ರಶ್ಮಿಕಾ ಮಂದಣ್ಣ.. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲವೇ ಸಮಯದಲ್ಲಿ ದೊಡ್ಡ ಮಟ್ಟದಲ್ಲಿ ಶೈನ್ ಆದ ನಟಿ.. ಮೊದಲ ಸಿನಿಮಾಗೆ ದೊಡ್ಡ ಯಶಸ್ಸು ಪಡೆದು ಸ್ಟೇಟ್ ಕ್ರಶ್ ಎನಿಸಿಕೊಂಡಿದ್ದ ನಟಿ.. ಆದರೆ ಅಷ್ಟೇ ದೊಡ್ಡಮಟ್ಟದಲ್ಲಿ ಟ್ರೋಲ್ ಗಳಿಗೆ ಒಳಗಾದ ನಟಿಯೂ ಹೌದು.. ಅದೇ ರಶ್ಮಿಕಾ ಮಂದಣ್ಣ ಇದೀಗ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ..

ಹೌದು ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟ ನಟಿ.. ರಕ್ಷಿತ್ ಶೆಟ್ಟಿ ಇಂದಾಗಿ ಮೊದಲ ಸಿನಿಮಾದಲ್ಲಿಯೇ ದೊಡ್ಡ ಯಶಸ್ಸನ್ನು ಪಡೆದುಕೊಂಡರು.. ನಂತರ ಈ ಜೋಡಿ ಕಿರಿಕ್ ಪಾರ್ಟಿ ಸಿನಿಮಾ ಸಮಯದಲ್ಲಿಯೇ ಪ್ರೀತಿಯಲ್ಲಿ ಬಿದ್ದಿರುವ ವಿಚಾರ ಬಹಿರಂಗವಾಯಿತು.. ಇಬ್ಬರೂ ಸಹ ಯಾವುದೇ ಮುಚ್ಚು ನರೆ ಇಲ್ಲದೇ ಬಹಿರಂಗವಾಗಿ ತಮ್ಮ ಪ್ರೀತಿ ವಿಚಾರವನ್ನು ಹೇಳಿಕೊಂಡಿದ್ದರು.. ಮದುವೆಯಾಗುವುದಾಗಿಯೂ ತಿಳಿಸಿದ್ದರು.. ನಂತರ ಅದ್ಧೂರಿಯಾಗಿ ವಿರಾಜಪೇಟೆಯಲ್ಲಿ ನಿಶ್ಚಿತಾರ್ಥವೂ ನೆರವೇರಿತು..

ಸಾಮಾಜಿಕ ಜಾಲತಾಣದ ಸೆನ್ಸೇಷನಲ್ ಜೋಡಿ ಎಂದೇ ಈ ಜೋಡಿಯನ್ನು ಕರೆಯಲಾಗುತ್ತಿತ್ತು.. ರಕ್ಷಿತ್ ರಶ್ಮಿಕಾ ಅಭಿಮಾನಿಗಳು ಎನ್ನುವ ಹೆಸರಿನಲ್ಲಿ ಸಾಕಷ್ಟು ಫ್ಯಾನ್ಸ್ ಪೇಜ್ ಗಳು ಸಹ ತೆರೆದುಕೊಂಡಿದ್ದವು.. ನಂತರ ರಶ್ಮಿಕಾ ಒಂದರ ಹಿಂದೆ ಒಂದು ಸ್ಟಾರ್ ನಟರ ಜೊತೆ ಸಿನಿಮಾ ಮಾಡಲು ಬ್ಯುಸಿ ಆದರು.. ತೆಲುಗಿನ ವಿಜಯ್ ದೇವರಕೊಂಡ ಜೊತೆಗೆ ಗೀತಾ ಗೋವಿಂದಂ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು.. ಪುನೀತ್ ಅವರ ಜೊತೆ ಅಂಜನಿಪುತ್ರ.. ಗಣೇಶ್ ಜೊತೆ ಚಮಕ್.. ದರ್ಶನ್ ಅವರ ಜೊತೆ ಯಜಮಾನ ಹೀಗೆ ಸಾಲು ಸಾಲು ಹಿಟ್ ಸಿನಿಮಾಗಳಲ್ಲಿ ರಶ್ಮಿಕಾ ಅಭಿನಯಿಸಿದರು..

ಆದರೆ ತೆಲುಗಿಗೆ ಕಾಲಿಟ್ಟಿದ್ದೇ ಇಟ್ಟಿದ್ದು.. ರಶ್ಮಿಕಾ ಹಾಗೂ ರಕ್ಷಿತ್ ನಡುವೆ ವ್ಯಯಕ್ತಿಕ ಕಾರಣಕ್ಕೆ ಬ್ರೇಕ್ ಅಪ್ ಆಯಿತು.. ನಿಶ್ಚಿತಾರ್ಥ ಮುರಿದುಬಿದ್ದಿದೆ ಎಂದು ಖುದ್ದು ರಶ್ಮಿಕಾ ಅವರ ತಾಯಿಯೇ ಹೇಳಿಕೆ ನೀಡಿದ್ದರು.. ಆದರೆ ರಕ್ಷಿತ್ ಮಾತ್ರ ಸಾಮಾಜಿಕ ಜಾಲತಾಣದಿಂದ ದೂರ ಉಳಿದುಬಿಟ್ಟರು.. ಬಹಳಷ್ಟು ದಿನ ಹೊರಗೆಲ್ಲೂ ಕಾಣಿಸಿಕೊಳ್ಳಲಿಲ್ಲ.. ಆದರೆ ರಶ್ಮಿಕಾ ಮಾತ್ರ ತಾವು ಎಂದಿನಂತೆ ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿದ್ದು ತಮ್ಮ ಆಗುಹೋಗುಗಳನ್ನು ಹಂಚಿಕೊಳ್ಳುತ್ತಿದ್ದರು..

ಆದರೆ ಇತ್ತ ಸಾಮಾಜಿಕ ಜಾಲತಾಣದಲ್ಲಿ ರಕ್ಷಿತ್ ರಿಂದ ದೂರಾದ ರಶ್ಮಿಕಾ ಅವರನ್ನು ಬೇರೆ ಬೇರೆ ರೀತಿಯಲ್ಲಿ ಟ್ರೋಲ್ ಮಾಡಲಾಯಿತು.. ಬಹಳಷ್ಟು ಕೀಳಾಗಿಯೂ ರಶ್ಮಿಕಾ ಅವರನ್ನು ಟೀಕಿಸಲಾಗಿತ್ತು.. ಆದರೆ ಅದ್ಯಾವುದಕ್ಕೂ ರಶ್ಮಿಕಾ ತಲೆ ಕೆಡಿಸಿಕೊಂಡಿರಲಿಲ್ಲ.. ಪ್ರತಿಕ್ರಿಯೆಯೂ ನೀಡುತ್ತಿರಲಿಲ್ಲ.‌.

Rashmika-Mandanna

ಆದರೀಗ ಬಹಿರಂಗವಾಗಿಯೇ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.. ಹೌದು ಸಾಮಾಜಿಕ ಜಾಲತಾಣದಲ್ಲಿ ಸುಧೀರ್ಘ ಬರಹದ ಮೂಲಕ ಎಲ್ಕವನ್ನು ತಿಳಿಸಿದ್ದಾರೆ.. ಇಲ್ಲಿದೆ ನೋಡಿ ರಶ್ಮಿಕಾ ಅವರ ಮನದ ಮಾತುಗಳು “ನಾವೆಲ್ಲರೂ ನಮ್ಮ ನಮ್ಮ ಜೀವನದಲ್ಲಿ ಎಷ್ಟು ಸಂತೋಷವಾಗಿದ್ದೀವಿ ಎಂದರೆ ಮೊಬೈಲ್ ಅಥವಾ ಒಂದು ಟಚ್ ಮೂಲಕ ಯಾರು ಏನು ಬೇಕಾದರೂ ಮಾಡಬಹುದು.. ಇದರಿಂದ ಒಬ್ಬರ ಜೀವವನ್ನು ಉಳಿಸುವ ಶಕ್ತಿಯೂ ಇದೆ.. ಅದೇ ರೀತಿ ಒಬ್ಬರ ಜೀವನವನ್ನು ಹಾಳು ಮಾಡುವ ಶಕ್ತಿಯೂ ಇದೆ.. ನಾನು ಟ್ರೋಲ್ ಆಗಿದ್ದೀನಾ? ಹೌದು ಆಗಿದ್ದೀನಿ.. ನನಗೆ ಬಾಡಿ ಶೇಮಿಂಗ್ ಮಾಡಿದ್ದಾರಾ? ಹೌದು ಮಾಡಿದ್ದಾರೆ..

ನನ್ನ ನಡತೆ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರಾ? ಹೌದು ತುಂಬಾ ಮಾತನಾಡಿದ್ದಾರೆ.. ಸಾಮಾಜಿಕ ಜಾಲತಾಣದಲ್ಲಿ ನನ್ನನ್ನು ಕೆಟ್ಟ ರೀತಿಯಲ್ಲಿ ಅವಮಾನಿಸಿದ್ದಾರಾ? ಹೌದು ಅವಮಾನಿಸಿದ್ದಾರೆ.. ಇಷ್ಟೆಲ್ಲಾ ನನಗೆ ಆದರೂ ಕೂಡ ನಾನು ನನಗೆ ಸಂತೋಷ ಕೊಡುವಂತ ವಿಚಾರಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದನ್ನು ನಿಲ್ಲಿಸಲ್ಲ.. ಏಕೆಂದರೆ ನಮ್ಮ ಸುತ್ತ ಎಲ್ಲಕ್ಕಿಂತ ಮೀರಿದ ಪಾಸಿಟಿವಿಟಿ ಕೂಡ ಇದೆ.. ಎಲ್ಲರೂ ನೆಗಟಿವಿಟಿಯನ್ನೇ ನಿಜ ಎಂದುಕೊಳ್ಳುತ್ತಾರೆ.. ಆದರೆ ಅವೆಲ್ಲವೂ ಕ್ಷಣಿಕ.. ಈ ಕ್ಷಣದಿಂದ ಇನ್ನು ಮುಂದೆಯಾದರೂ ನಾವು ನಮ್ಮ ಫೋನುಗಳನ್ನು ಒಳ್ಳೆಯದಕ್ಕೆ ಬಳಸಿಕೊಳ್ಳಬೇಕು.. ಜನರ ಜೊತೆ ಸಂಪರ್ಕ ಹೊಂದಲು.. ಅದ್ಭುತ ವಿಚಾರಗಳನ್ನು ಹಂಚಿಕೊಳ್ಳಲು.. ಹಾಗೂ ಒಬ್ಬ ವ್ಯಕ್ತಿಯ ಬ್ಯುಸಿನೆಸ್ ಗೆ ಒಳ್ಳೆಯದಾಗಲು ಬಳಸ್ಬೇಕು.. ಹೀಗೆ ನೀವೂ ಮಾಡಿ.. ಮತ್ತೊಬ್ಬರಿಗೂ ಸ್ಪೂರ್ತಿಯಾಗಿ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.. ರಶ್ಮಿಕಾ ಅವರ ಈ ಮನದಾಳದ ಮಾತುಗಳಿಗೆ ಎಲ್ಲರೂ ಮೆಚ್ಚುಗೆ ಸಲ್ಲಿಸಿದ್ದು ಶೇರ್ ಮಾಡಿಕೊಂಡಿದ್ದಾರೆ..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •