ಪಡಿತರ ಚೀಟಿಯು ಸರ್ಕಾರದ ವಿವಿಧ ಯೋಜನೆಗಳಿಗೆ ಗುರುತಿನ ಪ್ರಮುಖ ಪುರಾವೆಯಾಗಿದೆ. ದುರದೃಷ್ಟವಶಾತ್, ಅನೇಕ ಜನರು ಇನ್ನೂ ಪಡಿತರ ಚೀಟಿಗಳನ್ನು ಹೊಂದಿಲ್ಲ. ಇದರಿಂದ ಈ ಯೋಜನೆಯಿಂದ ವಂಚಿತರಾಗಿ ಅಗತ್ಯ ಆಹಾರ ಸಿಗದೆ ಪರದಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಹೊಸ ಪಡಿತರ ಚೀಟಿಗೆ (New Ration card) ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಕೆ.ಎಚ್.ಮುನಿಯಪ್ಪ, (K H muniyappa) ಈ ವರ್ಷ ಸುಮಾರು 2.5 ಲಕ್ಷ ಬಿಪಿಎಲ್ (BPL) ಕಾರ್ಡ್‌ಗಳನ್ನು ವಿತರಿಸಲಾಗಿದೆ ಎಂದು ಘೋಷಿಸಿದ್ದಾರೆ. ಮಾರ್ಚ್ 31 ರೊಳಗೆ ಉಳಿದ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಲಾಗಿದ್ದು, ಏಪ್ರಿಲ್ 1 ರಿಂದ ಬಿಪಿಎಲ್ (BPL) ಮತ್ತು ಎಪಿಎಲ್ (APL) ಪಡಿತರ ಚೀಟಿಗಳನ್ನು (Ration card) ವಿತರಿಸಲಾಗುವುದು ಎಂದು ಭರವಸೆ ನೀಡಿದರು.

ರೇಷನ್ ಕಾರ್ಡ್ ಪಡೆಯಲು ಬೇಕಾದ ದಾಖಲೆಗಳು:

1.ಎಲ್ಲ ಸದಸ್ಯರ ಆಧಾರ್ ಕಾರ್ಡ್ (Adhar card)

2.ಜಾತಿ ಮತ್ತು ಆದಾಯ ಪ್ರಮಾಣ ಪತ್ರ.

3.ಸ್ವಂತ ಮನೆ ಇದ್ದಾರೆ,ಮನೆಯ ಉತಾರ.

ನೀವು ಹೊಸ ಪಡಿತರ ಚೀಟಿಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಬಯಸಿದರೆ, ಕೆಳಗಿನ ಲಿಂಕ್ ಬಳಸಿ ನೀವು ಅರ್ಜಿ ಸಲ್ಲಿಸಬಹುದು.

ಲಿಂಕ್: https://ahara.kar.nic.in/

ರೇಷನ್ ಕಾರ್ಡ್ ವಿತರಣೆ 2024 ರ ಮಾರ್ಚ್ 10 ರಿಂದ ಪ್ರಾರಂಭವಾಗಲಿದೆ. ಈ ವಿತರಣಾ ಪ್ರಕ್ರಿಯೆಯು 2024 ರ ಏಪ್ರಿಲ್ 15 ರವರೆಗೆ ನಡೆಯಲಿದೆ.

ಹೊಸದಾಗಿ ಮದುವೆಯಾದವರು, ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದವರು, ಅಥವಾ ರೇಷನ್ ಕಾರ್ಡ್ ಇಲ್ಲದವರು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು.