ಕನ್ನಡ ಬೆಳ್ಳಿ ತೆರೆಯ ಖ್ಯಾತ ಕಲಾವಿದ ಸುಂದರ್ ರಾಜ್ ಒಮ್ಮೆ ಶೂಟಿಂಗ್ ಮುಗಿಸಿ ತಮ್ಮ ಕಾರ್ ನಲ್ಲಿ ಪ್ರಯಾಣ ಮಾಡುತಿದ್ದರು. ಹಾಗೆ ಹೋಗುವಾಗ ರಸ್ತೆಯಲ್ಲಿ ಅಣ್ಣಾವ್ರ ಕಾರನ್ನು ಕಂಡರು. ಅವರಿಗೆ ಡಾ. ರಾಜ್ ಎಂದರೆ ಏನೋ ಒಂದು ತರದ ಸಂಕೋಚ, ಮುಜುಗರ. ಏಕೆಂದರೆ ಆ ಸಮಯಕ್ಕಾಗಲೇ ಅಣ್ಣಾವ್ರು ಕನ್ನಡದ ಮೇರು ನಟ, ಧ್ರುವತಾರೆಯಾಗಿದ್ದರು. ಸುಂದರ್ ರಾಜ್ ಆಗ ಚಿಕ್ಕ ಪುಟ್ಟ ಪಾತ್ರ ಮಾಡಿಕೊಂಡಿದ್ದರು. ಮುಜುಗರದಿಂದ ಅವರು ರಾಜ್ ಕುಮಾರ್ ಅವರನ್ನು ನೋಡಿದರೂ ನೋಡದಂತೆ ಮುಂದೆ ಹೋಗಿಬಿಟ್ಟರು. ಸ್ವಲ್ಪ ಸಮಯದ ಬಳಿಕ ಹಿಂದಿರುಗಿ ನೋಡಿದಾಗ ರಾಜಕುಮಾರ್ ಅವರ ಕಾರು ಪತ್ತೆಯೇ ಇರಲಿಲ್ಲ. ಇದೇನು ಅಣ್ಣಾವ್ರು ಬರಲೇ ಇಲ್ಲವಲ್ಲ ಎಂದುಕೊಂಡ ಸುಂದರ್ ರಾಜ್ ಯೂಟರ್ನ್ ಮಾಡಿಕೊಂಡು ವಾಪಸ್ ಹೋಗಿ ನೋಡಿದಾಗ ರಾಜ್ ಅವರ ಕಾರು ಕೆಟ್ಟು ನಿಂತಿತ್ತು.

Raj

ಅದು ಜನ ನಿಬಿಡ ಸ್ಥಳವಾಗಿದ್ದರಿಂದ ಯಾರ ಸಹಾಯವೂ ಅವರಿಗೆ ಸಿಕ್ಕಿರಲಿಲ್ಲ. ಇದನ್ನು ಗಮನಿಸಿದ ಸುಂದರ್ ರಾಜ್ ಅಣ್ಣಾವ್ರ ಬಳಿ ಹೋಗಿ ವಿಚಾರಿಸಿದರು. ಬೇಕಾದರೆ ನೀವು ನನ್ನ ಕಾರ್ ನಲ್ಲಿ ಬರಬಹುದು ನಾನು ನೀವು ಹೋಗಬೇಕಾದ ಜಾಗಕ್ಕೆ ನನ್ನ ಕಾರ್ ನಲ್ಲೇ ಕರೆದೊಯ್ಯುತ್ತಾನೆ ಎಂದರು. ಇದಕ್ಕೆ ಒಪ್ಪಿಕೊಂಡ ರಾಜ್ ಕುಮಾರ್ ಸುಂದರ್ ರಾಜ್ ಅವರ ಕಾರಲ್ಲಿ ಕೂರಲು ಮುಂದಾದರು. ಸುಂದರ್ ರಾಜ್ ಗೆ ಆಗಲೂ ಏನೋ ಒಂದು ತರದ ಮುಜುಗರ. ಸಂಕೋಚದಿಂದಲೇ ನೋಡಿ ನನ್ನದು ಚಿಕ್ಕ ಕಾರು ಕಡಿಮೆ ಬೆಲೆಯದ್ದು. ಅಲ್ಲದೆ ಕಾರು ತುಂಬಾ ಗಲೀಜಾಗಿದೆ. ನೀವು ಶುಭ್ರ ಬಿಳಿಯ ಉಡುಪು ಧರಿಸಿದ್ದೀರಿ ನನನ್ನೂ ಕ್ಷಮಿಸಿ ಎನ್ನುತ್ತಾ ಕಾರಿನ ಸೀಟನ್ನು ಒರೆಸಲು ಮುಂದಾದರು. ಆಗ ಸರಳತೆಯ ವಿನಯತೆಯ ಗಣಿ ರಾಜ್ ಕುಮಾರ್ ಅವರು ಮುಗುಳ್ನಗುತ್ತಾ ಅಯ್ಯೋ ಬಿಡಿ ಪರವಾಗಿಲ್ಲ.

Raj

ನಾವು ಹಿಂದೆ ಬಸ್ಸಿನಲ್ಲಿ ಓಡಾಡುವಾಗ ನಿಂತುಕೊಳ್ಳಲು ಜಾಗ ಇರುತ್ತಿರಲಿಲ್ಲ. ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಹೋಗುವಾಗ ಪರದಾಡುತ್ತಿದ್ದೆವು. ಆದರೆ ಈಗ ದೇವರ ಕೃಪೆಯಿಂದ ಆರಾಮಾಗಿ ಕುಳಿತುಕೊಳ್ಳಲು ಜಾಗವಾದರೂ ಸಿಕ್ಕಿದೆ. ಇಂತಹ ಸಂದರ್ಭದಲ್ಲಿ ನೀವಾದರೂ ಸಿಕ್ಕಿದ್ದೀರ ಇದು ನನ್ನ ಪುಣ್ಯ ಎನ್ನುತ್ತಾ ಕಾರಿನ ಒಳಗೆ ಕುಳಿತುಕೊಂಡರು. ನಂತರ ಸುಂದರ್ ರಾಜ್ ಅವರನ್ನು ಅವರು ಹೋಗಬೇಕಾದ ಸ್ಥಳಕ್ಕೆ ಕ್ಷೇಮವಾಗಿ ತಲುಪಿಸಿದರು. ಅಣ್ಣಾವ್ರಿಗೆ ಹೀಗೆ ಸಹಾಯ ಮಾಡಲು ನನಗೆ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ ಅದೃಷ್ಟ ಎಂದು ಈಗಲೂ ಸುಂದರ್ ರಾಜ್ ಸಂತೋಷ ಪಡುತ್ತಾರೆ. ಸಂದರ್ಶನ ಒಂದರಲ್ಲಿ ಈ ಬಗ್ಗೆ ಹೇಳುತ್ತಾ ರಾಜ್ ಕುಮಾರ್ ಅವರು ಸರಳತೆಗೆ, ವಿನಯತೆಗೆ ಇನ್ನೊಂದು ಹೆಸರು. ಅವರಂತೆ ಮೊತ್ತೊಂದು ನಟ, ಒಳ್ಳೆಯ ವ್ಯಕ್ತಿ ಹುಟ್ಟುವುದಿಲ್ಲ ಎಂದಿದ್ದಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •