ರಾಜ್ಯ ಸರ್ಕಾರದಿಂದ ಪಡಿತರ ಚೀಟಿ ತಿದ್ದುಪಡಿ ವಿಚಾರವಾಗಿ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದ್ದು. ಈಗಾಗಲೇ ಪಡಿತರ ಚೀಟಿ ತಿದ್ದುಪಡಿ ಗೆ ವಲಯವಾರು ಹಾಗೂ ಜಿಲ್ಲೇವಾರು ಸರ್ವರ್ ಗೆ ಸಮಯ ಮಿತಿ ವಿಧಿಸಿ ತಿದ್ದುಪಡಿ ಮಾಡಲು ಸಮಯ ನೀಡುತ್ತಿರುವುದು ಗೊತ್ತಿರುವ ವಿಷಯ.

ಈಗ ರಾಜ್ಯ ಸರ್ಕಾರ ಪಡಿತರ ಚೀಟಿ ತಿದ್ದುಪಡಿ ಸೇವೆ ನೀಡುವ NIC ಸರ್ವರ್ ನಿಂದ KSDC (ಕರ್ನಾಟಕ ಸ್ಟೇಟ್ ಡೇಟಾ ಸೆಂಟರ್ ) ಗೆ ಸರ್ವರ್ ಸೇವೆ ವರ್ಗಾವಣೆ ಮಾಡಲು ಸಿದ್ಧತೆ ನಡೆಸುತ್ತಿದೆ.

ಇದು ವರ್ಗಾವಣೆ ಆದ ನಂತರ ಪಡಿತರ ಚೀಟಿ ತಿದ್ದುಪಡಿ ಗೆ ಯಾವುದೇ ಸರ್ವರ್ ಸಮಸ್ಯೆ ಇರುವುದಿಲ್ಲ ಎಂದು ಸರ್ಕಾರ ತಿಳಿಸಿದೆ. ಸರಕಾರ ನೀಡಿರುವ ಬೆಳಗ್ಗೆ 10 ರಿಂದ ರಾತ್ರಿ 8 ರ ಸಮಯದ ಬದಲಾಗಿ ಬೆಳಗ್ಗೆ 8 ರಿಂದ ರಾತ್ರಿ 9 ಗಂಟೆಯ ತನಕ ನಿರಂತರ ಪಡಿತರ ಚೀಟಿ ತಿದ್ದುಪಡಿ ಮಾಡಬಹುದಾಗಿದೆ.