ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಗೆ ಸಿಡಿ ಸಂಕಷ್ಟ ಎದುರಾಗಿದೆ.  2017 ರಲ್ಲಿ ಯುವತಿಗೆ ಕೆಪಿಟಿಸಿಎಲ್ ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಳ್ಳಲಾಗಿದೆ ಎಂದು ನಾಗರಿಕ ಹಕ್ಕು ಹೋರಾಟ ಸಮಿತಿಯ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ ಆರೋಪಿಸಿದ್ದಾರೆ.
ಕೆಲಸ ಕೊಡಿಸುವ ಆಮಿಷವೊಡ್ಡಿ ಯುವತಿಯೊಬ್ಬರ ಜೊತೆ ಸಲುಗೆ ಬೆಳೆಸಿ ಲೈಂಗಿಕ ಸಂಪರ್ಕವಿಟ್ಟುಕೊಂಡಿದ್ದ ಸಿಡಿ ದೃಶ್ಯಗಳನ್ನಿಟ್ಟುಕೊಂಡು  ದಿನೇಶ್ ಕಲ್ಲಹಳ್ಳಿ ಬೆಂಗಳೂರಿನ ಕಬ್ಬನ್ ಪಾರ್ಕ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದೇ ಪ್ರಕರಣ ಸಂಬಂಧ ದೂರು ನೀಡಲು ದಿನೇಶ್, ಕಮಿಷನರ್ ಕಮಲ್ ಪಂತ್ ಅವರ ಕಚೇರಿಗೆ ಹೋಗಿದ್ದರು. ಸಂಬಂಧಪಟ್ಟ ಠಾಣೆಗೆ ಹೋಗಿ ದೂರು ನೀಡುವಂತೆ ಕಮಿಷನರ್ ಹೇಳಿದ್ದರು.

ಕೆಪಿಟಿಸಿಎಲ್ನಲ್ಲಿ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿದ್ದ ಸಚಿವ, ಯುವತಿ ಜೊತೆ ಸಲುಗೆ ಬೆಳೆಸಿಕೊಂಡಿದ್ದರು. ವೈಯಕ್ತಿಕ ಫೋಟೋ ಹಾಗೂ ವಿಡಿಯೊ ಪಡೆದುಕೊಂಡು ಅಶ್ಲೀಲವಾಗಿ ಮಾತನಾಡಿದ್ದರು. ಕೊಠಡಿಯೊಂದರಲ್ಲಿ ಯುವತಿ ಜೊತೆ ಖಾಸಗಿ ಕ್ಷಣಗಳನ್ನು ಕಳೆದಿದ್ದರು. ಈ ದೃಶ್ಯ ವಿಡಿಯೋದಲ್ಲಿದೆ.
ಆ ಯುವತಿ ಯಾರು?

ರಮೇಶ್ ಜಾರಕಿಹೊಳಿ

ಇನ್ನು ಕಬ್ಬನ್ ಪಾರ್ಕ್ ಠಾಣೆಯಲ್ಲಿ ದಿನೇಶ್ ದೂರು ನೀಡಿದ್ದು, ಪರಿಶೀಲನೆ ನಡೆಯುತ್ತಿದೆ. ಯುವತಿ ಯಾರು ? ವಿಡಿಯೋ ಹಾಗೂ ಫೋಟೋಗಳು ನಿಮಗೆ ಎಲ್ಲಿ ಸಿಕ್ಕವು? ಎಂಬ ಹಲವು ಮಾಹಿತಿಗಳನ್ನು ಇನ್ಸ್ಪೆಕ್ಟರ್ ಪಡೆದುಕೊಂಡಿದ್ದಾರೆ. ಎಲ್ಲ ಮಾಹಿತಿ ಪಡೆದು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್. ಅನುಚೇತ್ ಪ್ರತಿಕ್ರಿಯಿಸಿ, ದಿನೇಶ್ ಎಂಬುವರು ಠಾಣೆಗೆ ಬಂದು ನಮಗೊಂದು ದೂರು ಕೊಟ್ಟಿದ್ದಾರೆ. ತನಿಖೆ ಆರಂಭಿಸಲಾಗಿದ್ದು, ಸಂತ್ರಸ್ತೆ ಹಾಗೂ ಅವರ ಕುಟುಂಬದವರನ್ನು ಸಂಪರ್ಕಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

ಸಚಿವರು, ಮಹಿಳೆಗೆ ಬೆದರಿಕೆಯೊಡ್ಡಿದ್ದಾರೆ. ಈ ಬಗ್ಗೆ ಸಂತ್ರಸ್ತೆ ಹಾಗೂ ಕುಟುಂಬಸ್ಥರು, ತನಗೆ ತಿಳಿಸಿರುವುದಾಗಿ ದೂರುದಾರ ದಿನೇಶ್ ಹೇಳಿದ್ದಾರೆ. ನಾವೇ ಸಂತ್ರಸ್ತೆ ಹಾಗೂ ಕುಟುಂಬದವರನ್ನು ಸಂಪರ್ಕಿಸಿ ಹೇಳಿಕೆ ಪಡೆದು ಮುಂದಿನ ಕ್ರ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ರಮೇಶ್ ಜಾರಕಿಹೊಳಿ ಜೊತೆ ಯುವತಿ ಮಾತನಾಡಿದ್ದೇನು..?

ಹಲೋ ಸಾರ್, ನಾನು ಇನ್ಸ್ಟಾಗ್ರಾಮ್ ವಿಡಿಯೋ ಕಳ್ಸಿದ್ದು ಸಾರ್, ನೀವು ಅದನ್ನು ನೋಡಿಲ್ಲ ಅನ್ಸುತ್ತೆ. ಅದಕ್ಕೆ ಜಾರಕಿಹೊಳಿ ಅವರು, ಹೌದು, ಓಪನ್ ಆಗ್ತಿಲ್ಲ ಅದು, ನಾನ್ ಟ್ರೈ ಮಾಡ್ದೆ ಎಂದಿದ್ದಾರೆ. ಅದಕ್ಕೆ ಯುವತಿ ನಿಮ್ಮ ಬಳಿ ಇನ್ಸ್ಟಾ ಗ್ರಾಮ್ ಅಕೌಂಟ್ ಇಲ್ಲ ಅನ್ಸುತ್ತೆ. ಅದಕ್ಕೆ ಅದು ಓಪನ್ ಆಗ್ತಿಲ್ಲ ಅನ್ಸುತ್ತೆ ಎಂದಿದ್ದಾಳೆ. ಅದಕ್ಕೆ ಸಚಿವರು ವಾಟ್ಸಪ್ ನಲ್ಲಿ ವಿಡಿಯೋ ಕಳಿಸಲು ಸೂಚಿಸಿದ್ದು, ಯುವತಿ ಸರಿ ಎಂದಿದ್ದಾಳೆ. ಬಳಿಕ ಯುವತಿ ಡ್ಯಾಂ ಕೆಲಸ ಎಲ್ಲಾ ಸ್ವಲ್ಪ ಮಾಡಿಕೊಟ್ರೆ ಸಹಾಯವಾಗುತ್ತೆ ಎಂದಿದ್ದಕ್ಕೆ ಸಚಿವರು ಮಾಡಿ ಕೊಡುವುದಾಗಿ ಹೇಳಿದ್ದಾರೆ.

ಇದಾದ ಬಳಿಕ ಸಚಿವರು ಯುವತಿಯ ಹವ್ಯಾಸದ ಬಗ್ಗೆ ವಿಚಾರಿಸಿದ್ದಾರೆ. ಅದಕ್ಕೆ ಯುವತಿ, ಬುಕ್ ಓದೋದು, ಮೂವೀ ನೋಡೋದು ಅಷ್ಟೇ ಎಂದು ಉತ್ತರಿಸಿದ್ದಾಳೆ. ಅಷ್ಟೇ ಅಲ್ಲದೇ, ನೀವು ಡ್ರಿಂಕ್ಸ್ ಮಾಡುತ್ತೀರಾ ಎಂದೂ ಕೂಡ ಸಚಿವರು ಯುವತಿಯನ್ನು ಕೇಳಿದ್ದಾರೆ. ಈ ಪ್ರಶ್ನೆಗೆ ಯುವತಿ ಒಂದೇ ಒಂದು ಸಲ ಟ್ರೈ ಮಾಡಿದ್ದೀನಿ ಎಂದು ಹೇಳಿದ್ದಾಳೆ. ಬಳಿಕ ಯುವತಿ ಡ್ರೋನ್ ಪ್ಲೇನ್ ಆಗಲ್ವಾ ಎಂದು ಕೆಲಸದ ಬಗ್ಗೆ ವಿಚಾರಿಸಿದ್ದು, ಸಚಿವರು ನೋಡಬೇಕು ಎಂದು ಉತ್ತರಿಸಿದ್ದಾರೆ. ಇನ್ನು ಯುವತಿಯ ಕೆಲಸದಲ್ಲಿ ಆಕೆ ಒಬ್ಬಳೆ ಇರುತ್ತಾಳಾ ಅಥವಾ ಟೀಮ್ ಇದ್ಯಾ ಎಂದು ತಿಳಿದುಕೊಳ್ಳಲು ಯತ್ನಿಸಿದ್ದು, ಯುವತ್ತಿ ನಮ್ಮ ಟೀಮ್ ನಲ್ಲಿ ಮೂವರು ಇದ್ದೀವಿ ಎಂದು ಹೇಳಿದ್ದಾಳೆ.

ಈ ಕೆಲಸದಿಂದ ನಿಮಗೆ ಏನು ಬೆನಿಫಿಟ್ ಇದೆ ಎಂದು ಸಚಿವರು ಕೇಳೀದ್ದು, ಹುಡುಗಿ, ಇದರಿಂದ ಬೆನಿಫಿಟ್ ಇಲ್ಲ ಬಟ್ ನಮ್ಮ ಊರಿನ ಜನಗಳಿಗೆ ನಮ್ಮಲ್ಲಿ ಡ್ಯಾಮ್ ಇರೋದರ ಬಗ್ಗೆ ಗೊತ್ತಾಗುತ್ತೆ. ಇವನ್ನೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡ್ತೀವಿ ಎಂದಿದ್ದಾಳೆ.

ಯುವತಿ ಇರೋದು ಎಲ್ಲಿ..?
ಇಷ್ಟೆಲ್ಲಾ ಆದಮೇಲೆ, ಸಚಿವರು ಯುವತಿ ಉಳಿದುಕೊಂಡಿರುವ ಸ್ಥಳದ ಬಗ್ಗೆಯೂ ಮಾಹಿತಿ ಪಡೆದಿದ್ದಾರೆ. ಯುವತಿ, ಹೆಬ್ಬಾಳದ ಬಳಿ ಮೇಕ್ರಿ ಸರ್ಕಲ್ ಲೆಫ್ಟ್ ನಲ್ಲಿರುವ ಸಿಬಿಐ ಆಫೀಸ್ ಬ್ಯಾಕ್ ಸೈಡ್ ನ ಆರ್ ಟಿ ನಗರದ ಬಳಿ ಪಿಜಿಯೊಂದರಲ್ಲಿ ಇದ್ದು, ಮೇನ್ ರೋಡ್ ಬಳಿಯೇ ಇರುವುದಾಗಿ ತಿಳಿಸಿದ್ದಾಳೆ. ಅಲ್ಲದೇ, ಕೆಲವು ಅಶ್ಲೀಲ ಮಾತುಗಳನ್ನು ಸಹ ಆಡಿದ್ದಾಳೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •