ದೊಡ್ಡ ದೊಡ್ಡ ನಗರಗಳಲ್ಲಿ ಜೀವನ ಮಾಡುವುದು ಬಹಳ ಕಷ್ಟ, ಎಷ್ಟೇ ದುಡಿದರು ಮನೆಯ ಜವಾಬ್ದಾರಿ ನಡೆಸಲು ಸಾಕಾಗುವುದಿಲ್ಲ.. ಇಂತಹ ಪರಿಸ್ಥಿತಿಯಲ್ಲಿ ಮಧ್ಯಪ್ರದೇಶದ ಸಂಧ್ಯಾ ಎನ್ನುವ ಓರ್ವ ಮಹಿಳೆ ಕಥೆಯನ್ನು ಕೇಳಿದರೆ ನಿಜಕ್ಕೂ ಹೆಮ್ಮೆ ಪಡುವಂತದ್ದು, ಅಷ್ಟಕ್ಕೂ ಏನಿದು ಇವರ ಜೀವನದ ಕಥೆ ಎಂಬುದನ್ನು ತಿಳಿಯೋಣ ಬನ್ನಿ.. ಸಂದ್ಯಾ ಅವರು ಮೂಲತಃ ಮಧ್ಯಪ್ರದೇಶದವರಾಗಿದ್ದು ಗಂಡ ಮತ್ತು ಮಕ್ಕಳ ಜೊತೆ ಸುಖ ಜೀವನ ನಡೆಸುತ್ತಿರುತ್ತಾರೆ.. ಇವರ ಪತಿ ಕೂಡ ಹೊರಗಡೆ ಕೆಲಸ ಮಾಡುತ್ತಾ ಮನೆಯವರನ್ನು ಚೆನ್ನಾಗಿ ನೋಡಿಕೊಳ್ಳುತ್ತಿರುತ್ತಾರೆ.

railwa-station

ಜಪಲ್ ಪುರ್ ನಲ್ಲಿ ಇರುವ ಕಟಿನಿ ರೈಲ್ವೆ ಜಂಕ್ಷನ್ ನಲ್ಲಿ ಕೂಲಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ‌.. ರೈಲ್ವೆ ಸ್ಟೇಷನ್ ನಲ್ಲಿ ಬಂದು ಇಳಿದ ಪ್ರಯಾಣಿಕರ ತೂಕದ ಲಗೇಜ್ ಗಳನ್ನು ಹೊರುತ್ತಿದ್ದಾರೆ. ಗಂಡಸರು ಹೊರಲು ಕಷ್ಟಪಡುತ್ತಿದ್ದ ಲಗೇಜ್ ಬ್ಯಾಗ್ ಗಳನ್ನು ಸಂಧ್ಯಾ ಅವರು ಹೊತ್ತು ಪ್ರಯಾಣಿಕರು ಹೇಳಿದ ಜಾಗಕ್ಕೆ ತೆಗೆದುಕೊಂಡು ಹೋಗಿ ಕೊಟ್ಟು ಬರುತ್ತಿದ್ದರು.. ಆ ರೈಲ್ವೆ ಸ್ಟೇಷನ್ ನಲ್ಲಿ 45 ಜನ ಗಂಡು ಕೂಲಿಗಳ ಜೊತೆ ಸಂಧ್ಯಾ ಅವರು ಏಕಾಂಗಿಯಾಗಿ ಸುಮಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ.. ಇದರಿಂದ ಬರುವ ಹಣದಲ್ಲಿ ತಮ್ಮ ಮಕ್ಕಳಿಗೆ ಒಳ್ಳೆಯ ವಿಧ್ಯಾಭ್ಯಾಸವನ್ನು ಕೊಡಿಸುತ್ತಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ.

ಈಗಿರುವಾಗ ಒಂದು ದಿನ ಸಂಧ್ಯಾ ಅವರ ಪತಿ ಕೆಲಸಕ್ಕೆ ಹೊರಗಡೆ ಹೋಗಿ ಮತ್ತೆ ಮನೆಗೆ ಬರುವ ಸಮಯದಲ್ಲಿ ಜೀವಂತವಾಗಿ ಬರಲಿಲ್ಲ, ಇಹಲೋಕವನ್ನು ತ್ಯಜಿಸುತ್ತಾರೆ.. ಇನ್ನೂ ಗಂಡ ತೀರಿಕೊಂಡ ನಂತರ ಮನೆಯ ಸಂಪೂರ್ಣ ಜವಾಬ್ದಾರಿ ಸಂಧ್ಯಾ ಅವರ ಮೇಲೆ ಬೀಳುತ್ತದೆ. ಮನೆಯಲ್ಲಿ ಗಂಡ ಇಲ್ಲ, ಮೂರು ಮಕ್ಕಳು ಬೇರೆ ಏನು ಮಾಡುವುದು ಅವರನ್ನು ಹೇಗೆ ಸಾಕುವುದು ಎಂದು ಯೋಚನೆ ಮಾಡುತ್ತಾ ಕೂರುತ್ತಾರೆ.. ನಂತರ ಸಂಧ್ಯಾ ಅವರು ಯಾವುದಾದರೂ ಕೆಲಸಕ್ಕೆ ಸೇರಿ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕೊಡಿಸಬೇಕು, ಅವರನ್ನು ಬೆಳೆಸಿ ದೊಡ್ಡವರನ್ನಾಗಿ ಮಾಡಬೇಕೆಂದು ದೃಡ ನಿರ್ದಾರ ಮಾಡಿ..

railwa-station

ಇನ್ನೂ ಸಂಧ್ಯಾ ಅವರು ಭಾರತ ರೈಲ್ವೇ ಸ್ಟೇಷನ್ ನ ಪ್ರಪ್ರಥಮ ಮಹಿಳೆ ಕೂಲಿ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.. ಇನ್ನೂ ಮಾಧ್ಯಮದವರು ಸಂಧ್ಯಾ ಅವರಿಗೆ.. ನೀವು ಈ ರೀತಿ ಕೂಲಿ ಕೆಲಸ ಮಾಡುತ್ತಿರುವುದರಿಂದ ಅವಮಾನ ಆಗುತ್ತಿಲ್ಲವೇ ಎಂದು ಪ್ರಶ್ನೆ ಕೇಳಿದಾಗ ಈ ರೀತಿ ಉತ್ತರವನ್ನು ಕೊಟ್ಟಿದ್ದಾರೆ. ಕೆಲಸ ಯಾವುದಾದರೇನು ನಾನು ಇನ್ನೊಬ್ಬರ ಹಣವನ್ನು ಕಳ್ಳತನ ಮಾಡಿಲ್ಲ, ಯಾರಿಗೂ ಮೋಸವೂ ಕೂಡ ಮಾಡಿಲ್ಲ ಕಷ್ಟ ಪಟ್ಟು ದುಡಿಯಬೇಕು..

ಅಕಸ್ಮಾತ್ ಅವಮಾನ ಆಗುತ್ತಿದೆ ಎಂದು ಮನೆಯಲ್ಲಿ ಕೂತರೆ ಜೀವನದಲ್ಲಿ ಮುಂದೆ ಬರಲು ಆಗುವುದಿಲ್ಲ.. ನನಗೆ ಈ ಕೆಲಸ ಮಾಡಲು ಯಾವುದೇ ರೀತಿ ಬೇಸರವಿಲ್ಲ.. ಇನ್ನೊಬ್ಬರ ಮಾತಿಗೆ ಕಿವಿಕೊಡದೆ ನಮ್ಮ ಕೆಲಸ ಏನಿದಿಯೋ ಅದನ್ನ ಮಾಡಿಕೊಂಡು ಹೋಗಬೇಕಷ್ಟೇ ಎಂದು ಹೇಳಿದ್ದಾರೆ.. ಸ್ನೇಹಿತರೆ ಸಂಧ್ಯಾ ಅವರ ಬಗ್ಗೆ ನೀವು ಏನು ಎಳಲು ಇಷ್ಟ ಪಡುತ್ತೀರಾ ತಿಳಿಸಿ..

………………..
ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •