ತೆಲುಗು ರಾಬರ್ಟ್ ಸಿನಿಮಾದ ಕಣ್ಣೇ ಅದಿರಿಂದಿ‌‌ ಹಾಡಿನ ಮೂಲಕ ಜನಮನ ಸೆಳೆದ ಮಂಗ್ಲಿ ಯಾರು ಗೊತ್ತಾ.‌?

ನಮಸ್ತೆ ಸ್ನೇಹಿತರೆ, ಸೋಶಿಯಲ್ ಮೀಡಿಯಾದಲ್ಲಿ‌ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದ ಒಂದು ಹಾಡು‌ ತುಂಬಾನೇ ವೈರಲ್ ಹಾಗಿದೆ.. ಇನ್ನು ಈ ಸಾಂಗ್ ಪೇಸ್ ಬುಕ್ ವಾಟ್ಸಪ್ ಯೂಟ್ಯೂಬ್ ಸೇರಿದಂತೆ ಹಲವಾರು ಅಪ್ಲಿಕೇಶನ್ ಗಳಲ್ಲಿ ‘ಕಣ್ಣೇ ಅದಿರಿಂದಿ’ ಸಾಂಗ್ ತುಂಬಾನೇ ಸದ್ದು ಮಾಡುತ್ತಿದ್ದೆ, ಆದರೆ ಈ ಹಾಡು ಇಷ್ಟೊಂದು ದೊಡ್ಡ ಪಟ್ಟಕ್ಕೆ ಹೋಗಲು ಕಾರಣ‌ ಕಾಯಕಿ ಮಂಗ್ಲಿ ಅವರು..

ಇನ್ನು ಕನ್ನಡದಲ್ಲಿ ಕಣ್ಣು ಹೊಡಿಯಾಕ ಹಾಡನ್ನ ಶ್ರೇಯಾ ಘೋಷಲ್ ಅವರು ಹಾಡಿದ್ದಾರೆ.. ಆದರೆ ಅದಕ್ಕಿಂತ ಹೆಚ್ಚಿನ ಮನರಂಜನೆ ಮಂಗ್ಲಿ ಅವರ ಧ್ವನಿಯಿಂದ ಸಿಕ್ಕಿದೆ.. ಈಗ ಕನ್ನಡದ ಜನರಿಗೆ ಮಂಗ್ಲಿ ಅವರ ಧ್ವನಿಯನ್ನು ತುಂಬಾನೇ ಇಷ್ಟ ಪಟ್ಟಿದ್ದಾರೆ, ರಾಬರ್ಟ್ ಸಿನಿಮಾದ ಈ ಒಂದು ಹಾಡಿನಿಂದ ಮಂಗ್ಲಿ ಅವರ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಸಿಕ್ಕಿದೆ.. ಇನ್ನು ರಾಬರ್ಟ್ ಸಿನಿಮಾದ ಈ ಒಂದು ಹಾಡಿನ ಮೂಲಕ ತುಂಬಾ ಫೇಮಸ್ ಆದಾ ಕಾಯಕಿ ಮಂಗ್ಲಿ ಯಾರು ಗೊತ್ತಾ.! ನೋಡೋಣ ಬನ್ನಿ.. ಮಂಗ್ಲಿ ಅವರು ಆಂದ್ರಪ್ರದೇಶದ ಜನಪದ ಕಾಯಕಿ ಇವರು ಕಾಯಕಿ ಮಾತ್ರ ಅಲ್ಲ, ನಿರೂಪಕಿ, ಪತ್ರಕರ್ತೆ ಹಾಗು ನಟಿ ಕೂಡ ಹೌದು..

ಇವರ ನಿಜವಾದ ಹೆಸರು ಸತ್ಯವತಿ ರಾಥೋಡ್, ಒಂದು ಟಿವಿ ಚಾನಲ್ ನಲ್ಲಿ ಧಾಮ್ ಧೂಮ್ ಅನ್ನೋ ಕಾರ್ಯಕ್ರಮ ಮಾಡುತ್ತಿದ್ದರು.. ಇದರಿಂದ ಮಾಟಗಾತಿ ಮಂಗ್ಲಿ ಎನ್ನುವ ಪಾತ್ರವನ್ನು ನಿರ್ವಹಿಸಿದರು. ‌ ಆ ಶೋ ತುಂಬಾನೇ ಫೇಮಸ್ ಹಾಗಿ, ಇವರಿಗೆ ಅದೇ ಹೆಸರು ಅಂದರೆ ಮಂಗ್ಲಿ ಅನ್ನೋ ಹೆಸರೇ ಬಂತು.. ಮಂಗ್ಲಿ ಅವರಿಗೆ ಈಗ 36 ವರ್ಷ ವಯಸ್ಸು, ಡಿಪ್ಲೋಮೋ ಕರ್ನಾಟಕ ಸಂಗೀತವನ್ನು ಮಂಗ್ಲಿ ಅವರು ಮಾಡಿದ್ದಾರೆ, ಇವರು ಹಾಡಿರೋದು ಕೇವಲ 8 ರಿಂದ 10 ಸಿನಿಮಾಗಳಲ್ಲಿ ಮಾತ್ರ, ಆದರೆ ಸಿನಿಮಾ ಬಿಟ್ಟು ಜನಪದ ಗೀತೆ, ಭಕ್ತಿಗೀತೆ, ಹಾಗೆಯೇ ಬೇರೆಬೇರೆ ಶೈಲಿಯ ಹಾಡುಗಳನ್ನು ಹಾಡುವುದರಲ್ಲಿ ಇವರು ತುಂಬಾನೇ ಫೇಮಸ್, ಇನ್ನು ಕೆಜಿಎಫ್ ಚಾಪ್ಟರ್ ಒಂದರಲ್ಲಿ ಮಂಗ್ಲಿ ಅವರು ಯಾಶ್ ಅವರನ್ನು ಸಂದರ್ಶನ ಮಾಡಿದರು..

ಅವರು ಮಾಡಿದ ತೆಲುಗು ಇಂಟರ್ ವ್ಯೂ ತುಂಬಾನೇ ಚೆನ್ನಾಗಿತ್ತು.. ಮಂಗ್ಲಿ ಅವರು ಯಶ್ ಜೊತೆ ಮಾಡಿದ ಇಂಟರ್ ವ್ಯೂ ವೀಡಿಯೋ ಯೂಟ್ಯೂಬ್ ನಲ್ಲಿ ತುಂಬಾನೇ ವೈರಲ್ ಆಗಿತ್ತು.. ಇನ್ನು 2018 ರಿಂದ ಮಂಗ್ಲಿ ಅವರು ಸಿನಿಮಾ ಹಾಡುಗಳು ಹಾಡಲು ಶುರುಮಾಡಿದರು, ಅಲ್ಲದೇ ಮಂಗ್ಲಿ ಅವರು ಅಲ್ಲುಅರ್ಜುನ್ ಸಿನಿಮಾದಲ್ಲಿ ಹಾಡಿದ ರಾಮುಲೋ ರಾಮುಲೋ ಹಾಡು‌ ತುಂಬಾನೇ ಫೇಮಸ್ ಕೂಡ ಆಗಿತ್ತು..

ಈ ಸಿನಿಮಾದ ನಂತರ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದ ಹಾಡು ಈಗ ದೊಡ್ಡ ಮಟ್ಟದಲ್ಲಿ ಫೇಮಸ್ ಹಾಗಿದೆ, ಇನ್ನು ರಾಬರ್ಟ್ ತೆಲುಗು ಸಿನಿಮಾದ ಹಾಡುಗಳ ಪೈಕಿ ಕಣ್ಣೆ ಅದಿರಿಂದ ಹಾಡು ಮಾತ್ರ ಹತ್ತಿ ಹೆಚ್ಚು ವೀಕ್ಷಣೆ ಪಡೆದಿದೆ.. ಇನ್ನು ಹೈದರಾಬಾದ್ ನಲ್ಲಿ ನಡೆದ ರಾಬರ್ಟ್ ಸಿನಿಮಾದ ಕಾರ್ಯಕ್ರಮದಲ್ಲಿ ಮಂಗ್ಲಿ ಸಿಕ್ಕ ಪಟ್ಟೆ ಫೇಮಸ್ ಆದರೂ, ಅವರ ಹಾಡು ತುಂಬಾನೇ ಸೂಪರ್ ಹಾಗಿತ್ತು,‌ ಆದೇ‌ ವೀಡಿಯೋ ಈಗ ಸಿಕ್ಕಪಟ್ಟೆ ವೈರಲ್ ಹಾಗಿದೆ.. ಈ ಹಾಡಿನ ಮೂಲಕ ತೆಲುಗು ಪ್ರೇಕ್ಷಕರಿಗೆ ಇಷ್ಟವಾಗಿದ ಮಂಗ್ಲಿ ಅವರು ಕನ್ನಡ ಪ್ರೇಕ್ಷಕರಿಗೂ ಕೂಡ ತುಂಬಾನೇ ಇಷ್ಟವಾಗಿದ್ದಾರೆ, ಸ್ನೇಹಿತರೆ ಕಾಯಕಿ ಮಂಗ್ಲಿ ಅವರು ಹಾಡಿದ ರಾಬರ್ಟ್ ಸಿನಿಮಾ‌ ತೆಲುಗು ಹಾಡು ನಿಮಗೆ ಇಷ್ಟ ಆಗಿದ್ರೆ ಇವರ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •