ಪ್ರತಕರ್ತರಿಗೂ ಸಂವೇದನೆಗಳಿರಬೇಕು.ಯಾವ ಪ್ರಶ್ನೆಯನ್ನು ಎಲ್ಲಿ ಕೇಳಬೇಕು ಅನ್ನುವ ಪರಿಜ್ಞಾನವಿರಬೇಕು. ಒಂದು ವೇಳೆ ಎಲ್ಲಿ ಯಾವ ಪ್ರಶ್ನೆ ಕೇಳಬೇಕು ಅನ್ನುವ ಅರಿವಿಲ್ಲದಿದ್ದರೆ ಎಡವಟ್ಟುಗಳಾಗುತ್ತದೆ.ಈಗ ಮರಣ ಸಂಭವಿಸಿದ ಮನೆಗಳಿಗೆ ಹೋಗುವ ಪತ್ರಕರ್ತರು ಕಣ್ಣೀರಿಡುತ್ತಿರುವವರ ಮೂತಿಗೆ ಲೋಗೋ ಹಿಡಿಯುವ ಮೂಲಕ ಸಂವೇದನೆಯಲ್ಲಿ ಕಳೆದುಕೊಂಡಾಗಿದೆ.

 

ಅಗ್ಗ್ರೆಸ್ಸಿವ್ ಪತ್ರಕರ್ತರು ಎಂದೆನಿಸಿಕೊಳ್ಳಲು ಭರದಲ್ಲಿ ಬಾಯಿ ಬಂದ ಪ್ರಶ್ನೆಯನ್ನು ಕೇಳಿ ವೀಕ್ಷಕರಿಂದ ಛೀ..ಥೂ ಎಂದು ಉಗಿಸಿಕೊಳ್ಳುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಕುಂಭ ಮೇಳದಲ್ಲೂ ಹೀಗೆ ಆಗಿದೆ. ಸಾಧು ಸಂತರಿಗೆ ಅನುಚಿತ ಪ್ರಶ್ನೆಗಳನ್ನು ಕೇಳಬಾರದೆಂಬ ನಂಬಿಕೆ ಇದ್ದರೂ ಅದನ್ನು ಮೀರಿದ ರಾಷ್ಟ್ರೀಯ ಸುದ್ದಿವಾಹಿನಿಯ ಪತ್ರಕರ್ತೆ ( aaj tak) ನಾಗಾಸಾಧುವೊಬ್ಬರ ಬಳಿ ಮಾತನಾಡುವಾಗ ಎಚ್ಚರ ತಪ್ಪಿದ್ದಾರೆ.

 

 

ಸಾಮಾನ್ಯರಿಗೆ ಪ್ರಶ್ನೆ ಕೇಳುವ ರೀತಿಯಲ್ಲಿ ನಾಗಾಸಾಧುವಿಗೂ ಪ್ರಶ್ನೆ ಕೇಳಿ ತಕ್ಕ ಪ್ರತ್ಯುತ್ತರ ಪಡೆದಿದ್ದಾರೆ. ಸಾಮಾನ್ಯವಾಗಿ ನಾಗಾ ಸಾಧುಗಳು ಯಾವುದೇ ವಸ್ತ್ರ ಧರಿಸುವುದಿಲ್ಲ, ಕೇವಲ ಭಸ್ಮ ಧಾರಣೆ ಮಾಡಿಕೊಳ್ಳುತ್ತಾರೆ. ಆದರೆ ಕುಂಭಮೇಳಕ್ಕೆ ಆಗಮಿಸಿದ್ದ ನಾಗಾಸಾಧು ಒಬ್ಬರು ವಸ್ತ್ರ ಧರಿಸಿ ನಡೆಯುತ್ತಿದ್ದರು.

ಈ ವೇಳೆ ಎದುರಾದ ಪತ್ರಕರ್ತೆಯೊಬ್ಬರು ನಾಗಾಸಾಧುವನ್ನು ಸಂದರ್ಶಿಸಲು ಯತ್ನಿಸಿದರು. ಆದರೆ ಅದೇ ಸಮಯದಲ್ಲಿ ಎಡವಟ್ಟೊಂದನ್ನು ಮಾಡಿಕೊಂಡಿದ್ದು, ನಾಗಾಸಾಧುವನ್ನು ಬಟ್ಟೆ ಧರಿಸಿಕೊಂಡಿರುವುದರ ಬಗ್ಗೆ ಪ್ರಶ್ನಿಸಿದ್ದಾರೆ.“ನಿಮ್ಮದು 12 ವರ್ಷಗಳ ಸಂಕಲ್ಪ ಎನ್ನುತ್ತೀರಿ, ಆದರೆ ಕೆಲವು ಸಾಧುಗಳು ಬಟ್ಟೆ ಧರಿಸುವುದಿಲ್ಲ. ಆದರೆ ನೀವು ಬಟ್ಟೆ ಧರಿಸಿದ್ದೀರಿ ಎಂದು ಹೇಳಿ ಮುಗಿಸುವ ಮುನ್ನವೇ ನಾಗಾಸಾಧು ಧರಿಸಿದ್ದ ವಸ್ತ್ರವನ್ನು ಕಳಚಿದ್ದಾರೆ.

ಪತ್ರಕರ್ತೆ ನಾಗಾಸಾಧು ನೀಡಿದ ಪ್ರತಿಕ್ರಿಯೆಗೆ ಗಾಬರಿಯಾಗಿದ್ದಾರೆ. ನಾಗಸಾಧು ಕೊಟ್ಟ ಉತ್ತರ ಕೇಳಿದ್ದಲ್ಲ ನೋಡಿ ಓಟ ಕಿತ್ತಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಪತ್ರಕರ್ತರು ಇನ್ನಾದರೂ ಎಚ್ಚೆತ್ತುಕೊಳ್ಳುವುದು ಒಳಿತು.

ಮತ್ತಷ್ಟು ಇಂಟರೆಸ್ಟಿಂಗ್ ಸ್ಟೋರಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ಇದರ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •