ಅಪ್ಪು

ಶೂಟಿಂಗ್ ಗೆ ಲೇಟಾಗಿ ಬಂದ ಸೇಟ್ ಬಾಯ್ ಗೆ ಅಪ್ಪು ಮಾಡಿದ ಸಹಾಯವೇನು ಗೊತ್ತೇ! ಇದು ಯಾರಿಗೂ ತಿಳಿದಿಲ್ಲ..

Home

ಪ್ರಿಯ ವೀಕ್ಷಕರೆ ನಗುಮೊಗದ ಸರದಾರ, ಅಭಿಮಾನಿಗಳ‌ ಪಾಲಿನ ಅಪ್ಪು, ವಿದ್ಯಾರ್ಥಿಗಳ ಪಾಲಿನ ಯುವರತ್ನ , ಕರುನಾಡಿನ ರಾಜಕುಮಾರ ಪುನೀತ್ ರಾಜ್‍ಕುಮಾರ್ ನಮ್ಮನ್ನೆಲ್ಲ‌ ಅಗಲಿ ಇಂದಿಗೆ ತಿಂಗಳುಗಳೆ ಕಳೆದರು ಅವರ ಮಾಡಿದ ಕಾರ್ಯ ಗಳು ಒಂದೊಂದೆ ಮಾಧ್ಯಮದ ಮೂಲಕ ಹೊರಬರುತ್ತೇವೆ. ಅಪ್ಪು ಅವರು ಮಾಡಿದ್ದ ಇಂತಹದ್ದೆ ಒಂದು ಕೆಲಸ ಯಾವುದು ಅಂತೀರಾ ಇಲ್ಲಿದೆ ನೋಡಿ ಆ‌ ಸ್ಟೋರಿ.. ಗೋಶಾಲೆ, ವೃದ್ಧಾಶ್ರಮ, ಅನಾಥ ಮಕ್ಕಳಿಗೆ ಉಚಿತ ಶಿಕ್ಷಣ ಹೀಗೆ ಸಮಾಜಕ್ಕೆ ಎಲೆ ಮರೆಯ ಕಾಯಿಯಂತೆ ಸೇವೆ ಸಲ್ಲಿಸಿದರವರು ಪುನೀತ್ ರಾಜ್‍ಕುಮಾರ್. ಇದಷ್ಟೆ ಅಲ್ಲದೆ ಸಹಾಯ ಅಂತ ಬಂದವರಿಗೆ ಖಾಲಿ ಕೈಯಲ್ಲಿ ಎಂದು ಹಿಂದಿರುಗಿಸಿರಲಿಲ್ಲ.

Puneeth Rajkumar In Goa: ಫೋಟೋಗಳು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೋವಾದಲ್ಲಿ  ಏನ್ಮಾಡ್ತಿದ್ದಾರೆ? - Kannada Filmibeat

ಅವರು ನಮ್ಮನ್ನೆಲ್ಲ‌ ಅಗಲಿದಾಗ ಇಡೀ ಕರ್ನಾಟಕವೇ ಇವರಿಗಾಗಿ ಕಣ್ಣೀರು ಹಾಕಿತ್ತು. ಅದೆಷ್ಟೊ ಅಭಿಮಾನಿಗಳು ಅಪ್ಪು ಇಲ್ಲದ ಸತ್ಯ ನಂಬಲಾಗದೆ ಪ್ರಾಣ ಕಳೆದುಕೊಂಡರು. ಹೀಗಿರುವಾಗ ಅವರು‌ ಮಾಡಿರುವ ಹಲವು ಕೆಲಸಗಳು ಒಂದೊಂದು‌ ನಮ್ಮ ಮುಂದೆ ತರೆದಿಟ್ಟಿದ್ದು ಮಾಧ್ಯಮಗಳು. ಈಗ ಅಪ್ಪು ಅವರ ಕುರಿತು ಕಾಕ್ರೋಚ್ ಸುಧಿ ಅವರು ಮತ್ತೊಂದು ಸಂಗತಿಯನ್ನು‌ ನಮ್ಮುಂದೆ ಬಿಚ್ಚಿಟ್ಟಿದ್ದಾರೆ. ಸಿನೆಮಾ ಶೂಟಿಂಗ್ ನಡೆಯುತ್ತಿರುವ ಸಮಯದಲ್ಲಿ ಸೆಟ್ ಬಾಯ್ ಒಬ್ಬ ತಡವಾಗಿ ಬಂದಿದ್ದರಂತೆ ಇದನ್ನು ಗಮನಿಸಿದ ಡೈರೆಕ್ಟರ್ ಕೇಳಿದಾಗ ಆ ಡೈರೆಕ್ಟರ್ ಮತ್ತು ಸೆಟ್ ಬಾಯ್ ನಡುವಿನ ಮಾತುಕೆಗಳನ್ನ ಕೇಳಿಸಿಕೊಂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಆ ಹುಡುಗನನ್ನು ತಮ್ಮ ಬಳಿ‌ ಕರೆದು, ತಡವಾಗಿ ಯಾಕೆ ಬಂದೆ ಎಂದು ಅವರ ಬಳಿ ಕಾರಣ ಕೇಳಿದಾಗ..

ಶೂಟಿಂಗ್ ಗೆ ಲೇಟಾಗಿ ಬಂದ ಸೇಟ್ ಬಾಯ್ ಗೆ ಅಪ್ಪು ಮಾಡಿದ ಸಹಾಯವೇನು ಗೊತ್ತೇ! ಇದು ಯಾರಿಗೂ  ತಿಳಿದಿಲ್ಲ.. – Public Master

ಆ ಹುಡುಗ ತಾನು ಬೆಳಿಗ್ಗೆ ಮೂರು ಗಂಟೆಗೇ ಮನೆಯಿಂದ ಹೊರಟು 3 ಬಸ್ ಬದಲಿಸಿ ಬರಬೇಕು ಹಾಗೂ ಬಂದು ಶೂಟಿಂಗ್ ಸೆಟ್ ಗೆ ಬರುವಾಗ ಒಂದೂ ಆಟೋ ಸಿಗಲಿಲ್ಲ ಹಾಗಾಗಿ ತಡವಾಯಿತು ಎಂದು ತನ್ನ ಸಮಸ್ಯೆಯನ್ನು ಹೇಳಿಕೊಂಡಿದ್ದನು. ಅಪ್ಪು ಅವನಿಗೆ ಸಮಾಧಾನ ಮಾಡಿದ್ದು ಮಾತ್ರವಲ್ಲದೇ ಸಂಜೆ ಶೂಟಿಂಗ್ ಮುಗಿಯುವ ವೇಳೆಗೆ ತಮ್ಮ RX135 ಬೈಕ್ ಅನ್ನು ಆ ಹುಡುಗನಿಗೆ ನೀಡಿದ್ದರಂತೆ ಅದೂ ಬೈಕ್ ಗೆ ಸಂಬಂಧಿಸಿದ ಎಲ್ಲಾ ಕಾಗದ ಪತ್ರಗಳ ಸಮೇತವಾಗಿ. ಕುಡಿಯಲು ನೀರು ಕೇಳಿದಾಗ ನೀಡಲು ಹಿಂದು‌ ಮುಂದು ನೋಡುವ ಇಂದಿನ ಈ ಕಾಲದಲ್ಲಿ ಜನರ ಕಷ್ಟಗಳನ್ನು ಕಂಡು ಅವರಿಗೆ ಸಹಾಯ ಮಾಡುತಿದ್ದ ಅಪ್ಪು ಇಂದು ನಮ್ಮೊಂದಿಗಿನ ನೆನಪು‌ ಮಾತ್ರ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...