ಈ ದಿನಾಂಕದಲ್ಲಿ ಹುಟ್ಟಿದ ಹೆಣ್ಣುಮಗಳು ಬೇಗನೆ ಶ್ರೀಮಂತರಗ್ತಾರಂತೆ!

Home Kannada News/ಸುದ್ದಿಗಳು

ಮನುಷ್ಯನ ಭವಿಷ್ಯವನ್ನು ಜ್ಯೋತಿಷ್ಯ, ಹಸ್ತ ರೇಖೆಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರ ಎಂಬ ಮೂರು ಶಾಸ್ತ್ರಗಳು ತಿಳಿಸುತ್ತವೆ. ಜ್ಯೋತಿಷಶಾಸ್ತ್ರ ಮತ್ತು ರೇಖಾಶಾಸ್ತ್ರ ಭವಿಷ್ಯವನ್ನು ಮಾತ್ರ ತಿಳಿಸುತ್ತವೆ. ಆದರೆ ಸಂಖ್ಯಾಶಾಸ್ತ್ರ ಭವಿಷ್ಯವನ್ನು ಸ್ವಾಗತಿಸಲು ಸಲಹೆ ನೀಡುತ್ತದೆ. ಸಂಖ್ಯೆಗಳು ಇಲ್ಲದೆ ಪ್ರಪಂಚದಲ್ಲಿ ಯಾವ ಕಾರ್ಯವೂ ನಡೆಯುವುದಿಲ್ಲ. ಎಲ್ಲ ಕಾಲಗಳಲ್ಲಿಯೂ ಲೋಕದ ಸೃಷ್ಟಿ ಸ್ಥಿತಿ ಲಯಗಳನ್ನು ತಿಳಿಸುವುದು ಸಂಖ್ಯೆಗಳ ಮೂಲಕವೇ.

ಕೃತಯುಗ, ತೇತ್ರಾಯುಗ, ದ್ವಾಪರ ಯುಗ ಮತ್ತು ಕಲಿಯುಗ ಎಂಬುದಾಗಿ ಕಾಲವನ್ನು ನಾಲ್ಕು ಭಾಗಗಳಾಗಿ ವಿಭಾಗಿಸಿ ಒಂದೊಂದು ಯುಗಗಳಿಗೂ ವರ್ಷಗಳನ್ನು ನಿಗದಿಪಡಿಸಿ ಕೊನೆಗೆ ಪ್ರಳಯ ಎಂದು ಲೆಕ್ಕ ಮಾಡಿರುವುದು ಸಂಖ್ಯೆಗಳ ಆಧಾರದಿಂದಲೇ. ಬೆಳಗ್ಗೆಯಿಂದ ರಾತ್ರಿ ಮಲಗುವರೆಗೂ ಪ್ರಪಂಚದ ಎಲ್ಲ ಕಾರ್ಯಗಳೂ ಸಂಖ್ಯೆಗಳನ್ನು ಅನುಸರಿಸಿಯೇ ಮುಂದುವರಿಯುತ್ತವೆ. ಸೊನ್ನೆಗೆ ಸ್ವತಃ ಸ್ಥಾನಮಾನ ಇಲ್ಲ. ಬೇರೊಂದು ಸಂಖ್ಯೆಯೊಂದಿಗೆ ಸೇರಿದರೆ ಅದಕ್ಕೆ ಬೆಲೆ ಬರುತ್ತದೆ. ಈ ಲೇಖನದಲ್ಲಿ ನಾವು ಯಾವ ದಿನಾಂಕದಂದು ಹುಟ್ಟಿದ ಹೆಣ್ಣುಮಕ್ಕಳು ಹೆಚ್ಚು ಶ್ರೀಮಂತರಾಗುತ್ತಾರೆ ಎನ್ನುವುದನ್ನು ತಿಳಿಯೋಣ.

ನಭೋಮಂಡಲದಲ್ಲಿ ಗ್ರಹಗಳು ಒಂಭತ್ತು ಹಾಗೂ ಅದೇ ರೀತಿ ಸಂಖ್ಯೆಗಳೂ ಸಹ ಒಂಭತ್ತು. ಈ ಒಂಭತ್ತು ಎನ್ನುವ ಸಂಖ್ಯೆ ಮನುಷ್ಯನ ಜೀವನದಲ್ಲಿ ಸಾಕಷ್ಟು ವಿಶೇಷವನ್ನು ಉಂಟು ಮಾಡುತ್ತದೆ. ವಿವಾಹ , ಆರೋಗ್ಯ ಮಾತ್ರವಲ್ಲದೆ ಇನ್ನೂ ಹಲವಾರು ವಿಷಯಗಳ ಬಗ್ಗೆ ಈ ಸಂಖ್ಯಾಶಾಸ್ತ್ರದ ಸಹಾಯದಿಂದ ತಿಳಿದುಕೊಳ್ಳಬಹುದು ಎಂದು ಸಂಖ್ಯಾ ಶಾಸ್ತ್ರದ ನಿಪುಣರು ಹೇಳುತ್ತಾರೆ.ಸಂಖ್ಯೆಗಳು ಎಷ್ಟೇ ಇದ್ದರೂ ಅವೆಲ್ಲವನ್ನೂ ಕುಡಿದಾಗ ಒಂಬತ್ತರ ಒಳಗೇ ಬರುತ್ತದೆ. ಉದಾಹರಣೆಗೆ ನೋಡುವುದಾದರೆ , ಇಪ್ಪತ್ತು (20) ತೆಗೆದುಕೊಂಡರೆ ಸೊನ್ನೆಗೆ ಯಾವುದೇ ಬೆಲೆ ಇಲ್ಲ ಹಾಗಾಗಿ ಬರೀ ಎರಡು ಮಾತ್ರ ಆಗುತ್ತದೆ. ಇದೇ ರೀತಿ ಬೇರೆ ಸಂಖ್ಯೆಗಳು ಇದ್ದರೂ ಸಹ ಹೀಗೆ ಒಂಬತ್ತರ ಒಳಗೇ ಬರುತ್ತದೆ. ಈ ಶಾಸ್ತ್ರವನ್ನು ನ್ಯೂಮರಾಲಜಿ ಅಥವಾ ಸಂಖ್ಯಾಶಾಸ್ತ್ರ ಎಂದು ಹೇಳುತ್ತಾರೆ.

ಈ ವಿಷಯದ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದೇ ಇರುತ್ತದೆ. ವಿಶೇಷವಾಗಿ ಶಾಸ್ತ್ರದ ಪ್ರಕಾರ ನೋಡುವುದಾದರೆ, ಒಂದು ಸಂಖ್ಯೆಗೆ ರವಿ ,ಸಂಖ್ಯೆ 4ಕ್ಕೆ ರಾಹು ,7 ಕೇತು ,2 ಚಂದ್ರ ,5ಬುಧ ,8ಶನಿ, ಮೂರನೇ ಸ್ಥಾನ ಗರುಡ, 6ನೇ ಸ್ಥಾನ ಶುಕ್ರ ಹಾಗೂ ಒಂಭತ್ತನೇ ಸ್ಥಾನ ಕುಜ ಎಂದು ನವಗ್ರಹಗಳಿಗೆ ಆಯಾ ಸಂಖ್ಯೆಗಳಿಗೆ ಅನುಗುಣವಾಗಿ ಸ್ಥಾನವನ್ನು ನೀಡಲಾಗಿದೆ. ಹುಡುಗಿಯರ ಹೆಸರಿನಿಂದ ಅವರ ಸಂಖ್ಯೆ ಏನೂ ಎಂದು ನೋಡಿ ಹೆಸರಿನಲ್ಲಿರುವ ಎಲ್ಲಾ ಅಂಕೆಗಳನ್ನು ಸೇರಿಸಿ ಲೆಕ್ಕ ಹಾಕಿ ನೋಡಿದಾಗ ಅವರ ಅಂಕೆ ಒಂದು ಎಂದು ಬಂದಾಗ ಅವರಿಗೆ ಸೂರ್ಯ ಅಧಿಪತಿ ಆಗಿರುತ್ತಾನೆ.

ಇಂತಹ ಹೆಣ್ಣುಮಕ್ಕಳಿಗೆ ನಾಯಕತ್ವದ ಗುಣ ಹೆಚ್ಚಾಗಿ ಇರುತ್ತದೆ. ಎಲ್ಲರ ಮಾತಿಗೂ ಬೆಲೆ ಕೊಟ್ಟು ಎಲ್ಲರನ್ನೂ ಸಮಾನವಾಗಿ ಕಾಣುತ್ತಾರೆ. ಅವರ ಸುತ್ತಮುತ್ತಲಿನ ವ್ಯಕ್ತಿಗಳ ಸಂತೋಷಕ್ಕೆ ಕೂಡಾ ಕಾರಣರಾಗುತ್ತಾರೆ. ಭಾನುವಾರ ಸಕ್ಕರೆಯಿಂದ ಮಾಡಿದ ಪದಾರ್ಥಗಳನ್ನು ತಿನ್ನಲು ಬಯಸುತ್ತಾರೆ. ಈ ಒಂದು ಅಂಕೆಯನ್ನು ಹೊಂದಿದ ಹುಡುಗಿಯರು ಪ್ರತೀ ದಿನ ಸೂರ್ಯ ನಮಸ್ಕಾರ ಮಾಡಿದರೆ ಇವರಿಗೆ ಬಹಳಷ್ಟು ಒಳ್ಳೆಯದು ಎಂದು ಹೇಳಲಾಗುತ್ತದೆ.

ಇನ್ನೂ ಯಾವುದೇ ತಿಂಗಳಲ್ಲಿ ಹುಟ್ಟಿದ ಹೆಣ್ಣುಮಕ್ಕಳ ದಿನಾಂಕ ಎರಡು ಆಗಿದ್ದರೆ ಅವರಿಗೆ ಚಂದ್ರ ಅಧಿಪತಿ ಆಗಿರುತ್ತಾನೆ. ಇಂತಹ ಹೆಣ್ಣುಮಕ್ಕಳು ಹೆಚ್ಚು ಶಾಂತವಾಗಿ ಇರುತ್ತಾರೆ ಹಾಗೂ ಅಷ್ಟೇ ಅಲ್ಲದೆ ಎಂಥದ್ದೇ ಕಠಿಣ ಪರಿಸ್ಥಿತಿ ಬಂದರೂ ಸಹ ಅದನ್ನು ಸುಲಭಾವಾಗಿ ಎದುರಿಸುತ್ತಾರೆ. ಇವರು ಬಹಳಷ್ಟು ಆನಂದವಾಗಿ ಇರುವುದು ಮಾತ್ರವಲ್ಲದೆ ಅವರ ಜೀವನ ಸಂಗಾತಿಯನ್ನು ಪ್ರೀತಿಯಿಂದ ಕಾಣಲು ಇಷ್ಟ ಪಡುತ್ತಾರೆ. ಹುಟ್ಟಿದ ದಿನಾಂಕ ಮೂರು ಆಗಿದ್ದರೆ ಆ ಹೆಣ್ಣುಮಕ್ಕಳು ಹೆಚ್ಚು ಧೈರ್ಯವಂತೇ ಹಾಗೂ ಧನವಂತರೂ ಆಗಿರುತ್ತಾರೆ.

ಮೂರು ಅಂಕೆ ಗುರುಗ್ರಹವನ್ನು ಸೂಚಿಸುತ್ತದೆ ಹಾಗಾಗಿ ಇವರಲ್ಲಿ ಸಹ ನಾಯಕತ್ವದ ಗುಣ ಇರುತ್ತದೆ. ಇವರ ಜೀವನ ಸಂಗಾತಿ ಕೂಡಾ ಇವರನ್ನು ಬಹಳ ಇಷ್ಟ ಪಡುತ್ತಾರೆ. ಹುಟ್ಟಿದ ದಿನಾಂಕ ನಾಲ್ಕು ಆಗಿದ್ದರೆ ಇದು ರಾಹುವನ್ನು ಸೂಚಿಸುತ್ತದೆ. ಈ ದಿನಾಂಕದಂದು ಹುಟ್ಟಿದ ಹೆಣ್ಣುಮಕ್ಕಳು ತಮ್ಮ ಅಲಂಕಾರಕ್ಕೆ ಹೆಚ್ಚು ಗಮನ ನೀಡುತ್ತಾರೆ. ಜೀವನ ಸಂಗಾತಿಯ ಜೊತೆಗೆ ಪ್ರೇಮದಿಂದ ಇರುತ್ತಾರೆ ಇಂತಹ ಸಂದರ್ಭ ಬಂದಾಗ ಕೂಡಾ ತಮ್ಮ ಸಂಗಾತಿಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಮಾಡಿಕೊಳ್ಳುತ್ತಾರೆ.

ಇನ್ನೂ ಹುಟ್ಟಿದ ದಿನಾಂಕ ಐದು ಆಗಿದ್ದರೆ , ಇವರಿಗೆ ಬುಧ ಗ್ರಹದ ಪ್ರಭಾವ ಇರುತ್ತದೆ. ಇವರು ಹೆಚ್ಚು ಅಂದವಾಗಿ ಕಾಣುತ್ತಾರೆ ಆದರೂ ಇವರ ಆಲೋಚನೆ ವಿಚಿತ್ರವಾಗಿರುತ್ತದೆ ಹಾಗೂ ಇವರನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾಗಿ ಇರುತ್ತದೆ. ಇವರೂ ಸಹ ತನ್ನ ಜೀವನ ಸಂಗಾತಿಯನ್ನು ಬಹಳ ಸ್ನೇಹದಿಂದ ಹಾಗೂ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಇನ್ನೂ ದಿನಾಂಕ ಆರರಂದು ಹುಟ್ಟಿದ ಹೆಣ್ಣುಮಕ್ಕಳು ಸಹ ಇವರು ಸ್ವಲ್ಪ ಹೆಚ್ಚೇ ಭಾವನಾ ಜೀವಿ ಆಗಿರುತ್ತಾರೆ.ಎಲ್ಲರನ್ನೂ ಬೇಗ ನಂಬುತ್ತಾರೆ. ಇವರಿಗೆ ಶುಕ್ರ ಅಧಿಪತಿಯಾಗಿರುತ್ತಾನೆ ಹಾಗೂ ಇವರ ಸಂಗಾತಿಯ ಜೊತೆ ಉತ್ತಮವಾಗಿ ಇರುತ್ತಾರೆ. ಹುಟ್ಟಿದ ದಿನಾಂಕ ಏಳು ಆಗಿದ್ದರೆ ಅಂತಹ ಹೆಣ್ಣುಮಕ್ಕಳು ತುಂಬಾ ಮೃದು ಸ್ವಭಾವ ಹೊಂದಿರುತ್ತಾರೆ. ತನ್ನ ಸಂಗಾತಿ ತನ್ನನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಬಯಸುತ್ತಾರೆ.

ಇನ್ನೂ ಹುಟ್ಟಿದ ದಿನಾಂಕ ಒಂಭತ್ತು ಆಗಿದ್ದರೆ ಈ ಹೆಣ್ಣುಮಕ್ಕಳಿಗೆ ಶನಿ ಗ್ರಹದ ಅನುಗ್ರಹ ಹೆಚ್ಚಾಗಿ ಇರುತ್ತದೆ. ಪ್ರೀತಿ ತುಸು ಹೆಚ್ಚೇ ಆದರೂ ಏನೇ ವಿಷಯ ಇದ್ದರೂ ಅದನ್ನು ಮೂಗಿನ ನೇರಕ್ಕೆ ಮಾತನಾಡುತ್ತಾರೆ. ಯಾವುದಾದರೂ ತಿಂಗಳಲ್ಲಿ ಒಂಭತ್ತನೇ ತಾರೀಕಿನಂದು ಹುಟ್ಟಿದರೆ ಇದು ಮಂಗಳ ಗ್ರಹವನ್ನು ಸೂಚಿಸುತ್ತದೆ. ಇಂತಹ ಹೆಣ್ಣುಮಕ್ಕಳು ಆಂಜನೇಯ ಸ್ವಾಮಿಯ ಭಕ್ತರು ಆಗಿದ್ದು ತಮ್ಮ ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯಲು ಇಷ್ಟ ಪಡುತ್ತಾರೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...