ಕೊ ರೊನಾ ಎಂಬ ಹೆಸರು ಕೇಳಿದರೆ ಸಾಕು ಜನರಲ್ಲಿ ಅದೇನೋ ಒಂಥರಾ ತಳ ಮಳ ಶುರುವಾಗುತ್ತದೆ. ಏಕೆಂದರೆ ಇದು ಇಡೀ ಪ್ರಪಂಚಕ್ಕೆ ದೊಡ್ಡ ಮಹಾ ಮಾರಿ ಆಗಿತ್ತು. ಮೊದಲೆಲ್ಲ ಲ ಸಿಕೆ ಯಾರಿಗೂ ಸಿಗುತ್ತಿಲ್ಲ. ಯಾವ ದವಾ ಖಾನೆಗಳಲ್ಲಿ ಕೇಳಿದರು ನಮ್ಮಲ್ಲಿ ಅದು ಖಾಲಿಯಾಗಿದೆ ಎಂಬ ಉತ್ತರವನ್ನು ನೀಡುತ್ತಿದ್ದರು. ಆದರೆ ಇಂದು ಎಲ್ಲ ಕಡೆ ಅದು ಲಭ್ಯವಾಗಿದೆ, ಆದರೆ ಇಂದು ಜನರು ಮುಂದೆ ಹೋಗುತ್ತಿಲ್ಲ. ಅದರಲ್ಲೂ ಹಳ್ಳಿಯ ಜನರು ಇದರ ಬಗ್ಗೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂಬುದು ಸರ್ಕಾರದ ಮಾತು. ಇದನ್ನು ತಡೆ ಹಿಡಿಯಲು ಸರ್ಕಾರ ಒಂದು ಮಾರ್ಗವನ್ನು ಕಂಡು ಹಿಡಿದಿದೆ. ಆದರೆ ಇದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಜನರೇ ಹೇಳಬೇಕು.

Karnataka Ration Card Lists:ರೇಷನ್ ಕಾರ್ಡ್ - Google Play ನಲ್ಲಿ ಅಪ್ಲಿಕೇಶನ್‌ಗಳು

ಬಿಪಿಎಲ್ ಕಾರ್ಡ್ ಹೊಂದಿದ ಎಲ್ಲರಿಗೂ ಸಹ ಪ್ರತಿ ತಿಂಗಳು ರೇಷನ್ ಎಂದು ಅಕ್ಕಿ, ತೊಗರಿ ಬೇಳೆ, ಎಣ್ಣೆ ಹೀಗೆ ಹಲವು ಸಾಮಗ್ರಿಗಳನ್ನು ಉಚಿತವಾಗಿ ಸರ್ಕಾರವು ನೀಡುತ್ತದೆ. ಇನ್ನೂ ಒಂದೂ ಲ ಸಿಕೆಯನ್ನು ಸಹ ಪಡೆಯದೆ ಇದ್ದವರಿಗೆ ಇನ್ನು ಮುಂದೆ ರೇಷನ್ ನೀಡುವುದನ್ನು ನಿಲ್ಲಿಸಬೇಕು ಎಂಬ ಯೋಚನೆ ಮಾಡುತ್ತಿದೆ ಸರಕಾರ. ಇದನ್ನ ಸ್ವತಃ ಸಚಿವರಾದಂತಹ ಮಾಧುಸ್ವಾಮಿ ಅವರು ಈ ಹೇಳಿಕೆಯನ್ನು ನೀಡಿದ್ದಾರೆ. ಮುಂಬರುವ ಸಭೆಗಳಲ್ಲಿ ಇದರ ಬಗ್ಗೆ ಚರ್ಚೆ ಮಾಡಿ ನಿರ್ಧಾರವನ್ನು ಕೈಗೊಳ್ಳುತ್ತೇವೆ ಎಂಬ ಮಾತನ್ನು ಹೇಳಿದ್ದಾರೆ.

ಈ ಮಹಾ ಮಾರಿಯನ್ನು ನಾವು ನಿರ್ಲಕ್ಷಿಸಲು ಸಾಧ್ಯವಿಲ್ಲ, ಎಲ್ಲರೂ ಕೂಡ ಲ ಸಿಕೆಯಿಂದ ಪಡೆದುಕೊಂಡರೆ ನಾವು ಎಲ್ಲರೂ ಸುರಕ್ಷಿತವಾಗಿ ಇರಬಹುದು ಎಂದು ಮಾಧುಸ್ವಾಮಿ ಅವರು ಹೇಳಿದ್ದಾರೆ. ಈ ಮಹಾ ಮಾರಿ ಇನ್ನೂ ಯಾವಾಗ ಬೇಕಾದರೂ ಮತ್ತೊಂದು ರೂಪವನ್ನು ತಾಳಬಹುದು. ಅದರ ಒಳಗಡೆ ಎಲ್ಲರೂ ಕೂಡ ಸುರಕ್ಷಿತವಾಗಿ ಈ ಒಂದು ಡೋಸ್ ಆದರೂ ಪಡೆಯಲೇಬೇಕು. ಎಲ್ಲರೂ ಲಸಿಕೆಯನ್ನು ಪಡೆಯಬೇಕು ಎಂಬ ಉದ್ದೇಶ ಸರಿ, ಆದರೆ ಅವರು ಅದಕ್ಕಾಗಿ ತೆಗೆದುಕೊಳ್ಳುವ ಈ ಮಾರ್ಗ ಸರಿಯಾಗಿದೆಯೇ ಎಂಬುದನ್ನು ನೀವು ಹೇಳಬೇಕು.

ಭಾರತ ತುಂಬಾನೇ ದೊಡ್ಡ ರಾಷ್ಟ್ರ. ಇಲ್ಲಿ ಜನಸಂಖ್ಯೆ ತುಂಬ ಇದೆ. ನಾವು ನಮ್ಮ ದೇಶವನ್ನ ಸುರಕ್ಷಿತವಾಗಿ ಇರಬೇಕು ಎಂದರೆ ನಾವು ಮೊದಲು ಡೋಸ್ ತೆಗೆದುಕೊಂಡು ನಮ್ಮ ಅಕ್ಕ ಪಕ್ಕದವರನ್ನು ಸುರಕ್ಷಿತವಾಗಿ ಇಡಬೇಕು. ಏಕೆಂದರೆ ಕಳೆದ 2 ವರ್ಷಗಳಲ್ಲಿ ಎಷ್ಟೊಂದು ಘಟನೆಗಳು ನಮ್ಮ ಕಣ್ಣ ಮುಂದೆಯೇ ನಡೆದು ಹೋಗಿರುವುದನ್ನು ನಾವು ನೋಡಿದ್ದೇವೆ. ಆದ್ದರಿಂದ ನಾವು ಆದಷ್ಟು ಸುರಕ್ಷಿತವಾಗಿ ಇರಬೇಕಾಗುತ್ತದೆ. ಇದರಿಂದ ನಮಗೂ ಹಾಗೂ ನಮ್ಮ ಅಕ್ಕ ಪಕ್ಕದಲ್ಲಿ ಇರುವವರಿಗೂ ಒಳ್ಳೆಯದು.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •