ದೇಶದಲ್ಲಿ ಅನರ್ಹರು ಕೂಡಾ ಪಡಿತರವನ್ನು ಪಡೆಯುತ್ತಿದ್ದಾರೆ ಎಂಬ ಆರೋಪಗಳು ನಿರಂತರವಾಗಿ ಕೇಳಿ ಬರುತ್ತಿದೆ. ಈ ನಿಟ್ಟಿನಲ್ಲಿ ಪಡಿತರ ಚೀಟಿಗೆ ಸಂಬಂಧಿಸಿ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಪ್ರಮುಖ ಬದಲಾವಣೆಯನ್ನು ಮಾಡಲಿದೆ.ದೇಶದ ವಿವಿಧ ಭಾಗಗಳಲ್ಲಿ ಪಡಿತರವನ್ನು ಪಡೆಯುತ್ತಿದ್ದಾರೆ ಎಂದು ಹಲವಾರು ಮಂದಿ ದೂರು ನೀಡುತ್ತಿದ್ದರು. ಈ ನಿಟ್ಟಿನಲ್ಲಿ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಅನರ್ಹರು ಪಡಿತರವನ್ನು ಪಡೆಯಲು ಸಾಧ್ಯವಾಗದಂತೆ ಪ್ರಮುಖ ಬದಲಾವಣೆ ಮಾಡಲು ಮುಂದಾಗಿದೆ.ಈ ನೂತನ ಪಡಿತರ ನಿಯಮವು ಈಗಾಗಲೇ ಭಾಗಶಃ ರೂಪಿಸಲಾಗಿದೆ ಎಂದು ವರದಿಯು ಹೇಳಿದೆ. ಈ ನೂತನ ನಿಯಮದ ಬಗ್ಗೆ ರಾಜ್ಯ ಸರ್ಕಾರಗೊಂದಿಗೆ ಹಲವಾರು ಸುತ್ತಿನ ಮಾತುಕತೆ ನಡೆದಿದ್ದು ಆ ಬಳಿಕ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಈ ನಿಯಮವನ್ನು ರೂಪಿಸಿದೆ. ಹಾಗಾದರೆ ಈ ನೂತನ ನಿಯಮ ಏನು? ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ.

free ration distribution: ಮೇ.1ರಿಂದ ಪಡಿತರ ವಿತರಣೆ ಆರಂಭ: ಮೂರು ತಿಂಗಳ ಅಕ್ಕಿ ಉಚಿತ! - ration for two months in one go, three months ration free says k. gopalaiah in bengaluru | Vijaya Karnataka

ಸ್ತುತ ದೇಶದಲ್ಲಿ 80 ಕೋಟಿ ಜನರು ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ ಅಡಿಯಲ್ಲಿ ಪಡಿತರವನ್ನು ಪಡೆಯುತ್ತಿದ್ದಾರೆ ಎಂದು ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಡೇಟಾವು ಹೇಳಿದೆ. ಆದರೆ ಇದರಲ್ಲಿ ಹಲವಾರು ಮಂದಿ ಅನರ್ಹರು ಎಂದು ಹೇಳಲಾಗಿದೆ. ತಮ್ಮಲ್ಲಿ ಎಲ್ಲಾ ಸೌಲಭ್ಯಗಳು ಇದ್ದರೂ ಕೂಡಾ ಬಿಪಿಎಲ್‌ ಕಾರ್ಡ್ ಅನ್ನು ಇಟ್ಟುಕೊಂಡಿದ್ದಾರೆ ಎಂದು ಹೇಳಲಾಗಿದೆ. ಈ ಎಲ್ಲಾ ವಿಚಾರವನ್ನು ಗಮನದಲ್ಲಿ ಇಟ್ಟುಕೊಂಡು ಸಾರ್ವಜನಿಕ ಪಡಿತರ ವಿತರಣಾ ಸಚಿವಾಲಯವು ಪಡಿತರ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪಾರದರ್ಶಕ ಮಾಡುವ ಮೂಲಕ ಪ್ರಮುಖ ಬದಲಾವಣೆಯನ್ನು ಮಾಡಲು ಮುಂದಾಗಿದೆ.

ಇಂದಿನಿಂದ ಪಡಿತರ ವಿತರಣೆ..! | Prajapragathi

ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಕಾರ್ಯದರ್ಶಿ ಸುಧಾಂಶು ಪಾಂಡೆ, “ಪಡಿತರವನ್ನು ಅನರ್ಹರು ಕೂಡಾ ಪಡೆಯುತ್ತಿದ್ದಾರೆ ಎಂಬ ಹಲವಾರು ಆರೋಪ, ದೂರುಗಳು ಬಂದಿದೆ, ಈ ನಿಟ್ಟಿನಲ್ಲಿ ಕಳೆದ ಆರು ತಿಂಗಳಿನಿಂದ ಪಡಿತರ ಚೀಟಿ ನಿಯಮದಲ್ಲಿ ಬದಲಾವಣೆ ಮಾಡುವ ಬಗ್ಗೆ ನಾವು ಚಿಂತನೆ ನಡೆಸುತ್ತಿದ್ದೇವೆ. ಈ ಹಿನ್ನೆಲೆ ರಾಜ್ಯ ಸರ್ಕಾರಗಳೊಂದಿಗೆ ಮಾತುಕತೆಯನ್ನು ನಡೆಸಲಾಗಿದೆ. ರಾಜ್ಯದ ಸಲಹೆಯನ್ನು ನಾವು ಪಡೆದುಕೊಂಡು ಅರ್ಹರಿಗೆ ಹೊಸ ಮಾನದಂಡವನ್ನು ರಚಿಸಲಾಗುವುದು,” ಎಂದು ತಿಳಿಸಿದ್ದಾರೆ.

“ಈ ನೂತನ ಪಡಿತರ ನಿಯಮ ಬದಲಾವಣೆಯನ್ನು ಶೀಘ್ರದಲ್ಲೇ ಅಂತಿಮ ಮಾಡಲಾಗುತ್ತದೆ. ಈ ನೂತನ ಬದಲಾವಣೆಯನ್ನು ಮಾಡಿದ ಬಳಿಕ ಯಾರು ಅರ್ಹರು ಆಗಿರುತ್ತಾರೋ ಅವರಿಗೆ ಮಾತ್ರ ಪಡಿತರ ಚೀಟಿಯ ಮೂಲಕ ಪಡಿತರ ಅಂಗಡಿಗಳಲ್ಲಿ ರೇಷನ್‌ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಅನರ್ಹರಿಗೆ ಪಡಿತರ ದೊರೆಯುವುದಿಲ್ಲ. ನಿಜವಾಗಿಯೂ ಪಡಿತರ ಅಗತ್ಯವಿರುವ ಜನರಿಗೆ ಪಡಿತರವನ್ನು ತಲುಪಿಸುವ ನಿಟ್ಟಿನಲ್ಲಿ ಈ ಪ್ರಮುಖ ಬದಲಾವಣೆಯನ್ನು ಮಾಡಲಾಗುತ್ತಿದೆ,”

ಬೆಳಗಾವಿ: ನ್ಯಾಯಬೆಲೆ ಅಂಗಡಿ ಲೈಸೆನ್ಸ್ ಅಮಾನತು | Prajavani

ಎಂದು ಕೂಡಾ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಕಾರ್ಯದರ್ಶಿ ಸುಧಾಂಶು ಪಾಂಡೆ ಮಾಹಿತಿ ನೀಡಿದ್ದಾರೆ. ಒನ್‌ನೇಶನ್‌ ಒನ್‌ ರೇಶನ್‌ ಕಾರ್ಡ್ ಯೋಜನೆ ಡಿಸೆಂಬರ್ 2020 ರಿಂದ ಒನ್‌ ನೇಶನ್‌ ಒನ್‌ ರೇಶನ್‌ ಕಾರ್ಡ್ ಯೋಜನೆ ದೇಶದ 32 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಗೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ ಅಡಿಯಲ್ಲಿ ಸುಮಾರು 69 ಕೋಟಿ ಫಲಾನುಭವಿಗಳು ಅಂದರೆ ಶೇಕಡ 86 ರಷ್ಟು ಜನರು ಈ ಯೋಜನೆ ಅಡಿಯಲ್ಲಿ ಪಡಿತರವನ್ನು ಪಡೆಯುತ್ತಿದ್ದಾರೆ. ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ತೆರಳಿದರೂ ಸಹ ಪ್ರತಿ ತಿಂಗಳು 1.5 ಕೋಟಿ ಜನರು ಈ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!