ನಮ್ಮ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ದೇಶದಲ್ಲಿ ರೇಷನ್ ಕಾರ್ಡುಗಳನ್ನ ಹೊಂದಿರುವವರಿಗೆ ದಿನದಿಂದ ದಿನಕ್ಕೆ ಒಂದೊಂದು ಸಿಹಿ ಸುದ್ದಿಯನ್ನ ನೀಡುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ದೇಶದಲ್ಲಿ ಜನರ ಆರೋಗ್ಯದ ಮತ್ತು ಅವರ ಅನುಕೂಲದ ದೃಷ್ಟಿಯಿಂದ ಹಲವು ಯೋಜನೆಗಳನ್ನ ಜಾರಿಗೆ ತರಲಾಗಿತ್ತು ಇದು ಜನರ ಆರೋಗ್ಯವನ್ನ ಕಾಪಾಡುವ ದೃಷ್ಟಿಯಿಂದ ಆಗಿದೆ ಎಂದು ಹೇಳಬಹುದು. ಇನ್ನು ಈಗ ವಿಷಯಕ್ಕೆ ಬರುವುದಾದರೆ ನಮ್ಮ ಕೇಂದ್ರ ಸರ್ಕಾರ ಈಗ ಮತ್ತೆ ದೇಶದಲ್ಲಿ ಬಿಪಿಎಲ್ ಕಾರ್ಡ್ ಮತ್ತು ಅಂತ್ಯೋಧಯ ರೇಷನ್ ಕಾರ್ಡ್ ಹೊಂದಿರುವವರಿಗೆ ಬಂಪರ್ ಸಿಹಿ ಸುದ್ದಿಯನ್ನ ನೀಡಿದ್ದು ಜನರು ಇನ್ನುಮುಂದೆ ಯಾವುದೇ ಯೋಚನೆ ಮಾಡುವ ಅಗತ್ಯ ಇಲ್ಲ ಎಂದು ಹೇಳಬಹುದು.

ಹೌದು ದೇಶದಲ್ಲಿ ಇರುವ ಬಿಪಿಎಲ್ ಬಡ ಕುಟುಂಬಗಳಿಗೆ ಮತ್ತು ಅಂತ್ಯೋಧಯ ಬಡ ಕುಟುಂಬಗಳಿಗೆ ಕೇಂದ್ರ ಸರ್ಕಾರ ಈಗ ಬಂಪರ್ ಕೊಡುಗೆಯನ್ನ ನೀಡಿದ್ದು ಪ್ರತಿ ತಿಂಗಳು ರೇಷನ್ ಅಂಗಡಿಯಿಂದ ಆಹಾರ ಧಾನ್ಯಗಳನ್ನ ಪಡೆಯುತ್ತಿರುವ ಎಲ್ಲಾ ಕುಟುಂಬಗಳಿಗೆ ಆಹಾರ ನಾಗರೀಕ ಸರಬರಾಜು ಇಲಾಖೆ ಧಾನ್ಯಗಳ ವಿತರಣೆಯಲ್ಲಿ ದೊಡ್ಡ ಬದಲಾವಣೆಯನ್ನ ಮಾಡಿದೆ. ಹೌದು ಇನ್ನುಮುಂದೆ ಜನರು ರೇಷನ್ ಅಂಗಡಿಗಳಲ್ಲಿ ಪ್ರತಿ ತಿಂಗಳು ಪಡೆಯುತ್ತಿದ್ದ ರೇಷನ್ ಅಕ್ಕಿಯನ್ನ ಸಾರವರ್ಧಕ ಅಕ್ಕಿಯನ್ನಾಗಿ ವಿತರಣೆ ಮಾಡಲು ಈಗ ಕೇಂದ್ರ ಸರ್ಕಾರವು ಮುಂದಾಗಿದೆ. ದೇಶದಲ್ಲಿ ಅಪೌಷ್ಠಿಕತೆಯನ್ನ ನಿವಾರಣೆ ಮಾಡಲು ಈಗ ಮುಂದಾಗಿರುವ ನಮ್ಮ ಕೇಂದ್ರ ಸರ್ಕಾರ ಪಡಿತರ ಚೀಟಿಯನ್ನ ಹೊಂದಿದವರಿಗೆ ಸಾರವರ್ಧಕ ಅಕ್ಕಿಯನ್ನ ವಿತರಣೆ ಮಾಡಲು ತೀರ್ಮಾನವನ್ನ ಮಾಡಿದೆ.

Ration-card

ನ್ನು ಸಾರವರ್ಧಕ ಅಕ್ಕಿಯಲ್ಲಿ ವಿಟಮಿನ್, ಕಬ್ಬಿಣಾಂಶ ಮತ್ತು ಸಾಕಷ್ಟು ಪೌಷ್ಟಿಕಾಂಶವನ್ನ ಒಳಗೊಂಡಿರುವ ಅಂಶ ಇರುತ್ತದೆ ಮತ್ತು ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು ಆಗಿರುವ ಕಾರಣ ಇಂತಹ ಅಕ್ಕಿಯನ್ನ ವಿತರಣೆ ಮಾಡಲು ನಮ್ಮ ಕೇಂದ್ರ ಸರ್ಕಾರ ಈಗ ಮುಂದಾಗಿದೆ. ಇನ್ನು ಇದರ ಕುರಿತು ಮಾಹಿತಿಯನ್ನ ನೀಡಿರುವ ಆಹಾರ ಖಾತೆಯ ಸಚಿವರಾದ ಕೆ ಗೋಪಾಲಯ್ಯ ಅವರು ಈ ಯೋಜನೆಯೂ ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಆಗಿದ್ದು 175 ಕೋಟಿ ರೂಪಾಯಿಯನ್ನ ಈ ಯೋಜನೆಯಾಗಿ ಈಗಾಗಲೇ ಕಾಯ್ದಿರಿಸಲಾಗಿದೆ ಎಂದು ಹೇಳಿದ್ದಾರೆ. ಇನ್ನು ಇದರ ಜೊತೆಗೆ ಹೊಸ ಬಿಪಿಎಲ್ ಕಾರ್ಡಿನ ಅರ್ಜಿಯನ್ನ ಆನ್ಲೈನ್ ಮೂಲಕ ಸಲ್ಲಿಸಲು ಮುಂದಿನ ಡಿಸೆಂಬರ್ ಆನ್ಲೈನ್ ಪ್ರಕ್ರಿಯೆಗಳು ಆರಂಭ ಆಗಲಿದೆ ಎಂದು ಅವರು ಹೇಳಿದ್ದಾರೆ.

ಇನ್ನು ಈ ಸಾರವರ್ಧಕ ಅಕ್ಕಿಯೂ ಪ್ರತಿ ತಿಂಗಳು ನೀಡುವ ಅಕ್ಕಿಯ ಹಾಗೆ ಇರದೇ ಸ್ವಲ್ಪ ಬದಲಾವಣೆ ಇರಲಿದೆ ಮತ್ತು ಹೆಚ್ಚಿನ ಪೌಷ್ಟಿಕಾಂಶ ಮತ್ತು ಕಬ್ಬಿಣಾಂಶ ಒಳಗೊಂಡ ಕಾರಣ ತಿನ್ನಲು ಕೂಡ ಬಹಳ ರುಚಿಯಾಗಿ ಇರಲಿದೆ. ಇನ್ನು ಹಿಂದೆ ಬಹಳಷ್ಟು ಜನರು ಪ್ರತಿ ತಿಂಗಳು ರೇಷನ್ ಅಕ್ಕಿಯನ್ನ ಜಮಾವಣೆ ಮಾಡಿ ಅದನ್ನ ಪುನಃ ಮಾರುಕಟ್ಟೆಗೆ ಮಾರಾಟ ಮಾಡಿ ಚನ್ನಾಗಿರುವ ಅಕ್ಕಿಯನ್ನ ಖರೀದಿ ಮಾಡುತ್ತಿದ್ದರು, ಇನ್ನೂ ಇಂತಹ ವಿಚಾರವನ್ನ ಗಮನದಲ್ಲಿ ಇಟ್ಟುಕೊಂಡ ಕೇಂದ್ರ ಸರ್ಕಾರ ಈಗ ಬಹಳ ಉತ್ತಮ ಗುಣಮಟ್ಟದ ಅಕ್ಕಿಯನ್ನ ವಿತರಣೆ ಮಾಡಲು ಮುಂದಾಗಿದೆ.

ಇನ್ನು ಜನರು ಇನ್ನುಮುಂದೆ ಈ ಸಾರವರ್ಧಕ ಅಕ್ಕಿಯನ್ನ ಜಮಾವಣೆ ಮಾಡಿ ಮಾರಾಟ ಮಾಡಿದರೆ ಅವರ ಮೇಲೆ ಕಾನೂನಾತ್ಮಕ ಕ್ರಮವನ್ನ ಕೈಗೊಳ್ಳಲಾಗುತ್ತದೆ ಎಂದು ಹೇಳಲಾಗಿದೆ. ಸ್ನೇಹಿತರೆ ಈ ಮಾಹಿತಿಯನ್ನ ದೇಶದಲ್ಲಿ ಬಿಪಿಎಲ್ ರೇಷನ್ ಕಾರ್ಡ್ ಮತ್ತು ಅಂತ್ಯೋಧಯ ರೇಷನ್ ಕಾರ್ಡ್ ಹೊಂದಿರುವ ಎಲ್ಲಾ ಬಡಜನರಿಗೆ ತಲುಪಿಸಿ ಮತ್ತು ಕೇಂದ್ರ ಸರ್ಕಾರದ ಈ ಯೋಜನೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •