ನಮಸ್ತೆ ಪ್ರಿಯ ಓದುಗರೇ, ವಿಜ್ಞಾನವೂ ಬೆಳೆಯುತ್ತಾ ಹೋದಂತೆ ಮನುಷ್ಯನ ಆಲೋಚನೆಗಳು ಚಿಂತನೆಗಳು ಬೆಳೆಯುತ್ತಾ ಹೋಗುತ್ತಿವೆ. ಆತನು ಹಾಕಿಕೊಳ್ಳುವ ಬಟ್ಟೆಯಿಂದ ಹಿಡಿದು ಆತನು ವಾಸಿಸುವ ಮನೆಯವರೆಗೆ ಹಲವಾರು ಅಭಿವೃದ್ದಿಯನ್ನು ಮಾಡಿಕೊಂಡು ಜೀವನವನ್ನು ನಡೆಸುತ್ತಿದ್ದಾನೆ ಮನುಷ್ಯನು. ಆದರೆ ಮೊದಲಿನ ಕಾಲದಲ್ಲಿ ಜನರು ಮರದ ಪೊಟರೆಗಳಲ್ಲಿ, ಗುಹೆಗಳಲ್ಲಿ ವಾಸಿಸುತ್ತಿದ್ದರು. ಆದರೆ ಈಗಿನ ಆಧುನಿಕತೆ ಗಗನ ಮುಟ್ಟಿದೆ. ಗೃಹಗಳನ್ನು ನಿರ್ಮಾಣ ಮಾಡಿಕೊಳ್ಳುವುದು ಮಾನವನ ವಿಕಾಸದ ಹಾದಿಯಾಗಿದೆ.

ಇದರಿಂದ ಮನುಷ್ಯನು ಆಲೋಚಿಸ ತೊಡಗಿದನು. ತನ್ನವರಿಗಾಗಿ ಮನೆಯನ್ನು ನಿರ್ಮಾಣ ಮಾಡಿಕೊಳ್ಳಬೇಕೆಂಬ ಕಲ್ಪನೆಯನ್ನು ಹುಟ್ಟಿಹಾಕಿಕೊಂಡು ಮನೆಯನ್ನು ನಿರ್ಮಾಣ ಮಾಡಿಕೊಳ್ಳ ತೊಡಗಿದನು. ಸಮಯ ಬದಲಾದಂತೆ ಅಕ್ರಮ ಮನೆ ಮತ್ತು ಸಕ್ರಮ ಮನೆ ಅಂತ ಮಾಡಿಕೊಳ್ಳಲಾಯಿತು. ಅಕ್ರಮ ಮನೆ ಮತ್ತು ಅಕ್ರಮ ಜಮೀನು ಇದ್ದರೆ ಅದನ್ನು ನೀವು ಸಕ್ರಮವಾಗಿ ಮಾಡಿಕೊಳ್ಳಬಹುದು. ಸಕ್ರಮ ಜಮೀನು ಅಂತ ಸರ್ಕಾರವು ಘೋಷಣೆ ಮಾಡಿದರೆ ಸರ್ಕಾರದಿಂದ ಮಾಡಿರುವ ಕಾನೂನು ಮತ್ತು ನಿರ್ಭಂದನೆಗಳನ್ನು ಪಾಲಿಸಬೇಕಾಗುತ್ತದೆ.

akrama sakrama latest news 2021/ ಸರ್ಕಾರೀ ಜಾಗದಲ್ಲಿ ಮನೆ ಕಟ್ಟಿಕೊಂಡವರಿಗೆ ಸಕ್ರಮ ಮಾಡಿಕೊಳ್ಳಲು ಅವಕಾಶ/ ಕನ್ನಡ - YouTube

ಮುಖ್ಯವಾಗಿ ಹೇಳಬೇಕೆಂದರೆ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಜಮೀನಿನಲ್ಲಿ ವಾಸಿಸುವ ಜನರು ತುಂಬಾನೇ ಇದ್ದಾರೆ. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ನಾವು ನಿಮಗೆ, ಅಕ್ರಮ ಜಮೀನನ್ನು ಸಕ್ರಮ ಜಮೀನು ಮಾಡಿಕೊಳ್ಳುವುದು ಹೇಗೆ. ಇದಕ್ಕೆ ಯಾವ ದಾಖಲೆಗಳು ಬೇಕಾಗುತ್ತದೆ. ಏನೆಲ್ಲ ಮಾಡಬೇಕು ಅಂತ ತಿಳಿಸಿಕೊಡುತ್ತೇವೆ ಬನ್ನಿ.

ಅಕ್ರಮ ಜಮೀನನ್ನು ಸಕ್ರಮ ಜಮೀನು ಮಾಡಿಕೊಳ್ಳಲು ಬೇಕಾಗುವ ಮೊಟ್ಟ ಮೊದಲ ದಾಖಲೆ ಅಂದರೆ ಅದುವೇ ಆಧಾರ್ ಕಾರ್ಡ್. ತದ ನಂತರ ಮನೆಯ ನಕ್ಷೆ ಬೇಕಾಗುತ್ತದೆ. ಹಳೆ ಮನೆಯಾಗಲೀ ಹೊಸದಾಗಿರಲಿ ಕಚ್ಚಾ ಪಕ್ಕಾ ಯಾವುದೇ ರೀತಿಯ ಮನೆ ಇದ್ದರೂ ಮನೆಯ ಫೋಟೋ ಬೇಕಾಗುತ್ತದೆ. ಮನೆ ಕರದ ರಶೀದಿ ಗ್ರಾಮ ಸಭೆ ಮತ್ತು ನಗರಸಭೆಯಲ್ಲಿ ಸಲ್ಲಿಸಿರುವುದು ಪತ್ರ ಬೇಕಾಗುತ್ತದೆ.

ಇನ್ನೂ ಸಾಕ್ಷಿಗಳು ಅಂದರೆ ಅಪರಿಚಿತರಿಂದ ಪಂಚನಾಮೆ ಮಾಡಿದ ಸಹಿಗಳು ಬೇಕಾಗುತ್ತವೆ. ಇನ್ನೂ ಇದನ್ನು ಯಾವ ಮೂಲಕ ಸಲ್ಲಿಸಬೇಕೆಂದರೆ ಮೇಲೆ ತಿಳಿಸಿರುವ ಎಲ್ಲ ದಾಖಲೆಗಳನ್ನು ತೆಗೆದುಕೊಂಡು ನಮೂನೆ ಫಾರಂ ಅರ್ಜಿಯನ್ನು ಬರೆದು ಎಲ್ಲ ಡಾಕ್ಯುಮೆಂಟ್ ಗಳನ್ನು ಲಗತ್ತಿಸಿ ನೆಮ್ಮದಿ ಕೇಂದ್ರಕ್ಕೆ ಸಲ್ಲಿಸಬೇಕು. ಅವರು ನಿಮಗೆ ಎಕ್ನೋಲೋಜ್ಮೆಂಟ್ ಲೆಟರ್ ಅನ್ನು ನೀಡುತ್ತಾರೆ. ನಂತರ ನಿಮ್ಮ ಈ ಅರ್ಜಿಯು ವಿಲೇಜ್ ಅಕೌಂಟೆಂಟ್ ಹತ್ತಿರ ಪರಿಶೀಲನೆಗಾಗಿ ಕಳುಹಿಸುತ್ತಾರೆ.

Видео akrama sakrama

ಕಂದಾಯ ಅಧಿಕಾರಿ ಮತ್ತು ಶಾನುಭೋಗರು ಬಂದು ಸ್ಥಳವನ್ನು ವೀಕ್ಷಣೆ ಮಾಡುತ್ತಾರೆ. ಮತ್ತು ಅರ್ಜಿಯನ್ನು ಸಲ್ಲಿಸಿದ ವ್ಯಕ್ತಿಯ ಮುಂದೆ ಮತ್ತು ಪಂಚನಾಮೆ ಸಹಿ ಹಾಕಿದವರ ಸಮ್ಮುಖದಲ್ಲಿ ಮನೆಯ ನಕ್ಷೆಯನ್ನು ಸಿದ್ದ ಪಡಿಸುತ್ತಾರೆ. ಈ ಎಲ್ಲ ಕೆಲಸಗಳು ಸರಿಯಾಗಿ ಕ್ರಮಬದ್ಧವಾಗಿ ನಡೆದರೆ ಅಕ್ರಮ ಜಮೀನನ್ನು ಸಕ್ರಮ ಜಮೀನುವಾಗಿಸಿಕೊಳ್ಳಬಹುದು. ನಮ್ಮ ಸರ್ಕಾರವು ಅಕ್ರಮ ಜಮೀನನ್ನು ಸಕ್ರಮ ಜಮೀನನ್ನಾಗಿ ಮಾಡಿಕೊಳ್ಳಲು ಹಲವಾರು ನಿರ್ಭಂಧನೆಗಳನ್ನು ಹಾಕಿಕೊಳ್ಳಲಾಗಿದೆ.

ಅದರಲ್ಲಿ ಮುಖ್ಯವಾಗಿ ಮನೆಯ ಹಕ್ಕು ಪತ್ರವನ್ನು ಪಡೆದ ಮೇಲೆ ಮನೆಯನ್ನು ಯಾವುದೇ ಕಾರಣಕ್ಕೂ ಮಾರುವ ಹಾಗಿಲ್ಲ ಅಂತ ನಿಯಮವನ್ನು ಜಾರಿಗೆ ತರಲಾಗಿದೆ. ಮತ್ತು ಯಾವುದೇ ರೀತಿಯ ವಾಣಿಜ್ಯ ಚಟುವಟಿಕೆ ಮಾಡಬಾರದು ಅಂತ ಕೂಡ ಕಾಯಿದೆಯನ್ನು ತರಲಾಗಿದೆ. ಇನ್ನೂ ಅಕ್ರಮ ಜಮೀನು ಸಕ್ರಮ ಜಮೀನು ಮಾಡದಂತೆ ನೀವು ಸಮಿತಿಯ ಶಾಸಕರಿಗೆ ಮತ್ತು ತಷಿಲ್ದಾರ್ ರೀಗೆ ಹದಿನೈದು ದಿನಗಳೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ನೋಡಿದ್ರಲಾ ಮಿತ್ರರೇ ಹೇಗೆ ಸುಲಭವಾಗಿ ಅಕ್ರಮ ಜಮೀನನ್ನು ಸಕ್ರಮ ಜಮೀನು ಆಗಿ ಮಾಡಿಕೊಳ್ಳಬಹುದು ಅಂತ ಆದರೆ ಸರ್ಕಾರದ ನಿಯಮಗಳನ್ನು ಮತ್ತು ನಿರ್ಭಂಧನೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕಾಗುತ್ತದೆ. ಈ ಮಾಹಿತಿ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ ಶುಭದಿನ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!