ಸಾಮಾಜಿಕ ಜಾಲತಾಣ ಖಾತೆಗಳನ್ನು ನಿಷ್ಕ್ರಿಯಗೊಳಿಸಿದ್ದ ಮೋಹಕ ತಾರೆ ರಮ್ಯಾ

Cinema/ಸಿನಿಮಾ Home Kannada News/ಸುದ್ದಿಗಳು

ಮೋಹಕ ತಾರೆ ರಮ್ಯಾ ಯಾರಿಗೆ ತಾನೇ ಗೊತ್ತಿಲ್ಲ. ತಮ್ಮ ನಟನೆಯ ಮೂಲಕ ಒಂದು ಕಾಲದಲ್ಲಿ ಚಿತ್ರರಂಗದಲ್ಲಿ ಬಹುಬೇಡಿಕೆ ನಟಿಯಾಗಿದ್ದಾಕೆ. ಅಂದಹಾಗೆ, ನಟಿ ರಮ್ಯಾ ಸಿನಿಮಾದಿಂದ ದೂರ ಉಳಿದಿದ್ದಾರೆ. ಕಳೆದ ಲೋಕಸಭೆ ಚುನಾವಣೆ ಬಳಿಕ ರಾಜಕಾರಣದಿಂದಲೂ ದೂರಾಗಿಬಿಟ್ಟಿದ್ದಾರೆ. ಅದು ಅಲ್ಲದೇ ಲೋಕಸಭೆ ಚುನಾವಣೆ ಬಳಿಕ ತಮ್ಮ ಎಲ್ಲ ಸಾಮಾಜಿಕ ಜಾಲತಾಣ ಖಾತೆಗಳನ್ನು ನಿಷ್ಕ್ರಿಯಗೊಳಿಸಿದ್ದ ರಮ್ಯಾ ‘ಸಾಮಾಜಿಕ ಜೀವನ’ದಿಂದ ದೂರ ಉಳಿದಿದ್ದರು. ಇವರ ನಡೆ ಅಭಿಮಾನಿಗಳಿಗೆ ಕೊಂಚ ಬೇಸರವನ್ನು ತಂದಿತ್ತು.ಆ ನಂತರ ಸಾಮಾಜಿಕ ಜಾಲತಾಣದಲ್ಲಿ ಪ್ರತ್ಯಕ್ಷವಾಗಿ ಅಭಿಮಾನಿಗಳಿಗೆ ಖುಷಿ ನೀಡಿದ್ದರು. ಇವರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯಗೊಳಿಸುವುದು ಹಾಗೂನಿಷ್ಕ್ರಿಯಗೊಳಿಸುವುದು ಇದೆಲ್ಲವೂ ಹೊಸದೇನಲ್ಲ.ಆದರೆ ಈಗ ಮತ್ತೆ ಸಾಮಾಜಿಕ ಜಾಲತಾಣ ಖಾತೆಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ ನಟಿ ರಮ್ಯಾ. ಹೌದು, ಅವರ ಟ್ವಿಟ್ಟರ್, ಇನ್‌ಸ್ಟಾಗ್ರಾಂ ಖಾತೆಗಳನ್ನು ನಟಿ ರಮ್ಯಾ ನಿಷ್ಕ್ರಿಯಗೊಳಿಸಿದ್ದಾರೆ. ಇವರ ಈ ನಡೆಗೆ ಕಾರಣವೇನು? ಎಂಬುದು ತಿಳಿದು ಬಂದಿಲ್ಲ.ರಮ್ಯಾ ಎಂದೇ ಖ್ಯಾತಿ ಪಡೆದಿರುವ ದಿವ್ಯ ಸ್ಪಂದನ ಭಾರತೀಯ ನಟಿ ಹಾಗೂ ರಾಜಕಾರಣಿ ಆಗಿದ್ದಾರೆ.

Ramya

2003 ರಲ್ಲಿ ಇವರು ಪುನೀತ್ ರಾಜ್ ಕುಮಾರ್ ಅಭಿನಯಿಸಿದ ಅಭಿ ಚಿತ್ರದ ಮೂಲಕ ಕನ್ನಡ ಚಿತ್ರ ರಂಗದಲ್ಲಿ ನಾಯಕಿಯಾಗಿ ಸಿನಿಪಯಣ ಆರಂಭಿಸಿದರು. ಅಭಿ ಚಿತ್ರ ಭರ್ಜರಿ ಪ್ರದರ್ಶನ ಕಾಣುವ ಮೂಲಕ ರಮ್ಯರ ಸಿನಿಪಯಣಕ್ಕೆ ಭದ್ರ ಬುನಾದಿ ಹಾಕಿತು.ನಂತರ ಕನ್ನಡ ಚಿತ್ರರಂಗದ ದೊಡ್ಡ-ದೊಡ್ಡ ಸ್ಟಾರ್ ನಟರ ಜೊತೆಯಲ್ಲಿ ಅಭಿನಯಿಸಿ ಸ್ಯಾಂಡಲ್ ವುಡ್ ಕ್ವೀನ್ ಆಗಿ ಹೊರ ಹೊಮ್ಮಿದರು. ಹೀಗೆ ಹಲವು ಕನ್ನಡ ಚಿತ್ರಗಳು ಮಾತ್ರವಲ್ಲದೆ ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ರಮ್ಯಾ ಅವರು ಕೇವಲ ಚಿತ್ರರಂಗದಲ್ಲಿ ಅಷ್ಟೇ ಅಲ್ಲದೆ ರಾಜಕೀಯ ಕ್ಷೇತ್ರದಲ್ಲೂ ತಮ್ಮದೆ ಛಾಪು ಮೂಡಿಸಿದ್ದಾರೆ.

Ramya

ಇವರು 2011 ರಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡು 2013 ರ ಉಪಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ದಿಸಿ ಜಯಭೇರಿ ಬಾರಿಸಿ ಮೊದಲ ಬಾರಿಗೆ ಲೋಕಸಭಾ ಪ್ರವೇಶ ಮಾಡಿದರು.ನಂತರ 16ನೇ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪುನಃ ಸ್ಪರ್ಧಿಸಿ ಜೆಡಿ(ಎಸ್)ನ ಸಿ ಎಸ್ ಪುಟ್ಟರಾಜು ಅವರ ವಿರುದ್ಧ ಸೋಲು ಕಂಡರು. ಒಂದು ಬಾರಿ ಲೋಕಸಭೆಯನ್ನು ಪ್ರವೇಶ ಮಾಡಿರುವ ರಮ್ಯಾ ಅವರು ಕಾಂಗ್ರೆಸ್ ಪಕ್ಷದಲ್ಲಿ ತಮ್ಮದೆಯಾದ ವರ್ಚಸ್ಸನ್ನು ಹೊಂದಿದ್ದಾರೆ. ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯಾಗಿ ಕೂಡ ಕಾರ್ಯ ನಿರ್ವಹಿಸಿದ್ದಾರೆ. ಜೊತೆಗೆ ಸಿನಿಮಾದಲ್ಲಿನ ಇವರ ನಟನೆಗೆ ಅನೇಕ ಪ್ರಶಸ್ತಿಗಳು ಬಂದಿದೆ.

Ramya

ಇನ್ನು 2016 ರಲ್ಲಿ ಬಿಡುಗಡೆ ಆದ ‘ನಾಗರಹಾವು’ ಸಿನಿಮಾವೇ ರಮ್ಯಾ ನಟಿಸಿದ್ದ ಕೊನೆಯ ಸಿನಿಮಾ. ಆ ನಂತರ ರಮ್ಯಾ ಪ್ರೊಡಕ್ಷನ್ ಹೌಸ್ ಪ್ರಾರಂಭಿಸುತ್ತಾರೆ ಎನ್ನಲಾಗಿತ್ತು ಆದರೆ ಆ ಕೆಲಸದ ಕಡೆ ಗಮನ ಕೊಡದೇ, ರಾಜಕೀಯದಲ್ಲೂ ಸಕ್ರಿಯರಾಗಿರದೇ ಎಲ್ಲದರಿಂದ ದೂರ ಉಳಿದುಬಿಟ್ಟಿದ್ದಾರೆ ಈ ನಟಿ. ಇದೀಗ ಸಾಮಾಜಿಕ ಜಾಲತಾಣ ಖಾತೆಯನ್ನು ನಿಷ್ಕ್ರಿಯಗೊಳಿಸುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.ಇದು ಅಭಿಮಾನಿಗಳಿಗೆ ಆಶ್ಚರ್ಯ ತರಿಸಿದೆ.

ರಮ್ಯಾ ಅವರು ಮೊದಲಿನಷ್ಟು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರಿಲ್ಲವಾದರೂ ಆಗಾಗ್ಗೆ ಪ್ರಾಣಿಗಳ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು. ತಾವು ಮಾಂಸಾಹಾರ ತ್ಯಜಿಸಿದ್ದರ ಬಗ್ಗೆ ಬರೆದುಕೊಂಡಿದ್ದರು. ರೈತರ ಪ್ರತಿಭಟನೆಗೆ ಬೆಂಬಲ ನೀಡಿದ್ದರು. ದಿಶಾ ರವಿಗೆ ಬೆಂಬಲ ನೀಡಿದ್ದರು. ನಟಿ ಕಂಗನಾ ಟ್ವೀಟ್‌ಗೆ ಟಾಂಗ್ ನೀಡಿದ್ದರು ರಮ್ಯಾ. ಬಾಲಿವುಡ್‌ಗೆ ಬೆನ್ನುಮೂಳೆ ಇಲ್ಲವೆಂದು ಟ್ವೀಟ್ ಮಾಡಿದ್ದರು. ಆದರೆ ಈಗ ಏಕಾ-ಏಕಿ ಸಾಮಾಜಿಕ ಜಾಲತಾಣದಿಂದ ದೂರವಾಗಿದ್ದಾರೆ. ಆದರೆ ಇದಕ್ಕೆ ಕಾರಣವೇನು ಎಂಬುದು ತಿಳಿದು ಬಂದಿಲ್ಲ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...