ಕೊರೊನಾ ೨ನೇ ಅಲೆ ಎಲ್ಲಾ ಕಡೆ ತಾಂಡವವಾಡುತ್ತಿದೆ. ರಾಜ್ಯ ಸರ್ಕಾರ ಕೂಡ ಕೆಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಆ ಪ್ರಕಾರ ಮದುವೆ ಸಮಾರಂಭಗಳಿಗೆ ಕೇವಲ ೫೦ ಜನರು ಮಾತ್ರ ಸೇರಲು ಅವಕಾಶ ಮಾಡಿಕೊಡಲಾಗಿದೆ. ಅದೇ ರೀತಿ ಅಂತ್ಯಸಂಸ್ಕಾರಕ್ಕೆ ೨೦ ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಇದು ಸಾಮಾನ್ಯ ಜನರಿಂದ ಹಿಡಿದು ಎಲ್ಲಾ ವರ್ಗದ ಜನರಿಗೂ ಅನ್ವಯವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

 

 

ಆದರೆ ಮಾರ್ಗಸೂಚಿಯ ಅನ್ವಯ ಮದುವೆ ಮನೆಗೆ ಹೋಗಬೇಕಾದರೆ ಪೊಲೀಸರಿಂದ ಅನುಮತಿ ಪತ್ರ ಹಾಗೂ ಮದುವೆಗೆ ತೆರಳುತ್ತಿರುವ ಲಗ್ನಪತ್ರಿಕೆಯನ್ನು ತಮ್ಮ ಜೊತೆಗೆ ಇಟ್ಟುಕೊಂಡಿರಬೇಕು. ಹಾಗೆಂದ ಮಾತ್ರಕ್ಕೆ ಸುಖಾಸುಮ್ಮನೆ ಲಗ್ನ ಪತ್ರಿಕೆ ಹಿಡಿದುಕೊಂಡು ಎಲ್ಲರೂ ರಸ್ತೆಯಲ್ಲಿ ಓಡಾಡುವಂತಿಲ್ಲ. ಮದುವೆಗೆ ತೆರಳುವುದಾದರೆ ಯಾವ ವಾಹನ, ವಾಹನ ಸಂಖ್ಯೆ, ವಾಹನದಲ್ಲಿ ಪ್ರಯಾಣಿಸುವವರ ಸಂಖ್ಯೆ ಮುಂತಾದ ಮಾಹಿತಿಯನ್ನು ಖಡ್ಡಾಯವಾಗಿ ತಮ್ಮೊಂದಿಗೆ ಒಯ್ಯಬೇಕಾಗುತ್ತದೆ.

 

 

ಅದನ್ನು ಬಿಟ್ಟು ಸುಖಾಸುಮ್ಮನೆ ಯಾರು ಬೇಕಾದರೂ ಯಾವ ವಾಹನದಲ್ಲಾದರೂ ಹೋಗಲು ಅವಕಾಶವಿರುವುದಿಲ್ಲ ಎಂದು ಪೊಲೀಸರು ಮಂಡ್ಯ ರಮೇಶ್ ಅವರ ಕಾರು ನಿಲ್ಲಿಸಿ ಬುದ್ಧಿ ಹೇಳಿದ್ದಾರೆ. ಮಂಡ್ಯ ರಮೇಶ್ ಅವರು ಬೆಂಗಳೂರಿನಿಂದ ಮದುವೆಗೆ ತೆರಳಲು ಅನುಮತಿ ಪತ್ರ ಹಾಗೂ ಲಗ್ನ ಪತ್ರಿಕೆಯನ್ನು ತಮ್ಮ ಜೊತೆಗೆ ಇಟ್ಟುಕೊಂಡು ಪ್ರಯಾಣ ಮಾಡುತ್ತಿದ್ದ ವೇಳೆ ಪೊಲೀಸರು ಕಾರನ್ನು ತಡೆದುನಿಲ್ಲಿಸಿ ವಿಚಾರಣೆ ಮಾಡಿದ್ದಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •