ರೋಹಿಣಿ ಸಿಂಧೂರಿ ಈ ಹೆಸರು ಕೇಳಿದರೆ ನೆನಪಾಗುವ ಒಂದೆರಡು ಪದಗಳು ಧೈ’ರ್ಯ ಮತ್ತು ಶ್ರದ್ಧೆ. ಇಂದಿನ ಪೀಳಿಗೆಯ ಯುವತಿಯರಿಗೆ ಮಾದರಿ ರೋಹಿಣಿ ಸಿಂಧೂರಿ ಅವರು. ಮೈಸೂರಿಗೆ ಹೊಸದಾಗಿ ಬಂದಿರುವ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು. ಚಿಕ್ಕ ವಯಸ್ಸಿಗೆ ಕೆಲಸದ ಮೇಲೆ ಇವರಿಗೆ ಇರುವಷ್ಟು ಶ್ರದ್ದಾ ಭಕ್ತಿ, ಜನರಿಗೆ ಸೇವೆ ಮಾಡುವ ಮನೋಭಾವ ಮೆಚ್ಚುವಂಥದ್ದು. ಅದೆಷ್ಟೋ ರಾಜಕಾರಣಿಗಳಿಂದ ಸಾಧ್ಯವಾಗದ ಕೆಲಸಗಳನ್ನು ಮಾಡಿರುವ ದಿಟ್ಟ ಮಹಿಳೆ ದಕ್ಷ ಅಧಿಕಾರಿ ರೋಹಿಣಿ ಸಿಂಧೂರಿ. ರೋಹಿಣಿ ಸಿಂಧೂರಿ ಅವರು ಮೂಲತಃ ತೆಲಂಗಾಣದವರು. ಇವರು ಹುಟ್ಟಿದ್ದು ಮೇ 30, 1984 ರಲ್ಲಿ. ಒಳ್ಳೆಯ ವಿದ್ಯಾರ್ಥಿನಿಯಾಗಿದ್ದ ರೋಹಿಣಿ, ಕೆಮಿಕಲ್ ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದರು. 2009 ರಲ್ಲಿ ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ, 43 ನೇ ರಾಂಕ್ ಪಡೆದರು.ಇವರ ಬಗ್ಗೆ ನಿಮಗೆಷ್ಟು ಗೊತ್ತು ? ತಿಳಿಯಲು ಮುಂದೆ ಓದಿ..

Rohini

ಇವರು ಕರ್ನಾಟಕ ಕೇಡರ್ ನ ಭಾರತೀಯ ಸೇವಾ ಅಧಿಕಾರಿ. ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ನಂತರ ಸುಧೀರ್ ಎಂಬುವರೊಡನೆ ವಿವಾಹವಾದರು, ಈ ದಂಪತಿಗೆ ಇಬ್ಬರು ಮುದ್ದಾದ ಮ’ಕ್ಕಳಿದ್ದಾರೆ. ಇವರ ಪತಿ ಸಾಫ್ಟ್ ವೇರ್ ಇಂಜಿನಿಯರ್. ಸಮಾಜಸೇವಾ ಮನೋಭಾವ ಹೊಂದಿದ್ದ ರೋಹಿಣಿಯವರು ಸಮಾಜದಲ್ಲಿರುವ ಭ್ರ-ಷ್ಟಾ-ಚಾರವನ್ನು ನಿ’ರ್ಮೂಲನೆ ಮಾಡಬೇಕು. ಜನರಿಗೆ ಸಹಾಯ ಮಾಡಬೇಕು ಎಂಬ ಧೃಡ ಸಂಕಲ್ಪ ಹೊಂದಿರುವವರು. ರೋಹಿಣಿ ಅವರು ಮೊದಲಿಗೆ ಆಗಸ್ಟ್ 29, 2011 ರಿಂದ 2012 ಆಗಸ್ಟ್ 31 ರವರೆಗೆ ತುಮಕೂರಿನಲ್ಲಿ ಅಸಿಸ್ಟಂಟ್ ಕಮಿಷನರ್ ಆಗಿ ಕಾರ್ಯ ಆರಂಭಿಸಿದರು. ಆ ಅವಧಿಯಲ್ಲಿ ಅವರು ತುಮಕೂರಿನ ನಗರಾಭಿವೃದ್ಧಿ ವಿಭಾಗದ ಆಯುಕ್ತರಾಗಿದ್ದರು ಮತ್ತು 2012 ರ ಡಿಸೆಂಬರ್ 31 ರವರೆಗೆ ಇದೇ ಹುದ್ದೆಯಲ್ಲಿ ಮುಂದುವರೆದರು. ಖಾಲಿಯಾಗಿರುವ ನಿಗಮದ ಅಂಗಡಿಗಳನ್ನು ಹ’ರಾಜು ಮಾಡಿ, ನಿಗಮಕ್ಕೆ 10 ಕೋಟಿ ಮಲ್ಯದ ಆದಾಯವನ್ನು ಗಳಿಸುವಲ್ಲಿ ಪ್ರಮುಖ ಪಾತ್ರ ರೋಹಿಣಿ ಅವರದ್ದು. ತುಮಕೂರು ಜಿಲ್ಲೆಯ ಅತ್ಯಂತ ಜನನಿಬಿಡ ರಸ್ತೆಗಳಲ್ಲಿ ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದಕ್ಕಾಗಿ ತುಮಕೂರು ಜನರು ಅವರನ್ನು ಪ್ರೀತಿಯಿಂದ ಸ್ಮರಿಸುತ್ತಾರೆ.

Rohini

ನಂತರ ಆಗಸ್ಟ್ 10, 2013 ರಿಂದ 31 ಮೇ 2014 ರವರೆಗೆ ಬೆಂಗಳೂರಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶಕರಾಗಿ ಕೆಲಸ ಮಾಡಿದರು. ಮುಂದಿನ ದಿನಗಳಲ್ಲಿ ಮಂಡ್ಯ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕಗೊಂಡರು. ರೋಹಿಣಿ ಅವರು 2014–15 ರ ಅವಧಿಯಲ್ಲಿ ಒಂದು ಲಕ್ಷಕ್ಕೂ ಹೆಚ್ಚಿನ ಮನೆಗಳಿಗೆ ವೈ’ಯಕ್ತಿಕ ಶೌ-ಚಾ’ಲಯಗಳನ್ನು ಒದಗಿಸುವ ಕೆಲಸವನ್ನು ಪ್ರಾರಂಭಿಸಿ ಯಶಸ್ವಿಯಾಗಿ ಮುಗಿಸಿ, ಸ್ವಚ್ಛ್ ಭಾರತ್ ಅಭಿಯಾನಕ್ಕೆ ಸಂಪೂರ್ಣವಾಗಿ ಸಾಥ್ ನೀಡಿದರು. ನಂತರ ಕೇಂದ್ರ ಸರ್ಕಾರದಿಂದ ದೊರೆತ 65 ಕೋಟಿ ಅನುದಾನವನ್ನು ಕುಡಿಯುವ ನೀರಿಗಾಗಿ ಯಶಸ್ವಿಯಾಗಿ ಬಳಸಿಕಕೊಂಡರು. ರೋಹಿಣಿ ಸಿಂಧೂರಿ ಹಾಗೂ ಅವರ ತಂಡವು ಮಂಡ್ಯ ಜಿಲ್ಲೆಯಾದ್ಯಂತ 100 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿದರು. ಕೇಂದ್ರ ಸರ್ಕಾರ ಇದನ್ನು ಗುರುತಿಸಿ ಅದೇ ಉದ್ದೇಶಕ್ಕಾಗಿ 6 ​​ಕೋಟಿ ಹೆಚ್ಚುವರಿ ಹಣವನ್ನು ಸಹ ಒದಗಿಸಿತು.

Rohini

ಇದಲ್ಲದೇ ಮಂಡ್ಯ ಜಿಲ್ಲೆಯಲ್ಲಿ ಸ್ತ್ರೀ ಭ್ರೂ’ಣ ಹ’ತ್ಯೆ ನಡೆಯುವುದನ್ನು ಗಂ’ಭೀರವಾಗಿ ತೆಗೆದುಕೊಂಡು ಇಂತಹ ಘಟನೆಗಳನ್ನು ವರದಿ ಮಾಡುವಲ್ಲಿ ಮತ್ತು ಈ ಅಭ್ಯಾಸದ ವಿರುದ್ಧ ಪೋಷಕರಿಗೆ ಶಿಕ್ಷಣ ನೀಡುವಲ್ಲಿ ಆರೋಗ್ಯ ಇಲಾಖೆ ಮತ್ತು ಆಶಾ ಕಾರ್ಯಕರ್ತರನ್ನು ಸಂಘಟಿಸಿದರು. ಮಂಡ್ಯ ಜಿಲ್ಲಾ ಪಂಚಾಯತ್‌ ನ ಸಿಇಒ ಆಗಿ ಕಾರ್ಯ ನಿರ್ವಹಿಸಿದ ರೋಹಿಣಿ ಅವರು ಆಸ್ತಿ ದಾಖಲೆಗಳನ್ನು ಡೌ’ನ್‌ಲೋಡ್ ಮಾಡಲು ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದ್ದರು, ಇದು ಅನೇಕ ಜನರು ಕಚೇರಿಗಳ ಸುತ್ತಲೂ ಓಡದೆ ತಮ್ಮ ಆ’ಸ್ತಿ ದಾಖಲೆಗಳನ್ನು ಪಡೆಯಲು ಸಹಾಯ ಮಾಡುತ್ತಿದೆ. ರೋಹಿಣಿ ಅವರು 16 ಸೆಪ್ಟೆಂಬರ್ 2015 ರಿಂದ ಬೆಂಗಳೂರಿನ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಲಿಮಿಟೆಡ್ (ಕೆಎಫ್‌ಸಿಎಸ್‌ಸಿ) ಯ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ನಂತರ ರೋಹಿಣಿ ಅವರು ಜುಲೈ, 2017 ರಂದು ಹಾಸನದ ಜಿಲ್ಲಾಧಿಕಾರಿಯಾಗಿ ನೇಮಕಗೊಂಡರು. ಹಾಸನ ಜಿಲ್ಲೆಯಲ್ಲಿ ರೋಹಿಣಿಯವರು ಶಿಕ್ಷಣಕ್ಕೆ ನೀಡಿದ ಪ್ರಾಮುಖ್ಯತೆಯಿಂದಾಗಿ, 2019 ರಲ್ಲಿ ಹಾಸನ ಜಿಲ್ಲೆಯು ಎಸ್‌ಎಸ್‌ಎಲ್‌ಸಿ ಫಲಿತಾಂಶಗಳಲ್ಲಿ ಪ್ರಥಮ ಸ್ಥಾನ ಪಡೆಯಿತು.

Rohini

ಹಾಸನ ಜಿಲ್ಲೆಯಲ್ಲಿ ಬಹಳ ಪ್ರಚಲಿತದಲ್ಲಿದ್ದ ಮರಳು ಮಾಫಿಯಾವನ್ನು ಸಹ ಅವರು ನಿಯಂತ್ರಿಸಿದ ಹೆಗ್ಗಳಿಕೆ ರೋಹಿಣಿಯವರಿಗೆ ಸಲ್ಲುತ್ತದೆ. ಅಕ್ರ’ಮ ಮರಳು ಸಾಗಾಣಿಕೆ ವಿಚಾರದಲ್ಲಿ ಎಷ್ಟೇ ಅಡೆತಡೆಗಳು ಬಂದರು, ಬೆ’ದ-ರಿ’ಕೆಗಳು ಬಂದರೂ ಸಹ ಯಾವುದಕ್ಕೂ ಹೆದರದೆ ಹಲವಾರು ಬಾರಿ ದಾ’ಳಿ ನಡೆಸಿ ಮತ್ತು ಸಾಕಷ್ಟು ಅ-ಕ್ರ’ಮ ಉಪಕರಣಗಳನ್ನು ಮು’ಟ್ಟುಗೋಲು ಹಾಕಿದರು. ರೋಹಿಣಿ ಅವರ ಧೈ’ರ್ಯವನ್ನು ಎಲ್ಲರೂ ಮೆಚ್ಚಬೇಕು. ಇದೀಗ ರೋಹಿಣಿ ಅವರು ಮೈಸೂರಿನ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಇದಕ್ಕೂ ಮೊದಲು ಮೈಸೂರಿನ ಜಿಲ್ಲಾಧಿಕಾರಿಯಾಗಿ ಪ್ರಶಾಂತ್ ಅವರು ನೇಮಕವಾಗಿದ್ದರು ಆದರೆ ಅವರು ಕಚೇರಿಗೆ ಸರಿಯಾಗಿ ಬರುತ್ತಿರಲಿಲ್ಲ ಎಂಬ ದೂರುಗಳು ಹಾಗೂ ಇನ್ನಿತರ ದೂರುಗಳಿಂದ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಿ, ರೋಹಿಣಿ ಸಿಂಧೂರಿ ಅವರನ್ನು ಮೈಸೂರಿನ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ, ದೇವಿಯ ಆಶೀರ್ವಾದ ಪಡೆದು ಕರ್ತವ್ಯಕ್ಕೆ ಹಾಜರಾಗಿದ್ದಾರೆ ರೋಹಿಣಿ ಸಿಂಧೂರಿ. ಇವರ ಕರ್ತವ್ಯ ನಿಷ್ಠೆಯಿಂದ ಮೈಸೂರಿನಲ್ಲಿ ಏನೆಲ್ಲಾ ಅಭಿವೃದ್ಧಿಯಾಗಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ನೋಡಬೇಕು..

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •