ಬಿಗ್ ಬಾಸ್ ಕಾರ್ಯಾಕ್ರಮ ಎಂದರೆ ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯರ ವರೆಗೆ ಎಲ್ಲರಿಗು ಬಹಳ ಕುತೂಹಲ. ಪ್ರತಿ ವರ್ಷವು ಯಾರೆಲ್ಲಾ ಸೆಲೆಬ್ರಿಟಿಗಳು ಬಿಗ್ ಬಾಸ್ ಮನೆಗೆ ಕಾಲಿಡಲಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲು ಇರುತ್ತದೆ. ಈ ವರ್ಷ ಕೋ-ವಿಡ್ ಸ-ಮಸ್ಯೆ ನಡುವೆ ಬಿಗ್ ಬಾಸ್ ಕಾರ್ಯಕ್ರಮ ನಡೆಯುತ್ತದೆಯೋ ಇಲ್ಲವೋ ಎಂಬ ಗೊಂದಲ ಎಲ್ಲರಲ್ಲು ಇತ್ತು. ಈಗಾಗಲೇ ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಶುರುವಾಗಿ ಮುಗಿದಿದೆ ಕೂಡ. ಕನ್ನಡದಲ್ಲಿ ಕೂಡ ಬಿಗ್ ಬಾಸ್ ಕನ್ನಡ ಸೀಸನ್ 8 ಆರಂಭವಾಗಲು ಕ್ಷಣಗಣನೆ ಆರಂಭವಾಗಿದೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 8 ಪ್ರೊಮೋಗಳು ಈಗಾಗಲೇ ಪ್ರಸಾರವಾಗುತ್ತಿದೆ.ಬಿಬಿಕೆ8 ನಲ್ಲಿ ಯಾರೆಲ್ಲಾ ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಬಹಳ ಚರ್ಚೆಯಾಗಿತ್ತು. ಬಿಗ್ ಬಾಸ್ ಕನ್ನಡ ಸೀಸನ್ 8 ರ ಸ್ಪರ್ಧಿಗಳು ಯಾರು ಎಂಬುದು ಈಗಾಗಲೇ ಆಯ್ಕೆಯಾಗಿದ್ದು, ಕರೊನಾ ಕಾರಣದಿಂದಾಗಿ ಸ್ಪರ್ಧಿಗಳು ಕ್ವಾರಂಟೈನ್ ನಲ್ಲಿದ್ದಾರೆ ಎನ್ನಲಾಗಿದೆ. ಬಿಬಿಕೆ8 ಗೆ ನೆಟ್ಟಿಗರು ಗೆಸ್ ಮಾಡಿರುವ ಸ್ಪರ್ಧಿಗಳ ಲಿಸ್ಟ್ ಗೆ ಈಗ ಮತ್ತೊಬ್ಬ ಸೆಲೆಬ್ರಿಟಿಯ ಹೆಸರು ಈಗ ಸೇರಿಕೊಂಡಿದೆ. ಈಗಷ್ಟೇ ಜೈಲಿನಿಂದ ಬಂದ ಕನ್ನಡ ನಾಟಿಗೆ ಈಗ ಬಿಗ್ ಬಾಸ್ ಗೆ ಹೋಗುವ ಅವಕಾಶ ಸಿಕ್ಕಿದೆ! ಅವರು ಯಾರು ಗೊತ್ತಾ? ತಿಳಿಯಲು ಮುಂದೆ ಓದಿ..

ಬಿಬಿಕೆ 8 ರಲ್ಲಿ ಬಿಗ್ ಬಾಸ್ ಮನೆಗೆ ಹೋಗುವ ಸೆಲೆಬ್ರಿಟಿಗಳ ಲಿಸ್ಟ್ ನಲ್ಲಿ ಈಗ ನಟಿ ರಾಗಿಣಿ ದ್ವಿವೇದಿ ಹೆಸರು ಕೇಳಿಬರುತ್ತಿದೆ. ಡ್ರ-#ಗ್ಸ್ ವಿಷಯದಿಂದ ಅ-ರೆಸ್ಟ್ ಆಗಿ, 5 ತಿಂಗಳಿಗೂ ಹೆಚ್ಚಿನ ಸಮಯ ಜೈ-ಲಿನಲ್ಲಿದ್ದು, ಈಗಷ್ಟೇ ಹೊರಬಂದಿದ್ದಾರೆ ನಟಿ ರಾಗಿಣಿ. ಜೈ-ಲಿನಿಂದ ಹೊರಬಂದ ನಂತರ ನಟಿ ರಾಗಿಣಿ ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿದ್ದು, ಕುಟುಂಬದ ಜೊತೆ ಇರುವ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದರು. ಇತ್ತೀಚೆಗೆ ಲೈವ್ ಬಂದು ಅಭಿಮಾನಿಗಳ ಜೊತೆ ಕೆಲವು ಮಾತುಗಳನ್ನಾಡಿ ಕೆಟ್ಟದಾಗಿ ಕಮೆಂಟ್ ಮಾಡುವ ನೆಟ್ಟಿಗರಿಗೆ ಸರಿಯಾದ ಉತ್ತರ ನೀಡಿದ್ದರು. ಈಗ ರಾಗಿಣಿ ಬಿಗ್ ಬಾಸ್ ಮನೆಗೆ ಹೋಗಲಿದ್ದಾರೆ ಎನ್ನುವ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಈ ಕುರಿತು ಯವುಡ್ಸ್ ಅಧಿಕೃತ ಮಾಹಿತಿ ಹೊರಬಂದಿಲ್ಲ. ಮೂಲಗಳ ಪ್ರಕಾರ ಫೆಬ್ರವರಿ 28ರಿಂದ ಬಿಬಿಕೆ8 ಕಾರ್ಯಕ್ರಮ ಆರಂಭವಾಗುಗ್ಗದೆ ಎನ್ನಲಾಗಿದೆ. ಇದಕ್ಕು ಮೊದಲು ಸೆಲೆಬ್ರಿಟಿಗಳ ಲಿಸ್ಟ್ ನಲ್ಲಿ ನಟ ಅನಿರುದ್ಧ್, ಹಿತಾ ಚಂದ್ರಶೇಖರ್, ಅಗ್ನಿಸಾಕ್ಷಿ ಖ್ಯಾತಿಯ ನಟಿ ಸನ್ನಿಧಿ ಹಾಗು ಇನ್ನಿತರ ಹೆಸರುಗಳು ಕೇಳಿ ಬಂದಿತ್ತು. ನಿಜವಾಗಿಯೂ ಯಾರೆಲ್ಲಾ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ ಎನ್ನುವುದು ಕಾರ್ಯಕ್ರಮ ಆರಂಭವಾಗುವ ದಿನ ಗೊತ್ತಾಗಲಿದೆ. ಇವರೆಲ್ಲರ ಜೊತೆಗೆ ಕಾಮಿಡಿ ಕಿಲಾಡಿ ನಯನ, ಸಿಲ್ಲಿ ಲಲ್ಲಿ ಖ್ಯಾತಿಯ ರವಿ ಶಂಕರ್, ಮಜಾ ಟಾಕೀಸ್ ಖ್ಯಾತಿಯ ತರಂಗ ವಿಶ್ವ ಅವರು ಕೂಡ ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಇರುತ್ತಾರೆ ಎಂದು ಗೊತ್ತಾಗಿದೆ.

ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ನಮ್ಮ ಕಿಚ್ಚ ಸುದೀಪ್ ಅವರ ನಿರೂಪಣೆಯ ಬಿಗ್ ಬಾಸ್ ಶುರು ಆಗಲಿದೆ. ಫೆಬ್ರವರಿ ಕೊನೆಯ ದಿನ ಬಿಗ್ ಬಾಸ್ ಕನ್ನಡ ಸೀಸನ್ 8 ಶುರು ಆಗಲಿದೆ. ಬಿಗ್ ಬಾಸ್ ಕನ್ನಡದ ಬೇರೆ ಎಲ್ಲಾ ಲೇಟೆಸ್ಟ್ ಮಾಹಿತಿ ಗಳಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಸಿನಿಮಾಗಳ ಬಗ್ಗೆ, ಇನ್ನಷ್ಟು ಮಾಹಿತಿ ಗಳಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •