ಅಪಾಯಕಾರಿ-ರಸ್ತೆಗಳು

ಅಪಾಯಕಾರಿ ರಸ್ತೆಗಳು,ಅತ್ಯಂತ ಕೆಸರು ಮತ್ತು ಕಡಿದಾದ ಬೆಟ್ಟವನ್ನು ಬಸ್ ಹೇಗೆ ದಾಟುತ್ತದೆ ನೋಡಿ…

Home

ದಕ್ಷಿಣ ಭಾರತದ ರಾಜ್ಯಗಳ ಪೈಕಿ ಕರ್ನಾಟಕದ ರಸ್ತೆಗಳು ಅಪಾಯಕಾರಿ ಎಂದು ವರದಿಯೊಂದು ಹೇಳಿದೆ. 2017ರಲ್ಲಿ ಪ್ರತಿ 1 ಲಕ್ಷ ಮಂದಿಗೆ ಅಪಘಾತದಲ್ಲಿ ಮೃತಪಟ್ಟವರ ಪ್ರಮಾಣ ಕರ್ನಾಟಕದಲ್ಲಿ 16.9 ಇದೆ.

2019ರಲ್ಲಿ ಪ್ರಕಟಗೊಂಡ ವರದಿ ಪ್ರಕಾರ ಕಳೆದ 5 ವರ್ಷಗಳಲ್ಲಿ ಕರ್ನಾಟಕದಲ್ಲಿ 2.2 ಲಕ್ಷ ರಸ್ತೆ ಅಪಘಾತ ಪ್ರಕರಣಗಳು ದಾಖಲಾಗಿವೆ. ಸುಮಾರು 54,000 ಜನರು ಮೃತಪಟ್ಟಿದ್ದಾರೆ. 2018ರಲ್ಲಿ 41,707, 2017ರಲ್ಲಿ 42,542 ರಸ್ತೆ ಅಪಘಾತ ಪ್ರಕರಣಗಳು ಕರ್ನಾಟಕದಲ್ಲಿ ದಾಖಲಾಗಿದ್ದವು.

2021 ರಲ್ಲಿ ಭಾರತೀಯ ರಸ್ತೆಗಳು ಎಷ್ಟು ಕೆಟ್ಟದಾಗಿದೆ? - Quora

ಆಂಧ್ರ ಪ್ರದೇಶದಲ್ಲಿ 15.8, ತೆಲಂಗಾಣ 14.4, ಕೇರಳ 14 ಮತ್ತು ಗೋವಾ 11.1ರಷ್ಟು ಪ್ರಮಾಣವನ್ನು ಹೊಂದಿದೆ. ದೇಶದಲ್ಲಿಯೇ ಅಪಾಯಕಾರಿ ರಸ್ತೆಯನ್ನು ಹೊಂದಿರುವ ರಾಜ್ಯ ಉತ್ತರಾಖಂಡ. 1 ಲಕ್ಷ ಮಂದಿಗೆ ಮೃತಪಡುವವರ ಪ್ರಮಾಣ 26.3 ರಷ್ಟಿದೆ. ಕಳೆದ ಮೂರು ದಶಕಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕದ ರಸ್ತೆಗಳ ಸ್ಥಿತಿ ಬದಲಾಗಿದೆ. ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಕೇರಳಕ್ಕಿಂತ ಉತ್ತಮ ರಸ್ತೆಗಳನ್ನು ಕರ್ನಾಟಕ ಹೊಂದಿತ್ತು. ಆಗ ಗೋವಾ ಮಾತ್ರ ಕರ್ನಾಟಕಕ್ಕಿಂತ ಉತ್ತಮ ರಸ್ತೆ ಹೊಂದಿತ್ತು.

ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ದೇಶದ ರಸ್ತೆಗಳ ಕುರಿತು ವರದಿಯೊಂದನ್ನು ಬಿಡುಗಡೆ ಮಾಡಿದೆ. ಕಳೆದ 27 ವರ್ಷಗಳಲ್ಲಿ ಪ್ರತಿ ವರ್ಷ ಸಾವಿರಕ್ಕೂ ಹೆಚ್ಚು ಮಂದಿ ರಸ್ತೆ ಅಪಘಾತದಿಂದ ಸಾವನ್ನಪ್ಪುತ್ತಿದ್ದಾರೆ ಎಂದು ವರದಿ ಹೇಳಿದೆ.
 

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...