ರೇಶನ್ ಕಾರ್ಡ್ ಹೊಂದಿರುವವರಿಗೆ ಸಿಗಲಿದೆ 2,500 ರೂ. ಈ ರಾಜ್ಯದ 2.5 ಕೋಟಿ ಜನರಿಗೆ ಲಾಭ. ಪಡಿತರ ಚೀಟಿ ಹೊಂದಿರುವವರಿಗೆ ಸರ್ಕಾರ ಹೊಸ ಘೋಷಣೆಗಳನ್ನು ಮಾಡುತ್ತದೆ. ಇವುಗಳ ಲಾಭವೂ ಜನರಿಗೆ ಸಿಗುತ್ತದೆ. ಈಗ ಈ ರಾಜ್ಯದ ಜನರಿಗೆ 2500 ರೂಪಾಯಿಗಳ ನಗದು ಬಹುಮಾನವನ್ನು ಸರ್ಕಾರ ಘೋಷಿಸಿದೆ.

ಮುಖ್ಯಮಂತ್ರಿ ಒಬ್ಬರು ಈ ರಾಜ್ಯದ ಜನತೆಗೆ ಪೊಂಗಲ್ ಹಬ್ಬ ಒಂದು ತಿಂಗಳು ಮೊದಲೇ  ಭರ್ಜರಿ ಉಡುಗೊರೆ ಘೋಷಿಸಿದ್ದಾರೆ. ಆದ್ರೆ, ಪಡಿತರ ಕಾರ್ಡ್  ಕಡ್ಡಾಯ ಎಂದಿದ್ದಾರೆ. ಪಡಿತರ ಕಾರ್ಡ್ ಹೊಂದಿರುವ 2.06 ಕೋಟಿಗೂ ಹೆಚ್ಚು ಜನರಿಗೆ 2500 ರೂ, ಅಕ್ಕಿ, ಒಣ ದ್ರಾಕ್ಷಿ, ಗೋಡಂಬಿ, ಏಲಕ್ಕಿ, ಕಬ್ಬು ಮತ್ತು ಹೊಸ ಬಟ್ಟೆಗಳ ಉಡುಗೊರೆ ನೀಡುವ ಬಗ್ಗೆ ಘೋಷಣೆ ಮಾಡಿದ್ದಾರೆ.

ಅಂದಹಾಗೆ ಇಂಥದ್ದೊಂದು ಬಂಪರ್ ಉಡುಗೊರೆ ಘೋಷಣೆ ಮಾಡಿದ್ದು ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ. ತಮ್ಮ ಕ್ಷೇತ್ರವಾದ ಸೇಲಮ್ ಜಿಲ್ಲೆಯ ಎಡಪ್ಪಾಡಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಸಾರ್ವಜನಿಕ ಪ್ರಚಾರ ಸಭೆಯಲ್ಲಿ ಅವರು ಈ ಘೋಷಣೆ ಮಾಡಿದ್ದಾರೆ. ತಮಿಳುನಾಡಿನಲ್ಲಿ ಅಧಿಕಾರ ಹೊಂದಿರುವ ಪಕ್ಷಗಳು ಪೊಂಗಲ್​ ಹಬ್ಬಕ್ಕೆ ಉಡುಗೊರೆ ನೀಡುವ ಸಂಪ್ರದಾಯವನ್ನು ಇಟ್ಟುಕೊಂಡಿದ್ದಾರೆ. ಇಂದಿನ ಕೊಡುಗೆ ನೀಡುವ ಮೂಲಕ ಕೆ. ಪಳನಿಸ್ವಾಮಿ ಇದನ್ನು ಮುಂದುವರಿಸಿದಂತಾಗಿದೆ. ಪಡಿತರ ಚೀಟಿ ಹೊಂದಿರುವವರಿಗೆ ಸರ್ಕಾರ ಹೊಸ ಘೋಷಣೆಗಳನ್ನು ಮಾಡುತ್ತದೆ. ಇವುಗಳ ಲಾಭವೂ ಜನರಿಗೆ ಸಿಗುತ್ತದೆ. ಈಗ ಈ ರಾಜ್ಯದ ಜನರಿಗೆ 2500 ರೂಪಾಯಿಗಳ ನಗದು ಬಹುಮಾನವನ್ನು ಸರ್ಕಾರ ಘೋಷಿಸಿದೆ.

ration-card-karnataka

ತಮಿಳುನಾಡಿನಲ್ಲಿ ಪೊಂಗಲ್ ಎಂದರೆ ಹಬ್ಬದ ಪ್ರಯುಕ್ತ 2021ರ ಜನೇವರಿ 4ರಿಂದಲೇ ಈ ನಗದು ಕೊಡುವ ಯೋಜನೆ ಜಾರಿಗೆ ಬರಲಿದ್ದು, ಪಡಿತರ ಚೀಟಿ ಅಕ್ಕಿ ಪಡೆಯಲು ಅರ್ಹರಿರುವ ಎಲ್ಲ ಸಾರ್ವಜನಿಕರೂ ಈ ಪ್ರಯೋಜನ ಪಡೆಯಬಹುದು ಎಂದು ಅವರು ಹೇಳಿದ್ದಾರೆ. ಇದರಿಂದ ಪಡಿತರ ಚೀಟಿ ಹೊಂದಿರುವ, ರಾಜ್ಯದ 2.6 ಕೋಟಿ ಮಂದಿಗೆ ತಲಾ 2,500 ರೂ. ಸಿಗಲಿದೆ ಎಂದಿದ್ದಾರೆ. ತಮಿಳರಿಗೆ ಜನೇವರಿ 14ರ ಪೊಂಗಲ್ ಹಬ್ಬ ಅತಿ ಪ್ರಮುಖವಾದುದು. ಕಳೆದ ವರ್ಷ ಈ ಹಬ್ಬದಂದು 1 ಸಾವಿರ ರೂ. ನಗದು ನೀಡಲಾಗಿತ್ತು. ಈ ಸಲ ಒಂದೂವರೆ ಸಾವಿರ ರೂ. ಹೆಚ್ಚಿಸಲಾಗಿದ್ದು, ಒಟ್ಟು 2,500 ರೂ. ನೀಡಲಿದ್ದೇವೆ. ಜತೆಗೆ ಒಂದು ಕೆ.ಜಿ. ಅಕ್ಕಿ, ಸಕ್ಕರೆ ಹಾಗೂ ಒಂದಿಡೀ ಕಬ್ಬನ್ನು ಕೂಡ ಕೊಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಕರ್ನಾಟಕ, ಆಂಧ್ರಪ್ರದೇಶದಲ್ಲಿ ಸಂಕ್ರಾಂತಿ ಹಬ್ಬವನ್ನು ಆಚರಿಸುವಂತೆ ತಮಿಳುನಾಡಿನಲ್ಲಿ ಪೊಂಗಲ್ ಹಬ್ಬವನ್ನು ಆಚರಿಸಲಾಗುತ್ತದೆ. ಪೊಂಗಲ್ ತಮಿಳುನಾಡಿನ ಪ್ರಮುಖ ಹಬ್ಬವಾಗಿದೆ. ಈ ಹಿನ್ನಲೆಯಲ್ಲಿ ತಮಿಳುನಾಡು ರಾಜ್ಯ ಸರ್ಕಾರವು ಪಡಿತರ ಚೀಟಿ ಹೊಂದಿರುವ ತನ್ನ ರಾಜ್ಯದ 2.6 ಕೋಟಿ ಜನರಿಗೆ 2500 ರೂಪಾಯಿ ಹಣವನ್ನು ನೀಡಲು ನಿರ್ಧರಿಸಿದೆ. ಪೊಂಗಲ್ ಹಬ್ಬವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪ್ರೋತ್ಸಾಹಕ ಮೊತ್ತವನ್ನು ಜನವರಿ 4 ರಿಂದ ವಿತರಿಸಲಾಗುವುದು ಇದರಿಂದ ಎಲ್ಲರೂ ಸುಗ್ಗಿಯ ಹಬ್ಬವನ್ನು ಸಂತೋಷದಿಂದ ಆಚರಿಸಲು ಸಾಧ್ಯವಾಗುತ್ತದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಈ ಪ್ಯಾಕೇಜ್ ಅಡಿಯಲ್ಲಿ ಸರ್ಕಾರವು ಒಂದು ಕೆಜಿ ಅಕ್ಕಿ, ಸಕ್ಕರೆ, ಒಣದ್ರಾಕ್ಷಿ, ಗೋಡಂಬಿ, ಏಲಕ್ಕಿ, ಬಟ್ಟೆ ಚೀಲ ಮತ್ತು ಕಬ್ಬನ್ನು ಪಡಿತರ ಚೀಟಿ ಹೊಂದಿರುವವರಿಗೆ ಉಚಿತವಾಗಿ ನೀಡುತ್ತದೆ. ಕಳೆದ ವರ್ಷವೂ ತಮಿಳುನಾಡು ಸರ್ಕಾರ ಅಕ್ಕಿ ಖರೀದಿಸಲು ಸಾರ್ವಜನಿಕರಿಗೆ ಸಾವಿರ ರೂಪಾಯಿಗಳನ್ನು ನೀಡಿತ್ತು ಮತ್ತು ಈ ವರ್ಷ ಅದನ್ನು 1500 ರೂಪಾಯಿಯಿಂದ 2500 ರೂಪಾಯಿಗೆ ಹೆಚ್ಚಿಸಲಾಗಿದೆ. ಎಐಎಡಿಎಂಕೆ (AIADMK) ಸರ್ಕಾರ 2014 ರಲ್ಲಿ 1 ಕೆಜಿ ಅಕ್ಕಿ ಮತ್ತು 1 ಕೆಜಿ ಸಕ್ಕರೆಯೊಂದಿಗೆ ರಾಜ್ಯದ ಜನರಿಗೆ 100 ರೂ. ನೀಡಿತು. 2018 ರಲ್ಲಿ ಈ ಮೊತ್ತವನ್ನು 1000 ರೂ.ಗೆ ಹೆಚ್ಚಿಸಲಾಗಿತ್ತು ಮತ್ತು ಈಗ ಮುಖ್ಯಮಂತ್ರಿ ಎಡಪ್ಪಾಡಿ  ಕೆ. ಪಳನಿಸ್ವಾಮಿ ಅದನ್ನು 2,500 ರೂ.ಗೆ ಹೆಚ್ಚಿಸಿದ್ದಾರೆ.

ಮುಖ್ಯಮಂತ್ರಿ ಪಳನಿಸ್ವಾಮಿ ಅವರ ನಿರ್ಧಾರವನ್ನು ವಿರೋಧ ಪಕ್ಷದ ಮುಖಂಡ ಎಂ.ಕೆ. ಸ್ಟಾಲಿನ್ ಪ್ರಶ್ನಿಸಿದ್ದಾರೆ. ಜನರು ಸಂಕಷ್ಟದಲ್ಲಿದ್ದಾಗ ಯಾವುದೇ ಆರ್ಥಿಕ ಪರಿಹಾರವನ್ನು ನೀಡಲಿಲ್ಲ. ಆದರೆ ಈಗ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮುಖ್ಯಮಂತ್ರಿ 2,500 ರೂ.ಗಳನ್ನು ನೀಡುವುದಾಗಿ ಘೋಷಿಸಿದ್ದಾರೆ. ಕನಿಷ್ಠ ಈಗಲಾದರೂ ಅವರು ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ಮತ್ತು ಚಂಡಮಾರುತದಿಂದಾಗಿ ತೊಂದರೆಗೆ ಈಡಾಗಿರುವವರಿಗೆ 5,000 ರೂ.ಗಳನ್ನು ಘೋಷಿಸಲಿ ಎಂದು ಆಗ್ರಹಿಸಿದ್ದಾರೆ. ಆದರೆ ಪ್ರತಿಪಕ್ಷ ಮುಖಂಡರ ಈ ಆರೋಪಗಳನ್ನು ಮುಖ್ಯಮಂತ್ರಿ ನಿರಾಕರಿಸಿದ್ದಾರೆ. ತಮಿಳುನಾಡಿನ ಚುನಾವಣೆಗೆ ಸಿದ್ಧತೆಗಳನ್ನು ತೀವ್ರಗೊಳಿಸಲಾಗಿದೆ. ತಮಿಳುನಾಡಿನಲ್ಲಿ 2021 ರ ವಿಧಾನಸಭಾ ಚುನಾವಣೆ ಸಂಪೂರ್ಣವಾಗಿ ಹೊಸ ಸನ್ನಿವೇಶಗಳಲ್ಲಿ ನಡೆಯಲಿದೆ ಎಂಬುದು ಗಮನಿಸಬೇಕಾದ ಸಂಗತಿ.

ರಾಜ್ಯದ ಪ್ರಭಾವಿ ಪಕ್ಷಗಳಾದ ಎಐಎಡಿಎಂಕೆ (AIADMK) ಮತ್ತು ಡಿಎಂಕೆ (DMK) ತಮ್ಮ ನಾಯಕರಾದ ಜಯಲಲಿತಾ ಮತ್ತು ಕರುಣಾನಿಧಿ ಇಲ್ಲದೆ ಮತದಾನಕ್ಕೆ ಹೋಗಲಿವೆ. ಲೋಕಸಭಾ ಚುನಾವಣೆಯಲ್ಲಿ ಡಿಎಂಕೆ ಸಾಕಷ್ಟು ಯಶಸ್ಸನ್ನು ಕಂಡಿತು, ಆದರೆ ಪಕ್ಷದ ನಾಯಕ ಸ್ಟಾಲಿನ್ ಅವರಿಗೆ 2021 ರಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯೇ ನಿಜವಾದ ಪರೀಕ್ಷೆ ಎಂದು ಪರಿಗಣಿಸಲಾಗಿದೆ. ಮತ್ತೊಂದೆಡೆ ಎಐಎಡಿಎಂಕೆ ಅಧಿಕಾರದಲ್ಲಿದ್ದರೂ ವಿವಿಧ ಬಣಗಳ ನಡುವೆ ವಿಭಜನೆಯಾಗಿರುವುದರಿಂದ ದುರ್ಬಲವಾಗಿದೆ. ಆಳುವ ಬಣ ಮತ್ತು ದಿನಕರನ್ ನೇತೃತ್ವದ ಬಣ ಒಗ್ಗೂಡಿದರೆ ಅದು ಬಲವಾಗಿ ಹೊರಹೊಮ್ಮಬಹುದು.

……………..
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!