ಏನೇ ಮಾಡಿದರೂ ಮಗಳು ಬಿಡುಗಡೆಯಾಗಲಿಲ್ಲವೆಂದು ರಾಗಿಣಿ ತಂದೆ ತಾಯಿ ಮಾಡಿರುವ ಕೆಲಸ ನೋಡಿ..

ದಸರಾ ಮುಗಿಯಿತು.. ದೀಪಾವಳಿಯೂ ಬಂತು.. ಆದರೆ ರಾಗಿಣಿ ಹಾಗೂ ಸಂಜನಾ ಮಾತ್ರ ಹೊರ ಬರಲೇ ಇಲ್ಲ.. ಆದರೆ ಅವರ ಅಪ್ಪ ಅಮ್ಮ ಅನುಭವಿಸುತ್ತಿರುವ ನೋವು ಮಾತ್ರ ಯಾರಿಗೂ ಬೇಡವೆನ್ನುವಂತಿದೆ.. ಹೌದು ರಾಗಿಣಿ ಸ್ಯಾಂಡಲ್ವುಡ್ ನ ಆ ವಿಚಾರವಾಗಿ ಒಳ ಹೋದಾಗಿನಿಂದಲೂ ಅವರ ಅಪ್ಪ ಅಮ್ಮ ಒಂದಲ್ಲಾ ಒಂದು ಪ್ರಯತ್ನ ಮಾಡುತ್ತಲೇ ಇದ್ದಾರೆ.. ಮಗಳನ್ನು ಹೊರ ಕರೆತರಲು ಇನ್ನಿಲ್ಲದ ಶ್ರಮ ಪಡುತ್ತಿದ್ದಾರೆ.. ಆದರೆ ಅಂದುಕೊಂಡಂತೆ ಏನೂ ಆಗುತ್ತಿಲ್ಲ.. ಈ ನಡುವೆ ಆರ್ಥಿಕ ಸಂಕಷ್ಟದಿಂದ ರಾಗಿಣಿ ತಂದೆ ತೆಗೆದುಕೊಂಡಿರುವ ನಿರ್ಧಾರ ನಿಜಕ್ಕೂ ಮನಕಲಕುವಂತಿದೆ.‌

ಹೌದು ರಾಗಿಣಿ ಒಳ ಹೋಗಿ ಹತ್ತಿರತ್ತಿರ ಎರಡೂ ವರೆ ತಿಂಗಳಾಯಿತು.. ಸೆಪ್ಟೆಂಬರ್ ಎರಡನೇ ತಾರೀಕಿನಿಂದ ರಾಗಿಣಿ ಸಾಂತ್ವಾನ ಕೇಂದ್ರ.. ನಂತರ ಪರಪ್ಪನ ಅಗ್ರಹಾರ ಹೀಗೆ ಅಲ್ಲಿಯೇ ಉಳಿಯುವಂತಾಗಿದೆ.. ಇತ್ತ ರಾಗಿಣಿಯ ತಂದೆ ತಾಯಿ ಮಾತ್ರ ದಿನ ಬೆಳಗೆದ್ದರೆ ಕೋರ್ಟು ಕಚೇರಿ ಅಂತ ಅಲೆಯುತ್ತಲೇ ಇದ್ದಾರೆ..

ಜಾಮೀನಿಗಾಗಿ ಸಲ್ಲಿಸಿದ ಅರ್ಜಿಗಳು ವಜಾ ಆಗುತ್ತಾ ಬಂದವು.. ಕೈಯಲ್ಲಿದ್ದ ಹಣ ಖಾಲಿಯಾಯಿತು.. ಆದರೆ ಮಗಳನ್ನು ಹೊರ ಕರೆತರಬೇಕೆಂಬ ಪ್ರಯತ್ನವನ್ನು ಮಾತ್ರ ಆ ವಯಸ್ಸಾದ ಜೀವಗಳು ನಿಲ್ಲಿಸಲಿಲ್ಲ..

raginis-father

ನಿಜಕ್ಕೂ ಯಾರೇ ಆಗಲಿ ತಪ್ಪು ಹೆಜ್ಜೆ ಇಡುವ ಮುನ್ನ ಮುಂದೆ ನಮ್ಮಗಳಿಗೆ ಆ ತಪ್ಪಿನಿಂದ ಸಂಕಷ್ಟ ಒದಗಿ ಬಂದಾಗ ಅಪ್ಪ ಅಮ್ಮ ಪಡುವ ಪಾಡನ್ನು ಒಮ್ಮೆ ಆಲೋಚಿಸಬೇಕು.. ಆ ರೀತಿ ಅಪೊಅ ಅಮ್ಮನ ಬಗ್ಗೆ ಆಲೋಚಿಸಿದರೆ ಯಾರೂ ಸಹ ತಪ್ಪು ಮಾಡುವ ಮನಸ್ಸು ಕೂಡ ಮಾಡುವುದಿಲ್ಲ.. ಇನ್ನು ರಾಗಿಣಿ ಅವರ ವಿಚಾರಕ್ಕೆ ಬಂದರೆ ಲಾಯರ್ ಫೀಸ್ ಹಾಗೂ ಕೋರ್ಟು ಕಚೇರಿ ಓಡಾಟಕ್ಕೆ ಹಣವಿಲ್ಲದೇ ತಮ್ಮ ಮನೆಯನ್ನು ಮಾರಲು ರಾಗಿಣಿ ತಂದೆ ಮುಂದಾಗಿದ್ದರು.. ಮನೆ ಮಾರುವ ವೆಬ್ಸೈಟ್ ಒಂದಕ್ಕೆ ತಮ್ಮ ಮನೆಯ ಫೋಟೋಗಳನ್ನು ಹಾಕಿದ್ದರು..

ಆದರೆ ಯಾರೂ ಸಹ ತಮ್ಮ ಮನೆಯನ್ನು ಕೊಂಡುಕೊಳ್ಳಲು ಮುಂದೆ ಬರಲಿಲ್ಲ.. ಎರಡು ತಿಂಗಳಿನ ನಂತರ ಇದೀಗ ಹಣದ ಅವಶ್ಯಕತೆ ಬಹಳ ಇರುವುದರಿಂದ ಬೇರೆಯ ನಿರ್ಧಾರವನ್ನೇ ಮಾಡಿದ್ದಾರೆ.. ಹೌದು ರಾಗಿಣಿ ತಂದೆ ಹಣಕ್ಕಾಗಿ ತಮ್ಮ ಕಾರುಗಳನ್ನೆಲ್ಲಾ ಮಾರಲು ಮುಂದಾಗಿದ್ದಾರೆ.. ಹೌದು ರಾಗಿಣಿಯ ಐಶಾರಾಮಿ ಕಾರು ಹಾಗೂ ತಾವು ಬಳಸುತ್ತಿದ್ದ ಎರಡೂ ಕಾರುಗಳನ್ನು ರಾಗಿಣಿ ತಂದೆ ಮಾರಲು ಮುಂದಾಗಿದ್ದು.. ಆ ಹಣ ಬಳಸಿಕೊಂಡು ಮಗಳಿಗೆ ಜಾಮೀನು ಕೊಡಿಸುವ ಪ್ರಯತ್ನ ಮಾಡಲಿದ್ದಾರೆ..

ರಾಗಿಣಿ ತಾಯಿ ಈ ಮೊದಲು ಈ ಬಗ್ಗೆ ಮಾತನಾಡಿದ್ದಾಗ.. ಎಲ್ಲರೂ ಅಂದುಕೊಂಡಂತೆ ನಾವು ಶ್ರೀಮಂತರಲ್ಲ.. ನಮಗೂ ಬಹಳ ಆರ್ಥಿಕ ತೊಂದರೆ ಇದೆ.. ಮನೆಯ ಮೇಲೂ ಲೋನ್ ಇದೆ.. ಇ ಎಂ ಐ ಕಟ್ಟಬೇಕು.. ಎಲ್ಲರೂ ಊಹೆ ಮಾಡಿದಂತೆ ನಾವಿಲ್ಲ.. ನಮಗೂ ಕಷ್ಟಗಳು ಇವೆ.. ರಾಗಿಣಿಗೆ ನೋಡಿದ್ರೆ ಈಗ ಈ ರೀತಿ ಆಗಿದೆ ಎಂದಿದ್ದರು.. ಒಟ್ಟಿನಲ್ಲಿ ತಪ್ಪು ಸರಿಯ ಮಾತು ನ್ಯಾಯಾಲಯಕ್ಕೆ ಬಿಟ್ಟಿದೆ.. ಆದರೆ ವಯಸ್ಸಾದ ಕಾಲದಲ್ಲಿ ರಾಗಿಣಿ ಅಪ್ಪ ಅಮ್ಮ ಪಡುತ್ತಿರುವ ಕಷ್ಟ.. ಪರದಾಡುತ್ತಿರುವ ರೀತಿ ನಿಜಕ್ಕೂ ಮನಕಲಕುವಂತಿದೆ.. ಇದು ನಿಜಕ್ಕೂ ಯುವ ಸಮೂಹಕ್ಕೆ ಪಾಠವೇ ಸರಿ.. ತಪ್ಪಿನ ಹೆಜ್ಜೆ ಇಡುವ ಮುನ್ನ ಸಾವಿರ ಬಾರಿ ಯೋಚಿಸಿ.. ಅಪ್ಪ ಅಮ್ಮನಿಗೆ ನೋವು ಕೊಡುವ ಜೀವನಕ್ಕೆ ಅರ್ಥವಾದರೂ ಏನಿದೆ?

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •