ರಂಭಾ ಮೂಲತಃ ಆಂಧ್ರ ಪ್ರದೇಶದ ವಿಜಯವಾಡದವರು. ಇವರ ಮೂಲ ಹೆಸರು ವಿಜಯಲಕ್ಷ್ಮಿ ಈಡಿ. ಸಿನಿಮಾ ರಂಗಕ್ಕೆ ಬಂದ ಮೇಲೆ ಇವರು ರಂಭಾ ಎಂಬ ಹೆಸರಿನಿಂದಲೇ ಫೇಮಸ್ ಆದರು. ರಂಭಾ ಅವರು ತಮ್ಮ ಹದಿನೈದನೇ ವಯಸ್ಸಿನಲ್ಲಿ ಮಲಯಾಳಂ ನಟ ವಿನೀತ್ ರವರ ಸ್ವರ್ಗಂ ಎಂಬ ಚಿತ್ರಕ್ಕೆ ನಾಯಕಿಯಾಗಿ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಸಿನಿಮಾ ಒಳ್ಳೆಯ ಹೆಸರನ್ನು ಮಾಡಿತ್ತಾದರೂ ರಂಭಾ ಅವರು ಜನಪ್ರಿಯರಾಗಿದ್ದು ಈ ವಿವಿ ಸತ್ಯನಾರಾಯಣ್ ಅವರ 1992 ರಲ್ಲಿ ನಿರ್ಮಾಣವಾದ “ಒಕ್ಕಟಿ ಅಡಕ್ಕೂ” ಎಂಬ ತೆಲುಗು ಸಿನಿಮಾದ ಮೂಲಕ.

ತೊಂಬತ್ತರ ದಶಕದಲ್ಲಿ ಗ್ಲಾಮರ್ ನಾಯಕಿಯರ ಸಾಲಿಗೆ ಸೇರ್ಪಡೆಯಾಗುತ್ತಾರೆ. ಜಗ್ಗೇಶ್ ಅವರ ಸರ್ವರ್ ಸೋಮಣ್ಣ ಚಿತ್ರಕ್ಕೆ ನಾಯಕಿಯಾಗಿ ನಟಿಸುವ ಮೂಲಕ ರಂಭಾ ಸ್ಯಾಂಡಲ್ ವುಡ್ ಚಿತ್ರರಂಗಕ್ಕೆ ಪ್ರವೇಶ ಮಾಡುತ್ತಾರೆ. ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೆ ಬಾಲಿವುಡ್ ನಲ್ಲಿ ಸಹ ನಟಿಸಿ ಹೆಸರು ಗಳಿಸಿದ್ದಾರೆ. ಟಾಲಿವುಡ್ ಬಾಲಿವುಡ್ ಸ್ಯಾಂಡಲ್ವುಡ್ ಗಳಲ್ಲಿ ಎಲ್ಲಾ ಸೂಪರ್ ಸ್ಟಾರ್ ಗಳ ಜೊತೆ ನಟಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ . ತಮಿಳಿನಲ್ಲಿ ಸಾಲು ಸಾಲು ಹಿಟ್ ಸಿನಿಮಾಗಳ ನಾಯಕಿಯಾದರು.

 

ಇನ್ನೂ ಬೇಡಿಕೆಯ ನಟಿಯಾಗಿರುವಾಗಲೇ 8 ಏಪ್ರಿಲ್‌ 2010 ಕೆನಡಾ ಮೂಲದ ಭಾರತೀಯ ಉದ್ಯಮಿ ಇಂದ್ರಕುಮಾರ್ ಪದ್ಮನಾಥನ್ ರವರ ಜೊತೆ ವಿವಾಹವಾದರು. ನಂತರ ಟೊರಾಂಟೊದಲ್ಲಿ ಗಂಡನ ಜೊತೆ ಸೆಟ್ಲ್ ಆಗಿಬಿಟ್ಟರು. ಮತ್ತೆ ಸಿನಿಮಾ ರಂಗಕ್ಕೆ ಬರಲಿಲ್ಲ. ತೆಲುಗಿನ ಟಿವಿ ಕಾರ್ಯಕ್ರಮವೊಂದಕ್ಕೆ ಒಮ್ಮೆ ಆಗಮಿಸಿದ್ದರು. ತದ ನಂತರ ಒಂದು ಡ್ಯಾನ್ಸ್ ರಿಯಾಲಿಟಿ ಶೋನ ಜಡ್ಜ್ ಕೂಡ ಆಗಿದ್ದರು.

ನಂತರ ಯಾವುದೇ ಸಿನಿಮಾಗಳಲ್ಲಿ ಈ ನಟಿ ನಟಿಸಲಿಲ್ಲ. ಎರಡು ಹೆಣ್ಣು ಮಗು ಒಂದು ಗಂಡು ಮಗುವಿನ ತಾಯಿಯಾಗಿರುವ ರಂಭಾ ಅವರು ಕುಟುಂಬಕ್ಕೆ ಮೊದಲ ಆದ್ಯತೆ ಎಂದು ಹೇಳಿಕೊಳ್ಳುತ್ತಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •