ರಾಕಿಂಗ್​ ಸ್ಟಾರ್​ ಯಶ್​ ಹಾಗೂ ರಾಧಿಕಾ ಪಂಡಿತ್ ಇವರಿಗಿಂತ ಈಗ ಅವರ ಮಕ್ಕಳು ಆಯ್ರಾ ಮತ್ತು ಯಥರ್ವ ಇಬ್ಬರೂ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಈ ಇಬ್ಬರೂ ಪುಟ್ಟ ಕಂದಮ್ಮಗಳ ಹೆಸರಿನಲ್ಲಿ ಈಗಾಗಲೇ ಅನೇಕ ಅಭಿಮಾನಿಗಳ ಪೇಜ್​ ಗಳು ಸಹ ಇದ್ದು ಒಂದೊಂದು ಫೋಟೋಗೂ ಲಕ್ಷಗಟ್ಟಲೆ ಲೈಕ್ಸ್​​ ಪಡೆಯುವ ಮೂಲಕ ಅಪ್ಪನ ಸ್ಟಾರ್​ಗಿರಿಗಿಂತ ಮಕ್ಕಳು ಹೆಚ್ಚು ಖ್ಯಾತಿ ಹೊಂದುತ್ತಿದ್ದಾರೆ. ತುಂಬಿದ ಕೆನ್ನೆಯ ಬಟ್ಟಲು ಕಂಗಳ ಪುಟ್ಟ ರಾಜಕುಮಾರಿಯಂತಿರುವ ಆಯ್ರಾ ಹಾಗೂ ಯತರ್ವ ಇಬ್ಬರ ಇತ್ತೀಚಿನ ಚಿತ್ರಗಳನ್ನು ಅಮ್ಮ ರಾಧಿಕಾ ಹಂಚಿಕೊಳ್ಳುತ್ತಿದ್ದಂತೆಯೇ ಅವು ವೈರಲ್​ ಆಗುತ್ತವೆ. ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಸಕ್ರಿಯರಾಗಿರುವ ರಾಧಿಕಾ ಪಂಡಿತ್ ತಮ್ಮ ಮಗಳು ಹಾಗೂ ಮಗ ಯಥರ್ವ್​ ಅಪ್ಡೇಟ್​ ನೀಡುತ್ತ ಇರುತ್ತಾರೆ. ಈ ಮುದ್ದು ಮಕ್ಕಳ ಯಾವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟರೂ ಅದು ಅಭಿಮಾನಿಗಳ ಪುಟಗಳಲ್ಲಿ ವೈರಲ್ ಆಗುತ್ತವೆ.

ಇನ್ನು ಇತ್ತೀಚೆಗಷ್ಟೆ ರಾಕಿಂಗ್ ಜೋಡಿ ಕೆಜಿಎಫ್ ಚಿತ್ರದ ಚಿತ್ರೀಕರಣ ಮುಗಿಯುತ್ತಾ ಇದ್ದಂತೆ ಸ್ವಲ್ಪ ರಿಲ್ಯಾಕ್ಸ್ ಮೂಡ್ ಗೆ ಹೋಗಿದ್ದು ತಮ್ಮ ಕುಟುಂಬದ ಜೊತೆ ಮಾಲ್ಡೀವ್ಸ್ ಪ್ರಾವಸ ಕೈಗೊಂಡಿತ್ತು. ಇಬ್ಬರು ಮಕ್ಕಳೊಂದಿಗೆ ರಜೆ ಮಜವನ್ನು ಕಳೆದಿದ್ದಾರೆ. ರಜೆಯನ್ನು ಎಂಜಾಯ್ ಮಾಡುತ್ತಿರುವ ಯಶ್ ಮತ್ತು ರಾಧಿಕಾ ದಂಪತಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಲಾಕ್ ಡೌನ್ ಮತ್ತು ಸತತ ಚಿತ್ರೀಕರಣದಿಂದ ಯಶ್ ದಂಪತಿ ಎಲ್ಲೂ ಪ್ರವಾಸಕ್ಕೆ ಹೋಗಿರಲಿಲ್ಲ. ಕೆಜಿಎಫ್-2 ಸಿನಿಮಾ ಚಿತ್ರೀಕರಣದಲ್ಲಿ ನಿರತರಾಗಿದ್ದ ಯಶ್ ಕುಟುಂಬದ ಜೊತೆ ಕೂಡಾ ಹೆಚ್ಚು ಸಮಯ ಕಳೆಯಲು ಸಾಧ್ಯವಾಗಿರಲ್ಲ. ಹಾಗಾಗಿ ಕೆಜಿಎಫ್-2 ಚಿತ್ರೀಕರಣ ಮುಗಿಸಿ ಯಶ್ ಪತ್ನಿ ಮತ್ತು ಇಬ್ಬರು ಮಕ್ಕಳ ಜೊತೆಗೆ ಮಾಲ್ಡೀವ್ಸ್ ಗೆ ಹೋಗಿದ್ದರು.

ರಾಕಿಂಗ್ ದಂಪತಿಯ ಸುಂದರ ಫೋಟೋಗಳನ್ನು ಯಶ್ ಅಭಿಮಾನಿಗಳು ಶೇರ್ ಮಾಡಿ ವೈರಲ್ ಮಾಡುತ್ತಿದ್ದಾರೆ. ಯಶ್ ಕುಟುಂಬದ ಸುಂದರ ಫೋಟೋಗಳಿಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ಸ್ ಹರಿದುಬರುತ್ತಿದೆ. ಮಾಲ್ಡೀವ್ಸ್ ಗೆ ಎಂಟ್ರಿ ಕೊಡುತ್ತಿದ್ದಂತೆ ಯಶ್ ಸುಂದರ ಫೋಟೋಗಳನ್ನು ಶೇರ್ ಮಾಡಿ ಸ್ವರ್ಗ ಯಾವುದಾದರೂ ಇದ್ದರೆ ಅದು ಮಾಲ್ಡೀವ್ಸ್ ಮಾತ್ರ ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು. ಮಕ್ಕಳೊಂದಿಗೆ ಮರಳಲ್ಲಿ ಆಟವಾಡುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಅದೇ ಸಂದರ್ಭದಲ್ಲಿ ರಾಧಿಕಾ ಪಂಡಿತ್ ಅವರು ತಮ್ಮ ಮುದ್ದು ಮಗಳಿಗೆ ಸ್ವಿಮ್ಮಿಂಗ್ ಕಲಿಸಿಕೊಡುವ ವಿದ್ಯೋ ಹಾಗೂ ಫೋಟೋಗಳು ಕೂಡಾ ಸಾಕಷ್ಟು ವೈರಲ್ ಆಗಿದ್ದು ಕ್ಯೂಟ್ ಐರಾ ತನ್ನ ಅಮ್ಮನ ಜೊತೆಯಲ್ಲಿ ಸ್ವಿಮ್ಮಿಂಗ್ ಕೂಡಾ ಕಲಿಯುತ್ತಾ ಇದ್ದಾಳೆ. ಅಷ್ಟೇ ಅಲ್ಲದೇ ಈ ಒಂದು ವಿಡಿಯೋ ಈಗ ಐರ ಅಭಿಮಾನಿಗಳಿಗೆ ಒಂದು ರಸದೌತಣ ಇದ್ದಹಾಗೆ ಎನ್ನಬಹುದು.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •