ಸ್ಯಾಂಡಲ್ವುಡ್ ನ ಡ್ರ ‘ಗ್ಸ್ ಪ್ರಕರಣದಲ್ಲಿ ಕಳೆದ ಸೆಪ್ಟೆಂಬರ್ 4 ರಂದು ಕನ್ನಡದ ಜನಪ್ರಿಯ ನಟಿ ರಾಗಿಣಿ ದ್ವಿವೇದಿ ಅವರನ್ನು ಸಿಸಿಬಿ ಪೊಲೀಸರು ತಮ್ಮ ವ ಶ ಕ್ಕೆ ಪಡೆದುಕೊಂಡು ವಿಚಾರಣೆಯನ್ನು ನಡೆಸಿದ್ದರು. ಅದಾದ ನಂತರ ಸೆಪ್ಟೆಂಬರ್ 14 ರಂದು ರಾಗಿಣಿ ದ್ವಿವೇದಿ ಅವರನ್ನು ನ್ಯಾಯಾಂಗ ಬಂ ಧ ನಕ್ಕೆ ಒಳಪಡಿಸಲಾಗಿತ್ತು. ಇದಾದ ನಂತರ ರಾಗಿಣಿ ದ್ವಿವೇದಿಯನ್ನು ಪರಪ್ಪನ ಅಗ್ರಹಾರದ ಜೈ ಲಿನಲ್ಲಿ ಇರಿಸಲಾಗಿತ್ತು. ನಟಿ ರಾಗಿಣಿ ದ್ವಿವೇದಿ ತಮ್ಮ ಜಾಮೀನಿಗಾಗಿ ಹೈಕೋರ್ಟ್ನಲ್ಲಿ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ ಜಾಮೀನು ಕೋರಿ ಆಕೆ ಸಲ್ಲಿಸಿದ್ದ ಅರ್ಜಿಯನ್ನು ಹೈ ಕೋರ್ಟ್ ವಜಾ ಮಾಡಿದ್ದರಿಂದ ಇದನ್ನು ಪ್ರಶ್ನೆ ಮಾಡಿ ನಟಿ ರಾಗಿಣಿ ಅವರು ಸುಪ್ರೀಂ ಕೋರ್ಟ್ ನಲ್ಲಿ ಜಾಮೀನಿಗಾಗಿ ಅರ್ಜಿಯನ್ನು ಸಲ್ಲಿಸಿದ್ದರು.

ragini

ನಟಿ ರಾಗಿಣಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ಮಾಡಿದ ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿ ರೋಹಿಂಟನ್ ನಾರಿಮನ್ ನೇತೃತ್ವದ ನ್ಯಾಯ ಪೀಠವು ರಾಗಿಣಿ ಅವರಿಗೆ ಜಮೀನನ್ನು ಮಂಜೂರು ಮಾಡಿದೆ. ಸಿಸಿಬಿ ಪರಿಶೀಲನೆಯ ವೇಳೆ ರಾಗಿಣಿ ಅವರ ಮನೆಯಲ್ಲಿ ಯಾವುದೇ ಮಾ ದ ಕ ವಸ್ತುಗಳು ಪತ್ತೆಯಾಗಿದ್ದ ಆದರೂ ಕೂಡ ಅವರ ವಿ ರು ದ್ಧ ಮಾ ದ ಕ ವಸ್ತು ನಿಯಂತ್ರಣ ಕಾಯ್ದೆ ಸೆಕ್ಷನ್ 37 ಅನ್ವಯ ಪ್ರಕರಣವನ್ನು ದಾಖಲಿಸಿದ್ದು ಅವರು ಜಾಮೀನು ಪಡೆಯಲು ಅರ್ಹರಾಗಿದ್ದಾರೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ragini

ಈ ಹಿನ್ನೆಲೆಯಲ್ಲಿ ನಟಿ ರಾಗಿಣಿ ಅವರಿಗೆ ಬಹುದಿನಗಳ ನಂತರ ನೀನು ದೊರಕಿದೆ. ನಟಿ ರಾಗಿಣಿ ಒಟ್ಟು 140 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿ ಕಳೆದಿದ್ದಾರೆ. ನಟಿ ರಾಗಿಣಿಯ ಜೊತೆಗೆ ನ್ಯಾಯಾಂಗ ಬಂಧನದಲ್ಲಿದ್ದ ಮತ್ತೋರ್ವ ನಟಿ ಸಂಜನಾ ಗಲ್ರಾನಿ ಅವರಿಗೆ ಆ’ರೋಗ್ಯ ಸಮಸ್ಯೆ ದೃಷ್ಟಿಯಿಂದ ಈಗಾಗಲೇ ಜಾಮೀನು ದೊರೆತು ಆಕೆ ಜೈ ಲಿನಿಂದ ಬಿಡುಗಡೆ ಆಗಿದ್ದರು. ಪ್ರಸ್ತುತ ಅವರು ಆರೋಗ್ಯ ಸುಧಾರಣೆಗಾಗಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •