ಸ್ಯಾಂಡಲ್ವುಡ್ ನಲ್ಲಿ ಕೊರೊನಾ ನಂತರದಲ್ಲಿ ಇದೀಗ ದೊಡ್ಡ ಸ್ಟಾರ್ ಗಳ ಸಿನಿಮಾಗಳು, ಬಹು ನಿರೀಕ್ಷಿತ ಸಿನಿಮಾಗಳು, ಚಿತ್ರೀಕರಣ ಮುಗಿದು ಸಿನಿಮಾ ಥಿಯೇಟರ್ ಗಳ ಓಪನ್ ಗೆ ಕಾಯುತ್ತಿದ್ದ ಭರ್ಜರಿ ಸಿನಿಮಾಗಳು ಇದೀಗ ತೆರೆಗೆ ಬರಲು ಸಜ್ಜಾಗಿವೆ. ಕಳೆದ ಒಂದು ವರ್ಷದಿಂದಲೂ ತಮ್ಮ ಅಭಿಮಾನ ನಟರ ಸಿನಿಮಾಗಳನ್ನು ನೋಡಲಾಗದೆ ಬೇಸತ್ತಿದ್ದ ನಾಡಿನ ಸಿನಿ ಪ್ರೇಮಿಗಳ ಮನಸ್ಸನ್ನು ತಣಿಸಲು, ಸಿನಿಮಾಗಳೇ ಮನೋರಂಜನೆಯ ಪ್ರಮುಖ ಮಾದ್ಯಮವೆಂದು ಅದಿಲ್ಲದೇ ಬೇಸರ ಗೊಂಡಿದ್ದವರಿಗೂ ಕೂಡಾ ಇದೀಗ ಖುಷಿಯನ್ನು ನೀಡಲು ಸಾಲು ಸಾಲಾಗಿ ಸ್ಟಾರ್ ನಟ ಸಿನಿಮಾಗಳು ತೆರೆಗೆ ಬರಲು ಸಜ್ಜಾಗುತ್ತಿದ್ದು, ಎಲ್ಲಾ‌ ಸಿನಿಮಾಗಳ ಬಿಡುಗಡೆಯ ದಿನಾಂಕ ಕೂಡಾ ಬಹುತೇಕ ಘೋಷಣೆ ಕೂಡಾ ಆಗಿದ್ದು ಅಭಿಮಾನಿಗಳಿಗೆ ಬಹಳ ಖುಷಿಯನ್ನು ನೀಡುತ್ತಲಿದೆ.

Release-date-1

ಮೊದಲಿಗೆ ಫೆಬ್ರವರಿ 19 ಕ್ಕೆ ಆ್ಯಕ್ಷನ್ ಪ್ರಿನ್ಸ್ ಧೃವ ಸರ್ಜಾ ಹಾಗೂ ಅವರ ತಂಡದ ಮೂರುವರೆ ವರ್ಷಗಳ ಶ್ರಮದ ಫಲಿತಾಂಶವಾದ ಪೊಗರು ಸಿನಿಮಾ ಬಿಡುಗಡೆ ಆಗುತ್ತಿದೆ. ಅನಂತರ ಮಾರ್ಚ್ 11 ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ರಾಬರ್ಟ ತೆರೆಗೆ ಬರಲಿದ್ದು ಅವರ ಅಭಿಮಾನಿಗಳಿಗೆ ಇದು ಸಂಭ್ರಮವನ್ನು ನೀಡುವುದರಲ್ಲಿ ಅನುಮಾನವೇ ಇಲ್ಲ. ಇದಾದ ನಂತರ ಸ್ಯಾಂಡಲ್ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಬಹುನಿರೀಕ್ಷಿತ ಯುವರತ್ನ ಸಿನಿಮಾ ಏಪ್ರಿಲ್ 1 ಕ್ಕೆ ತೆರೆಗೆ ಅಪ್ಪಳಿಸಲಿದೆ. ಹೀಗೆ ಒಂದರ ನಂತರ ಇನ್ನೊಂದು ಸ್ಟಾರ್ ನಟರ ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿವೆ.
Release-date-1

ಅನಂತರ ದುನಿಯಾ ವಿಜಯ್ ಅವರು ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಹಾಗೂ ತಾನೇ ನಾಯಕನೂ ಆಗಿರುವ ಬಹು ನಿರೀಕ್ಷಿತ ಸಿನಿಮಾ ಸಲಗ ತೆರೆಗೆ ಬರಲು ಸಜ್ಜಾಗಿದೆ. ಏಪ್ರಿಲ್ 15 ಕ್ಕೆ ಸಲಗ ಸಿನಿಮಾ ತೆರೆಯ ಮೇಲೆ ಬರಲಿದೆ ಎನ್ನಲಾಗಿದೆ. ಕೆ.ಪಿ.ಶೀಕಾಂತ್ ನಿರ್ಮಾಣದ ಸಲಗ ಸಿನಿಮಾ ಮೂಲಕ ನಟ ದುನಿಯಾ ವಿಜಯ್ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ ಕೂಡಾ ಬಡ್ತಿ ಪಡೆಯುತ್ತಿದ್ದಾರೆ.

Release-date-1

ಸಲಗ ನ ನಂತರ ಬೆಳ್ಳಿ ತೆರೆಯ ಮೇಲೆ ಅಬ್ಬರಿಸಲು ಬರಲಿರುವುದು ಸ್ಯಾಂಡಲ್ವುಡ್ ನ ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್ ಅವರ ಕೋಟಿಗೊಬ್ಬ-3 ಸಿನಿಮಾ. ಸುದೀಪ್ ಅವರ ಪ್ರತಿ ಸಿನಿಮಾ ಕೂಡಾ ಬಹಳಷ್ಟು ವಿಶೇಷಗಳನ್ನು, ಅದ್ದೂರಿ ತಾರಾಗಣ, ಭರ್ಜರಿ ಕಥೆ ಹೀಗೆ ಸೂಪರ್ ಹಿಟ್ ಸಿನಿಮಾದ ಎಲ್ಲಾ ಕಂಟೆಂಟ್ ಗಳನ್ನು ಹೊಂದಿರುತ್ತದೆ. ಸುದೀಪ್ ಅವರ ಅಭಿಮಾನಿಗಳು ಕೂಡಾ ಕಾಯುತ್ತಿದ್ದ ಅವರ ಸಿನಿಮಾ ಕೋಟಿಗೊಬ್ಬ-3 ಏಪ್ರಿಲ್ 29 ಕ್ಕೆ ಬಿಡುಗಡೆ ಆಗಲಿದೆ.

Release-date-1

ನಂತರ ಸ್ಯಾಂಡಲ್ವುಡ್ ನಲ್ಲೊಂದು ಕ್ರೇಜ್ ಹುಟ್ಟು ಹಾಕಿ ತೆರೆಗೆ ಯಾವಾಗ ಬರಲಿದೆ ಎನ್ನುವ ಬಹು ನಿರೀಕ್ಷೆಯನ್ನು, ಕುತೂಹಲವನ್ನು ಉಂಟು ಮಾಡಿರುವ ಸಿನಿಮಾ ಎಂದರೆ ಅದು ನಿರ್ದೇಶಕ ಹರ್ಷ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಅಭಿನಯದ ಭಜರಂಗಿ-2. ಈ ಸಿನಿಮಾ ಕೂಡಾ ಹಲವು ವಿಶೇಷಗಳನ್ನು ಹೊತ್ತು ತರುತ್ತಿದ್ದು ಟೀಸರ್ ನಿಂದಲೇ ಒಂದು ಅಬ್ಬರವನ್ನು ಸೃಷ್ಟಿಸಿದೆ. ವಿಶೇಷ ಕಥಾ ಹಂದರದೊಂದಿಗೆ ನಿರ್ಮಾಣವಾಗಿರುವ ಈ ಸಿನಿಮಾ ಮೇ 14 ಕ್ಕೆ ತೆರೆಯ ಮೇಲೆ ಬರಲಿದೆ ಎನ್ನಲಾಗಿದೆ‌.

Release-date-1

Release-date-1

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •