್ಯದ ಮೇಲೂ ಸಕಾರಾತ್ಮಕ ಪರಿಣಾಮ ಉಂಟಾಗುತ್ತದೆ ಎಂದು ವೈಜ್ಞಾನಿಕವಾಗಿ ತಿಳಿದುಬಂದಿದೆ.

ಕೆಲವು ಅಧ್ಯಯನಗಳ ಪ್ರಕಾರ, ಪವಿತ್ರ ವಸ್ತುಗಳಾಗಿರುವ ಸಿಂಧೂರ, ಗಂಧ,ಅರಿಶಿನ, ಇತರೆ ಕೆಲವು ಇಂತಹ ವಸ್ತುಗಳನ್ನು ಹಿಂದೂ ಸಂಪ್ರದಾಯದ, ಇಲ್ಲವೇ ವೈದಿಕ ಸಂಪ್ರದಾಯದ ಮಂದಿ ನಂಬಿಕೆಯಿಂದ ಹಚ್ಚಿಕೊಳ್ಳುವುದರ ಹಿಂದೆ, ಕೆಲವು ಆಯುರ್ವೇದ ಹಿನ್ನಲೆಯೂ ಇದೆ.

ಇವುಗಳೆಲ್ಲವೂ ಕೆಲವು ಔಷಧೀಯ ವಸ್ತುಗಳಿಂದ ತಯಾರಿಸಲ್ಪಟ್ಟವು. ಇವೆಲ್ಲವುಗಳನ್ನು ವೈಜ್ಞಾನಿಕ ಕಾರಣಗಳಿಂದಲೇ ಬಳಸಲಾಗುತ್ತೆ. ಉದಾಹರಣೆಗೆ ಗಂಧವನ್ನು ಹಣೆಗೆ ತಿಲಕದಂತೆ ಹಚ್ಚಿಕೊಳ್ಳುವುದರಿಂದ ತಲೆಗೆ ತಂಪಾಗುತ್ತೆ ಮತ್ತು ಮನಸ್ಸು ಪ್ರಶಾಂತವಾಗಿರಲು ಸಹಾಯ ಮಾಡುತ್ತೆ. ಇದು ಮನಸ್ಸನ್ನು ಶಾಂತವಾಗಿರಿಸಿರುತ್ತೆ.

ಅದೇ ರೀತಿ ಅರಿಶಿನವನ್ನು ಹಣೆಗೆ ಹಚ್ಚಿಕೊಳ್ಳುವುದರಿಂದ ಚರ್ಮವನ್ನು ಸುಂದರವಾಗಿರಿಸಿಕೊಳ್ಳಬಹುದು. ಚರ್ಮದ ಆರೋಗ್ಯದ ದೃಷ್ಟಿಯಿಂದ ಬಹಳ ಪ್ರಯೋಜನಕಾರಿ. ಕೆಲವು ಮಾಲೆಗಳನ್ನು ಕೂಡ ಅರಿಶಿನದ ಕೊಂಬುಗಳಿಂದ ತಯಾರಿಸಿದ ಮಣಿಗಳನ್ನು ಬಳಸಿ ಮಾಡಲಾಗುತೆ. ಇದು ಕೂಡ ಕೆಲವು ಔಷಧೀಯ ಗುಣಗಳ ಕಾರಣದಿಂದ ಮತ್ತು ಆಧ್ಯಾತ್ಮಿಕ ಕಾರಣಗಳನ್ನು ಒಳಗೊಂಡಿದೆ.

ಕೆಂಪು ಬಣ್ಣ ಉತ್ತೇಜಕ ಗುಣವನ್ನು ಹೊಂದಿದೆ. ಇದನ್ನು ಹಣೆ ಮೇಲೆ ಇರಿಸುವುದರಿಂದ ಪಿಟ್ಯುಟರಿ ಗ್ರಂಥಿಯನ್ನು ಉತ್ತೇಜಿಸಿ ಅದರ ಹಾರ್ಮೋನ್‌ ನಿಯಮಿತವಾಗಿ ಸ್ರವಿಸುವಂತೆ ಮಾಡುತ್ತದೆ. ಕುಂಕುಮ ಹಚ್ಚುವುದರಿಂದ ಮನಸ್ಸಿನ ಏಕಾಗ್ರತೆ ಹೆಚ್ಚುತ್ತದೆ. ಋಣಾತ್ಮಕ ಶಕ್ತಿ ದೂರವಾಗುವುದಕ್ಕೆ ಕುಂಕುಮ ಹಚ್ಚುವುದು ಸಹಾಯ ಮಾಡುತ್ತದೆ.

ಪುರುಷರಿರಲಿ ಅಥವಾ ಸ್ತ್ರೀಯರಿರಲಿ ಅವರು ಇತರರಿಗೆ ಕುಂಕಮವನ್ನು ಹಚ್ಚುವಾಗ ಮಧ್ಯಮಾವನ್ನು ಅಂದರೆ ಮಧ್ಯದ ಬೆರಳನ್ನು ಉಪಯೋಗಿಸಬೇಕು, ಏಕೆಂದರೆ ಇತರರನ್ನು ಸ್ಪರ್ಶಿಸುವಾಗ ಬೆರಳಿನ ಮೂಲಕ ಅವರಲ್ಲಿರುವ ಕೆಟ್ಟ ಶಕ್ತಿಗಳು ನಮ್ಮ ದೇಹದಲ್ಲಿ ಸೇರಿಕೊಳ್ಳುವ ಸಾಧ್ಯತೆಯಿರುತ್ತದೆ. ಆದುದರಿಂದ ತೇಜದ ಬಲವಿರುವ ಮಧ್ಯಮಾವನ್ನು ಉಪಯೋಗಿಸಿ ತಮ್ಮ ದೇಹದ ರಕ್ಷಣೆಯನ್ನು ಮಾಡಿಕೊಳ್ಳಬೇಕು.

ಆರನೇ ಚಕ್ರವಾದ ಆಗ್ನ ಐಬ್ರೋದ ನಡುವೆ ಇದೆ. ಇಲ್ಲಿಗೆ ಕುಂಕುಮ ಹಚ್ಚುವುದರಿಂದ ಗ್ರಹಿಕೆ ಹೆಚ್ಚಾಗುತ್ತದೆ. ಕುಂಕುಮ ಹಚ್ಚುವುದರಿಂದ ಫೇಶಿಯಲ್‌ ಮಸಲ್ಸ್‌ ಸ್ಟ್ರಾಂಗ್‌ ಆಗುತ್ತದೆ. ಹಾಗೂ ಬೇಗನೆ ವ್ರಿಂಕಲ್‌ ಉಂಟಾಗುವುದನ್ನು ತಡೆಯುತ್ತದೆ. ಅಷ್ಟೇ ಯಾಕೆ ತಲೆನೋವು ಕಡಿಮೆ ಮಾಡಲು ಸಹ ಕುಂಕುಮ ಸಹಾಯ ಮಾಡುತ್ತದೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...