ಪಡಿತರ ಚೀಟಿ ಬಡ ಮತ್ತು ಕಡಿಮೆ ಆದಾಯ ಹೊಂದಿರುವ ಜನರ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಅನೇಕ ಬಾರಿ ನಮ್ಮ ಪಡಿತರ ಚೀಟಿಯಲ್ಲಿ ಕೆಲವು ನ್ಯೂನತೆಗಳಿವೆ ಅಥವಾ ನಾವು ಪಡಿತರ ಚೀಟಿಯನ್ನು ನವೀಕರಿಸಬೇಕಾಗುತ್ತದೆ. ಅಥವಾ ಹಲವು ಬಾರಿ ಪಡಿತರ ಚೀಟಿ ಕಳೆದುಹೋದರೆ, ನಾವು ಅದರ ನಕಲು ಪ್ರತಿಯನ್ನು ಪಡೆಯಬೇಕು, ಅಥವಾ ಹೊಸ ಪಡಿತರ ಚೀಟಿ ಅಗತ್ಯವಿದೆ. ಈಗ ನೀವು ಅಂತಹ ಎಲ್ಲಾ ಸಮಸ್ಯೆಗಳನ್ನು ಚಿಟಿಕೆ ಹೊಡೆಯುವಷ್ಟರಲ್ಲಿ ಭಾಗೇ ಹರಿಸಿಕೊಳ್ಳಬಹುದು. ಸರ್ಕಾರದ ಡಿಜಿಟಲ್ ಇಂಡಿಯಾ ಅಭಿಯಾನದ ಅಡಿಯಲ್ಲಿ ಈ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲಾಗಿದೆ.

ಈಗ ನೀವು ನಿಮ್ಮ ಹತ್ತಿರದ CSC ಅಂದರೆ ಸಾಮಾನ್ಯ ಸೇವಾ ಕೇಂದ್ರದ ಮೂಲಕ ಪಡಿತರ ಚೀಟಿ(Ration card)ಗೆ ಸಂಬಂಧಿಸಿದ ಅನೇಕ ಸೇವೆಗಳನ್ನು ಪಡೆಯಬಹುದು. ಡಿಜಿಟಲ್ ಇಂಡಿಯಾ ಇದನ್ನು ತನ್ನ ಅಧಿಕೃತ  ಟ್ವೀಟರ್ ಖಾತೆಯಲ್ಲಿ ವಿವರವಾಗಿ ವಿವರಿಸಿದೆ.ಡಿಜಿಟಲ್ ಇಂಡಿಯಾ(Digital India) ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಮಾಹಿತಿಯನ್ನು ನೀಡಿದೆ, ‘ಸಾಮಾನ್ಯ ಸೇವಾ ಕೇಂದ್ರ ಸುವಿಧಾ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯೊಂದಿಗೆ ಒಂದು ಎಂಒಯುಗೆ ಸಹಿ ಹಾಕಿದೆ. ಇದರೊಂದಿಗೆ, ದೇಶಾದ್ಯಂತ 3.70 ಲಕ್ಷ ಸಿಎಸ್‌ಸಿಗಳ ಮೂಲಕ ಪಡಿತರ ಚೀಟಿ ಸೇವೆಗಳು ಲಭ್ಯವಾಗಲಿವೆ. ಈ ಪಾಲುದಾರಿಕೆಯು ದೇಶಾದ್ಯಂತ 23.64 ಕೋಟಿಗೂ ಹೆಚ್ಚು ಪಡಿತರ ಚೀಟಿದಾರರಿಗೆ ಲಾಭವಾಗುವ ನಿರೀಕ್ಷೆಯಿದೆ.

ಇದರ ಅಡಿಯಲ್ಲಿ, ಈಗ ದೇಶದಾದ್ಯಂತ 23.64 ಕೋಟಿಗೂ ಹೆಚ್ಚು ಪಡಿತರ ಚೀಟಿ ಹೊಂದಿರುವವರು ಸಾಮಾನ್ಯ ಸೇವಾ ಕೇಂದ್ರ(CSC)ದ ಮೂಲಕ ಪಡಿತರ ಚೀಟಿಯ ಅನೇಕ ಸೇವೆಗಳ ಪ್ರಯೋಜನವನ್ನು ಪಡೆಯಬಹುದು. ಅದರ ಸಂಪೂರ್ಣ ಪ್ರಕ್ರಿಯೆಯ ನಿಮಗಾಗಿ ಇಲ್ಲಿದೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •