Renukaacharya

ರೇಣುಕಾಚಾರ್ಯ ಸಕತ್ ಸ್ಟೆಪ್ ವೀಡಿಯೋ ವೈರಲ್..!

Home

ಶಾಸಕ ಎಂಪಿ ರೇಣುಕಾಚಾರ್ಯ ಅವರು ತಮ್ಮ 69 ನೇ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಭರ್ಜರಿ ಸ್ಟೆಪ್ ಹಾಕಿ ಜನರನ್ನ ರಂಜಿಸಿರೋ ವೀಡಿಯೋ ಸಕತ್ ವೈರಲ್ ಆಗಿದೆ.

ದಾವಣಗೆರೆ ಜಿಲ್ಲೆ ಹೊನ್ನಾಳಿಯ ಅಗಳ ಮೈದಾನದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಭರ್ಜರಿ ಸ್ಟೆಪ್ ಹಾಕುವುದರ ಮೂಲಕ ರೇಣುಕಾಚಾರ್ಯ ರಂಜಿಸಿದ್ದಾರೆ. ರೇಣುಕಾಚಾರ್ಯ ಅವರ ಅಭಿಮಾನಿಗಳು ಮಧ್ಯಾಹ್ನ ಅಭಿನಂದನಾ ಸಮಾರಂಭ ಹಾಗೂ ರಾತ್ರಿ ಮನೋರಂಜನಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ವೇಳೆ ಪ್ರೇಕ್ಷಕರಾಗಿಯೇ ಇದ್ದ ರೇಣುಕಾಚಾರ್ಯ, ನಂತರಗಾಯಕರು ಹೇಳಿದ ಸಾಂಗ್ ಗೆ ಎದ್ದು ಸ್ಟೇಜ್ ಮೇಲೆ ಬಂದು  ಭರ್ಜರಿ ಸ್ಟೆಪ್ ಹಾಕಿದ್ದಾರೆ.

ಈ ವೇಳೆ ಕುಟುಂಬ ಸದಸ್ಯರಾದ ಹೆಂಡತಿ, ಮಕ್ಕಳು ಹಾಗೂ ಅಭಿಮಾನಿಗಳು ಕೂಡ ರೇಣುಕಾಚಾರ್ಯ ಅವರ ಜೊತೆ ಸ್ಟೆಪ್ ಹಾಕಿ ನೆರೆದಿದ್ದವರಿಗೆ ಮನೋರಂಜನೆ ನೀಡಿದರು.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...