ನಮಸ್ತೆ ಸ್ನೇಹಿತರೆ ಆಂಧ್ರಪ್ರದೇಶದ ರಾಜ್ಯದ ವಿಜಯವಾಡದಲ್ಲಿ ಜನಿಸಿದ ರಂಭಾ ಸಪ್ತಭಾಷಾ ನಟಿ. ಇವರ ಬಾಲ್ಯದ ಹೆಸರು ವಿಜಯಲಕ್ಷ್ಮಿ. 1992 ರಲ್ಲಿ ತೆರೆಕಂಡ ಮಲಯಾಳಂ ಚಿತ್ರ `ಸರ್ಗಂ’ದಿಂದ ಸಿನಿಪಯಣ ಆರಂಭಿಸಿದ ವಿಜಯಲಕ್ಷ್ಮಿ ಅದೇ ವರ್ಷದಲ್ಲಿ ತೆರೆಕಂಡ ತೆಲುಗು ಚಿತ್ರ `ಆ ಒಕ್ಕಟಿ ಅಡಕ್ಕು’ ಚಿತ್ರದಲ್ಲಿನ `ರಂಭಾ’ ಪಾತ್ರದಿಂದ ಗಮನ ಸೆಳೆದರು. ಮುಂದೆ ಈ ಪಾತ್ರದ ಹೆಸರೇ ಇವರ ಹೆಸರಾಯಿತು.ಕನ್ನಡ,ತೆಲುಗು,ತಮಿಳು,ಮಲಯಾಳಂ,ಹಿಂದಿ,ಭೋಜಪುರಿ,ಬೆಂಗಾಳಿ ಭಾಷೆಗಳಲ್ಲಿ ಸುಮಾರು 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ರಂಭಾ ಕೆಲವು ಕಿರುತೆರೆ ಶೋಗಳಲ್ಲಿ ಜಡ್ಜ ಆಗಿಯೂ ಕೆಲಸ ಮಾಡಿದ್ದಾರೆ.2003 ರಲ್ಲಿ ತಮ್ಮ ಸಹೋದರನ ಜೊತೆ ಸೇರಿ `3 ರೋಜ್ಸ್’ ಎಂಬ ಚಿತ್ರ ನಿರ್ಮಿಸಿ ತುಂಬಾ ನಷ್ಟ ಅನುಭವಿಸಿದರು.

2010ರಲ್ಲಿ ಟೊರೊಂಟೊದಲ್ಲಿ ನೆಲೆಸಿದ ಭಾರತೀಯ ಉದ್ಯಮಿ ಇಂದ್ರಕುಮಾರವರನ್ನು ವರಿಸಿದ ರಂಭಾಗೆ ಇಬ್ಬರು ಪುತ್ರಿಯಿದ್ದಾರೆ. ಕೆಲಕಾಲ ಚಿತ್ರರಂಗದಿಂದ ವಿರಾಮ ತೆಗೆದುಕೊಂಡು ಕೆನಡಾದಲ್ಲಿ ನೆಲೆಸಿದ ರಂಭಾ 2016 ರಲ್ಲಿ ಮತ್ತೆ ಭಾರತಕ್ಕೆ ಬಂದರು.ಕನ್ನಡ ಚಿತ್ರರಂಗದಲ್ಲಿ `ಸರ್ವರ್ ಸೋಮಣ್ಣ’ ಚಿತ್ರದಿಂದ ಸಿನಿಪಯಣ ಆರಂಭಿಸಿದ ಇವರು ನಂತರ `ಓ ಪ್ರೇಮವೇ’,`ಭಾವ ಭಾಮೈದ’,`ಸಾಹುಕಾರ’,`ಪಾಂಡುರಂಗ ವಿಠ್ಠಲ’,`ಗಂಡುಗಲಿ ಕುಮಾರರಾಮ’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಪಂಚಭಾಷಾ ಸಿನಿಮಾಗಳಲ್ಲಿ ನಟಿಸಿದ ಖ್ಯಾತ ನಟಿ ರಂಭಾ ಈಗ ತನ್ನ ವೈವಾಹಿಹ ಜೀವನವನ್ನು ಉಳಿಸಿಕೊಳ್ಳಲು ಕೋರ್ಟ್ ಮೆಟ್ಟಿಲೇರಿದ್ದಾರೆ.

ಆದರೆ ಕಲವು ತಿಂಗಳ ಹಿಂದೆ ಕೆಲವೊಂದು ವೈಯುಕ್ತಿಕ ಕಾರಣಗಳಿಂದ ಇವರ ಮಧ್ಯೆ ಬಿರುಕು ಮೂಡಿದ್ದು, ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ರಂಭಾ ತನ್ನ ಪತಿ ಪದ್ಮನಾಥನ್ ತನ್ನ ಬಳಿ ಹಿಂತಿರುಗಬಹುದೆಂದು ಭಾವಿಸಿದ್ದರು. ಇದೀಗ ಪರಿಸ್ಥಿತಿ ಕೈ ಮೀರುತ್ತಿದ್ದು, ಮತ್ತೆ ಈ ನಟಿ ತನ್ನ ಪತಿಯೊಂದಿಗೆ ಬಾಳಲು ನಿರ್ಧರಿಸಿದ್ದಾರೆ. ಇದೇ ನಿಟ್ಟಿನಲ್ಲಿ ತನ್ನ ವೈವಾಹಿಕ ಸಂಬಂಧ ಉಳಿಸಿಕೊಳ್ಳಲು ಕೋರ್ಟ್ ಮೆಟ್ಟಿಲೇರಿದ್ದಾರೆ.ಮದ್ವೆಯಾದ ಬಳಿಕ ಕೆನಡಾದ ಟೊರೆಂಟೋದಲ್ಲಿ ರಂಭಾ ತನ್ನ ಪತಿಯ ಜೊತೆ ಸೆಟ್ಲ್ ಆಗುತ್ತಾರೆ. ಇನ್ನು ರಂಭಾ ಇಂದ್ರನ್ ದಂಪತಿಗೆ ಇಬ್ಬರು ಹೆಣ್ಣುಮಕ್ಕಳು ಹಾಗೂ ಒಂದು. ಹಿರಿಯಾ ಮಗಳು ಲನ್ಯಾ, ಎರಡನೆಯ ಮಗಳು ಸಶಾ ಹಾಗೂ ಮಗ ಸೇರಿದಂತೆ ಮೂರು ಜನ ಮಕ್ಕಳಿದ್ದಾರೆ.ಇನ್ನು ಕೆಲ ವರ್ಷಗಳ ಹಿಂದಷ್ಟೇ ನಟಿ ರಂಭಾ ಅವರ ಸಂಸಾರಿಕಾ ಜೀವನದಲ್ಲಿ ಬಿರುಕು ಮೂಡಿತ್ತು ಎಂದು ಹೇಳಲಾಗಿದ್ದು, ಪತಿ ಇಂದ್ರನ್ ರಂಭಾ ಅವರನ್ನ ಮದ್ವೆಯಾಗುವುದಕ್ಕೆ ಮುಂಚೆಯೇ ಮದ್ವೆಯಾಗಿದ್ದರು ಎಂಬುದು ಕರಣ ಎಂದು ಹೇಳಲಾಗಿತ್ತು.

ತನಗೆ ಮೊದಲೇ ಮದ್ವೆಯಾಗಿರುವ ವಿಷಯ ಹೇಳದೆ ಮಚ್ಚಿಟ್ಟು ತನ್ನನ್ನ ಎರಡನೇ ಮದ್ವೆಯಾಗಿದಕ್ಕೆ ಇವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದ್ದು ಇವರಿಬ್ಬರು ಬೇರೆಯಾಗಿದ್ದರೂ ಎಂದು ಹೇಳಲಾಗಿದೆ.ಜೊತೆಗೆ ಮಕ್ಕಳನ್ನ ನೋಡಲು ಅವಕಾಶ ಕಲ್ಪಿಸುತ್ತಿರಲಿಲ್ಲ ಎಂದು ಹೇಳಲಾಗಿದ್ದು, 2016ರಲ್ಲಿ ನಟಿ ರಂಭಾ ಜೀವ ಕಳೆದುಕೊಳ್ಳುವ ಪ್ರಯತ್ನ ಮಾಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಹೇಳಲಾಗಿತ್ತು. ಇನ್ನು ಈ ಗಾಸಿಪ್ ಗಳಿಗೆಲ್ಲಾ ಸ್ಪಷ್ಟಿಕರಣ ನೀಡಿದ್ದ ನಟಿ ರಂಭಾ ನಾನು ಯಾವುದೇ ರೀತಿಯ ಕೆಟ್ಟ ನಿರ್ಧಾರ ತೆಗೆದುಕೊಂಡಿರಲಿಲ್ಲ. ಮನೆಯಲ್ಲಿ ಪೂಜೆ ಇದ್ದು, ದಿನ ಪೂರ್ತಿ ಉಪವಾಸ ಮಾಡಿದ್ದೆ. ಬಳಿಕ ಮಾರನೇ ದಿನ ಚಿತ್ರೀಕರಣಕ್ಕೆಂದು ಹೋಗಿದ್ದಾಗ ಪ್ರಜ್ಞೆ ತಪ್ಪಿ ಬಿದ್ದಿದ್ದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದೆ ಎಂದು ಆಗ ರಂಭಾ ಹೇಳಿದ್ದರು. ಇನ್ನು ರಂಭಾ ಅವರ ತಮ್ಮ ಕುಟುಂಬದ ಜೊತೆ ಕೆನಡಾದ ಟೊರೆಂಟೋದಲ್ಲಿ ಪತಿ ಮಕ್ಕಳ ಜೊತೆ ವಾಸ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ…

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •