ದೇಶದಲ್ಲಿ ಸಾಮಾನ್ಯವಾಗಿ ಎಲ್ಲಾ ಕುಟುಂಬಗಳು ಪಡಿತರ ಚೀಟಿಯನ್ನ ಹೊಂದಿರುತ್ತಾರೆ ಎಂದು ಹೇಳಬಹುದು. ಹೌದು ಪ್ರತಿ ತಿಂಗಳು ಪಡಿತರ ಚೀಟಿ ಇರುವವರಿಗೆ ನ್ಯಾಯ ಬೆಲೆ ಅಂಗಡಿಗಳಲ್ಲಿ ಪಡಿತರ ಧಾನ್ಯಗಳನ್ನ ವಿತರಣೆ ಮಾಡಲಾಗುತ್ತದೆ. ಇನ್ನು ಕೆಲವು ಪ್ರದೇಶದಲ್ಲಿ ಪಡಿತರ ಅಂಗಡಿಗಳಲ್ಲಿ ಕೆಲವು ಅಕ್ರಮಗಳು ನಡೆಯುತ್ತಿದ್ದು ಅದನ್ನ ಜನರು ಹೇಳಿಕೊಳ್ಳಲಾಗದೆ ಸುಮ್ಮನೆ ಇದ್ದಾರೆ ಎಂದು ಹೇಳಬಹುದು. ಹೌದು ಪಡಿತರ ಅಂಗಡಿಗಳಲ್ಲಿ ಎಲ್ಲಾ ನ್ಯಾಯಯುತವಾದ ಬೆಲೆಯಲ್ಲಿ ಪಡಿತರ ಧಾನ್ಯಗಳನ್ನ ವಿತರಣೆ ಮಾಡಬೇಕು ಜನರು ಕೂಡ ಯಾವುದೇ ಸಮಸ್ಯೆ ಇಲ್ಲದೆ ಪಡಿತರ ಧಾನ್ಯಗಳನ್ನ ಪಡೆದುಕೊಳ್ಳಬೇಕು ಅನ್ನುವುದು ಸರ್ಕಾರದ ಆಶಯವಾಗಿದೆ ಎಂದು ಹೇಳಬಹುದು.

Ration-card

ಇನ್ನು ಈಗ ಪಡಿತರ ಅಂಗಡಿಗಳಲ್ಲಿ ಆಗುತ್ತಿರುವ ಕೆಲವು ಅಕ್ರಮ ಮತ್ತು ಜನರ ಸಮಸ್ಯೆಯನ್ನ ಹೋಗಲಾಡಿಸುವ ಸಲುವಾಗಿ ಸರ್ಕಾರ ಹೊಸ ಯೋಜನೆಯನ್ನ ಜಾರಿಗೆ ತಂದಿದ್ದು ಇದರ ಸದುಪಯೋಗವನ್ನ ಜನರು ಪಡೆದುಕೊಳ್ಳಬೇಕಾಗಿದೆ. ಹಾಗಾದರೆ ಏನದು ಹೊಸ ಯೋಜನೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಪಡಿತರ ಚೀಟಿ ಸರ್ಕಾರದ ಅಧಿಕೃತ ದಾಖಲೆಯಾಗಿದ್ದು, ಇದನ್ನು ಅನೇಕ ಬಾರಿ ಸರ್ಕಾರ ಪ್ರಯೋಜನಗಳನ್ನು ಪಡೆದುಕೊಳ್ಳುವ ವೇಳೆಯಲ್ಲಿ ಅಧಿಕಾರಿಗಳು ನಿಮ್ಮಿಂದ ಪಡೆದುಕೊಳ್ಳುವುದು ಗಮನಿಸಬಹುದಾಗಿದೆ.

ಸರ್ಕಾರದ ವಿತರಣಾ ವ್ಯವಸ್ಥೆಯಡಿ ಗೋಧಿ, ಅಕ್ಕಿ, ಇತ್ಯಾದಿಗಳನ್ನು ನ್ಯಾಯಬೆಲೆ ಅಂಗಡಿಗಳಿಂದ ಮಾರುಕಟ್ಟೆ ಬೆಲೆಗಿಂತ ಕಡಿಮೆ ದರದಲ್ಲಿ ಜನತೆಗೆ ನೀಡುತ್ತದೆ. ಇನ್ನು ಇತ್ತೀಚಿನ ದಿನಗಳಲ್ಲಿ ಪಡಿತರ ಆಹಾರ ವಿತರಣೆಯಲ್ಲಿ ಬಹಳ ದೂರುಗಳು ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಜನರ ಸಮಸ್ಯೆ ದೂರ ಮಾಡಲು ಯೋಜನೆಯನ್ನ ಜಾರಿಗೆ ತಂದಿದೆ. ಹೌದು ಪಡಿತರ ಅಂಗಡಿಗಳನ್ನ ಸಮಯಕ್ಕೆ ಸರಿಯಾಗಿ ತೆರೆಯದೆ ಇರುವುದು, ಆಹಾರ ಪದಾರ್ಥಗಳನ್ನು ಜನತೆಗೆ ಹಂಚದೇ ಇರುವುದು, ಜನರಿಂದ ಹೆಚ್ಚಿನ ಹಣದವನ್ನ ಪಡೆದುಕೊಳ್ಳುವುದು, ಕೆಲವು ಧಾನ್ಯಗಳನ್ನ ಜನರಿಗೆ ವಿತರಣೆ ಮಾಡದೆ ಇರುವುದು, ಜನರ ಜೊತೆ ಸರಿಯಾದ ವ್ಯವಹಾರ ಮಾಡದೆ ಇರುವುದು ಹೀಗೆ ಹತ್ತು ಹಲವು ಸಮಸ್ಯೆ ಜನರು ಅನುಭವಿಸುತ್ತಿರುವುದು ಇತ್ತೀಚಿನ ದಿನಗಳಲ್ಲಿ ವರದಿಯಾಗಿದೆ ಎಂದು ಹೇಳಬಹುದು.

Ration-card

ಇನ್ನು ಸರ್ಕಾರ ಈ ಸಮಸ್ಯೆ ಬಗೆಹರಿಸಲು ದೊಡ್ಡ ಯೋಜನೆಯನ್ನ ಜಾರಿಗೆ ಜನರು ಈ ಟೋಲ್ ಫ್ರೀ ನಂಬರ್ ಮೂಲಕ ತಮ್ಮ ಸಮಸ್ಯೆಯನ್ನ ಹೇಳಿಕೊಳ್ಳಬಹುದಾಗಿದೆ. ಹೌದು NFSA ವೆಬ್ ಸೈಟ್ ನಲ್ಲಿ, ಪ್ರತಿ ರಾಜ್ಯಕ್ಕೆ ವಿವಿಧ ಟೋಲ್ ಫ್ರೀ ಸಂಖ್ಯೆಗಳನ್ನು ನೀಡಿದ್ದು ರಾಷ್ಟ್ರೀಯ ಆಹಾರ ಭದ್ರತಾ ಪೋರ್ಟಲ್ (NFSA) ನಲ್ಲಿ ದೂರುಗಳನ್ನು ಒದಗಿಸಬಹುದಾಗಿದೆ. ನೀವು ಬಯಸಿದರೆ https://nfsa.gov.in NFSA ವೆಬ್ ಸೈಟ್ ಗೆ ಭೇಟಿ ನೀಡಿ. ಈ ವೆಬ್ ಸೈಟ್ ನಲ್ಲಿ ಮೇಲ್ ಮತ್ತು ದೂರವಾಣಿ ಸಂಖ್ಯೆ ಮೂಲಕ ದೂರುಗಳನ್ನು ದಾಖಲು ಮಾಡಲಾಗಿದೆ. ಪ್ರತಿಯೊಂದು ರಾಜ್ಯವು ಬೇರೆ ಬೇರೆ ಟೋಲ್ ಫ್ರೀ ಸಂಖ್ಯೆಗಳನ್ನು ಹೊಂದಿದೆ ಹಾಗೆ ಕರ್ನಾಟಕದ ಟೋಲ್ ಫ್ರೀ ಸಂಖ್ಯೆ 1800-425-9339 ಆಗಿದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •