ನಿಖಿಲ್ ಗೌಡ ಅವರು ಸದ್ಯ ರಾಜ್ಯ ಜೆಡಿಎಸ್ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷರಾಗಿರುವುದರಿಂದ ಪಕ್ಷ ಸಂಘಟನೆಗಾಗಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದು ಬೂತ್ ಮಟ್ಟದ ಕಾರ್ಯಕರ್ತರಿಂದಲೂ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಿ ಪಕ್ಷದ ಬಲವರ್ಧನೆಗಾಗಿ ಪಣ ತೊಟ್ಟಿದ್ದಾರೆನ್ನಬಹುದು‌… ಇನ್ನು ಈ ಎಲ್ಲಾ ಜಂಜಾಟದ ನಡುವೆ ವ್ಯಯಕ್ತಿಕ ವಿಚಾರದಲ್ಲಿ ಸಂತೋಷದ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ..

Revati, Nikhil

ಹೌದು ರಾಜ್ಯ ಪ್ರವಾಸದಲ್ಲಿರುವ ನಿಖಿಲ್ ಅವರು ಪಕ್ಷ ಸಂಘಟನೆಗೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದು ಈ ಸಮಯದಲ್ಲಿ ಡಿ ಕೆ ಶಿವಕುಮಾರ್ ಅವರಿಗೂ ಸಹ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದರು.. ಹೌದು ಕನಕಪುರದಲ್ಲಿಯೂ ಜೆಡಿಎಸ್ ಮತಗಳಿವೆ.. ನಮ್ಮ ಕ್ಷೇತ್ರಕ್ಕೆ ಎಂಟ್ರಿ ಆದರೆ ನಾವು ಕೂಡ ನಿಮ್ಮಗಳ ಕ್ಷೇತ್ರಕ್ಕೆ ಎಂಟ್ರಿ ಆಗಬೇಕಾಗುತ್ತದೆ.. ಈ ಬಾರಿ ಅಲ್ಲಿಗೂ ಬಲಿಷ್ಠ ಅಭ್ಯರ್ಥಿಯನ್ನು ಹಾಕಲಾಗುವುದು ಎಂದಿದ್ದರು.. ಇನ್ನು ಮೊನ್ನೆಯಷ್ಟೇ ತಮ್ಮ ಹಾಗೂ ಪ್ರಜ್ವಲ್ ಅವರ ನಡುವೆ ಮನಸ್ತಾಪ ಇದೆ ಎನ್ನಲಾದ ವಿಚಾರವನ್ನು‌ ಮಾತನಾಡಿ ನಮ್ಮಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ.. ಬೇರೆಯವರ ಬೇಳೆ ಬೇಯಿಸಿಕೊಳ್ಳಲು ಈ ರೀತಿ ಸುದ್ದಿ ಹಬ್ಬಿಸುತ್ತಾರೆ.‌ ಈ ಬಗ್ಗೆ ಮತ್ತೊಮ್ಮೆ ಕೇಳಿದರೆ ನಾನು ಪ್ರತಿಕ್ರಿಯೆ ನೀಡೋದಿಲ್ಲ ಎಂದಿದ್ದರು..

Revati-Nikhil

ಇನ್ನೂ ಇದೆಲ್ಲದರ ನಡುವೆ ಕುಟುಂಬಕ್ಕೂ ಸಮಯ ನೀಡುವ ನಿಖಿಲ್ ಅವರು ಹೊಸ ವರ್ಷದಲ್ಲಿ ಪತ್ನಿಯೊಟ್ಟಿಗಿನ ಫೋಟೋ ಹಂಚಿಕೊಂಡು ಅಭಿಮಾನಿಗಳಿಗೆ ಸ್ನೇಹಿತರಿಗೆ ಹೊಸ ವರ್ಷದ ಶುಭಾಶಯ ತಿಳಿಸಿದ್ದರು.. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಇರುವ ನಿಖಿಲ್ ಅವರು ಆಗಾಗ ಪತ್ನಿ ಜೊತೆಗಿನ ಫೋಟೋ ಹಂಚಿಕೊಳ್ಳುತ್ತಿದ್ದು ಆ ಫೋಟೋಗಳು ಸಖತ್ ವೈರಲ್ ಕೂಡ ಆಗುತಿತ್ತು.. ಆದರೆ ಬಹಳ ದಿನಗಳ ಬ್ರೇಕ್ ನ ನಂತರ ರೇವತಿ ಅವರ ಜೊತೆ ನಿಖಿಲ್ ಅವರು ಹೊಸ ವರ್ಷಕ್ಕೆ ಫೋಟೋ ಹಂಚಿಕೊಂಡಿದ್ದು ಎಲ್ಲರಿಗೂ ಶುಭವಾಗಲೆಂದು ಹಾರೈಸಿದ್ದು ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.. ಇನ್ನು ಇದೀಗ ರಾಜಕೀಯದ ನಡುವೆ ಮತ್ತೊಂದು ವಿಚಾರವಾಗಿ ಹೊಸ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ..

Revati-Nikhil

ರಾಜಕೀಯದ ಜೊತೆಜೊತೆಗೆ ಸಿನಿಮಾರಂಗದಲ್ಲಿಯೂ ಸಕ್ರಿಯರಾಗಿರುವ ನಿಖಿಲ್ ಅವರ ಕೈಯಲ್ಲೀಗ ಮೂರ್ನಾಲ್ಕು ಸಿನಿಮಾಗಳು ಇದ್ದು ರೈಡರ್ ಸಿನಿಮಾದ ಚಿತ್ರೀಕರಣದಲ್ಲಿಯೂ ಪಾಲ್ಗೊಂಡಿದ್ದು ಎಲ್ಲಾ ಕಡೆ ಬ್ಯುಸಿ ಎನ್ನಬಹುದು..

ಇದೀಗ ತಮ್ಮ ಮುಂದಿನ ಸಿನಿಮಾದ ಬಗ್ಗೆ ಮಾಹಿತಿ‌ ನೀಡಿರುವ ನಿಖಿಲ್ ಅವರು ತಮ್ಮ ಹುಟ್ಟುಹಬ್ಬದ ದಿನದಂದು ಅಭಿಮಾನಿಗಳಿಗೆ ತಮ್ಮ ಸಿನಿಮಾದ ಟೀಸರ್ ಅನ್ನು ಉಡುಗೊರೆಯಾಗಿ ನೀಡುತ್ತಿದ್ದಾರೆ.. ಹೌದು ಇದೇ ಜನವರಿ 22 ನೇ ತಾರೀಕಿನಂದು ನಿಖಿಲ್ ಕುಮಾರಸ್ವಾಮಿ ಅವರ ಹುಟ್ಟುಹಬ್ಬವಿದ್ದು ಅದೇ ದಿನ ರೈಡರ್ ಸಿನಿಮಾದ ಟೀಸರ್ ಅನ್ನು ಬಿಡುಗಡೆ ಮಾಡಲಾಗುತ್ತಿದ್ದು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂತೋಷ ಹಂಚಿಕೊಂಡಿದ್ದಾರೆ..

ಇನ್ನು ಸದ್ಯ ಈ ತಿಂಗಳು ಸಾಲು ಸಾಲು ಸೆಲಿಬ್ರೆಟಿಗಳ ಹುಟ್ಟುಹಬ್ಬವಿದ್ದು ಎಲ್ಲರೂ ಸಹ ಕೊರೊನಾ ಕಾರಣದಿಂದಾಗಿ ಅದ್ಧೂರಿ ಹುಟ್ಟುಹಬ್ಬಕ್ಕೆ ಬ್ರೇಕ್ ಹಾಕಿ ಅಭಿಮಾನಿಗಳು ಯಾರೂ ಸಹ ಮನೆ ಬಳಿ ಬರಬೇಡಿ ಎಂದು ಮನವಿ‌ ಮಾಡಿಕೊಂಡಿದ್ದಾರೆ.. ಅದಾಗಲೇ ಯಶ್ ಅವರು ಸಹ ಕುಟುಂಬದ ಜೊತೆ ಸರಳ ಹುಟ್ಟುಹಬ್ಬ ಆಚರಿಸಿಕೊಂಡಿದ್ದು.. ದರ್ಶನ್ ಅವರೂ ಸಹ ಹುಟ್ಟುಹಬ್ಬದ ದಿನ ಮನೆಯಲ್ಲಿ ಇರೋದಿಲ್ಲವೆಂದು ಸಾಮಾಜಿಕ ಜಾಲತಾಣದಲ್ಲಿ ಲೈವ್ ಬರುವ ಮೂಲಕ ತಿಳಿಸಿದ್ದಾರೆ..

ಇನ್ನು ಇದೀಗ ನಿಖಿಲ್ ಅವರು ಸಹ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಕುಟುಂಬದ ಜೊತೆ ಆಚರಿಸಿಕೊಳ್ಳಲು ನಿರ್ಧಾರ ಮಾಡಿದ್ದು ರೈಡರ್ ಸಿನಿಮಾದ ಟೀಸರ್ ಅನ್ನು ಅಭಿಮಾನಿಗಳಿಗಾಗಿ ಬಿಡುಗಡೆ ಮಾಡಲಿದ್ದಾರೆ..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •