ಸ್ಯಾಂಡಲ್ ವುಡ್ ನಟಿ , ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪತ್ನಿ ರಾಧಿಕಾ ಕುಮಾರಸ್ವಾಮಿ ಅವರ ಅಕೌಂಟ್ ಗೆ ಯುವರಾಜ್ ಅಲಿಯಾಸ್ ಕ-ಳ್ಳ ಸ್ವಾಮಿ ಅವರ ಅಕೌಂಟ್ ಇಂದ ಒಂದೂವರೆ ಕೋಟಿ ಹಣ ಟ್ರಾನ್ಸ್ಫರ್ ಆಗಿದೆ ಎಂಬ ಸುದ್ದಿ ಒಂದೆರಡು ದಿನಗಳ ಹಿಂದೆ ಎಲ್ಲೆಡೆ ಬಹಳ ಚರ್ಚೆಯಾಗುತ್ತಿತ್ತು. ಈ ವಿಚಾರದ ಕುರಿತು ನಟಿ ರಾಧಿಕಾ ಡಾಲರ್ಸ್ ಕಾಲೋನಿಯಲ್ಲಿರುವ ತಮ್ಮ ಮನೆಯಲ್ಲಿ ಪ್ರೆಸ್ ಮೀಟ್ ಕರೆದು ಸ್ಪಷ್ಟನೆ ನೀಡಿದ್ದಾರೆ. ಪ್ರೆಸ್ ಮೀಟ್ ನಲ್ಲಿ ರಾಧಿಕಾ ಕುಮಾರಸ್ವಾಮಿ ಅವರ ಅಣ್ಣ ರವಿ ರಾಜ್ ಕೂಡ ಇದ್ದರು. 17 ವರ್ಷಗಳಿಂದ ಯುವರಾಜ್ ಅವರ ಪರಿಚಯ ತಮಗೆ ಮತ್ತು ತಮ್ಮ ಕುಟುಂಬಕ್ಕೆ ಇದೆ ಎಂದು ಒಪ್ಪಿಕೊಂಡಿದ್ದಾರೆ ರಾಧಿಕಾ.

Radhika-Kumaraswamy

ಯುವರಾಜ್ ಮತ್ತು ರಾಧಿಕಾ ಅವರ ತಂದೆ ನಡುವೆ ಒಳ್ಳೆಯ ಸ್ನೇಹವಿತ್ತು, ಹಾಗಾಗಿ ಯುವರಾಜ್ ತಮ್ಮ ಕುಟುಂಬಕ್ಕೆ ಚೆನ್ನಾಗಿ ಪರಿಚಯ ಎಂದಿದ್ದಾರೆ. ರಾಧಿಕಾ ಅವರ ಜೀವನದ ಬಗ್ಗೆ 16 ವರ್ಷಗಳ ಹಿಂದೆಯೇ ಭವಿಷ್ಯ ಹೇಳಿದ್ದರಂತೆ ಯುವರಾಜ್, ಜೀವನದಲ್ಲಿ ತಿರುವು ಸಿಗುತ್ತದೆ, ಹೆ-ಣ್ಣು ಮಗು ಜನಿಸುತ್ತದೆ ಎಂದಿದ್ದರಂತೆ. ಜೊತೆಗೆ ರಾಧಿಕಾ ಅವರ ತಂದೆ ವಿಚಾರದಲ್ಲಿ ಕೂಡ ಕo-ಟಕ ಇದೆ ಎಂದಿದ್ದರಂತೆ. ಈ ಕುರಿತು ಮಾತನಾಡಿರುವ ರಾಧಿಕಾ, “ತಂದೆ ವಿಚಾರದಲ್ಲಿ ಕಂಟಕ ಇದೆ ಎಂದು ಹೇಳಿದ್ದರು, ಅವರು ಹೇಳಿದ ಹಾಗೆ ಆಯಿತು, ಅವರು ಹೇಳಿದ್ದ ಒಂದು ಪೂಜೆಯನ್ನು ನಾವು ಮಾಡಿಸಲಿಲ್ಲ, ಆ ಪೂಜೆ ಮಾಡಿಸಿದ್ದರೆ ಬಹುಶಃ ನನ್ನ ತಂದೆ ಬದುಕಿರುತ್ತಿದ್ದರೇನೋ..” ಎಂದಿದ್ದಾರೆ ರಾಧಿಕಾ.

Radhika-Kumaraswamy

ಜೊತೆಗೆ ಹಣ ವರ್ಗಾವಣೆ ವಿಚಾರವಾಗಿ ಮಾತನಾಡಿರುವ ರಾಧಿಕಾ, “ಸಿನಿಮಾ ವಿಚಾರವಾಗಿ ಅವರಿಂದ ಹಣ ವರ್ಗಾವಣೆ ಆಗಿದೆ ಹೊರತು ಬೇರೆ ಯಾವುದೇ ವ್ಯವಹಾರ ಇಲ್ಲ ಎಂದಿದ್ದಾರೆ. ಯುವರಾಜ್ ಅವರ ಜೊತೆ ಐತಿಹಾಸಿಕ ಸಿನಿಮಾ ಒಂದನ್ನು ಮಾಡಬೇಕು ಎಂದುಕೊಂಡಿದ್ದೆ. ಆ ಸಿನಿಮಾ ಕೆಲಸಗಳು ಕೂಡ ನಡೆಯುತ್ತಿತ್ತು. ನಾಟ್ಯರಾಣಿ ಶಾಕುಂತಲೆ ಸಿನಿಮಾವನ್ನು ಅವರ ಜೊತೆ ಮಾಡಲು ನಿರ್ಧರಿಸಿದ್ದೆ ..” ಎಂದು ರಾಧಿಕಾ ತಿಳಿಸಿದ್ದಾರೆ. “ಯುವರಾಜ್ ಇಂತಹ ವ್ಯಕ್ತಿ ಎಂದು ತಿಳಿದಿರಲಿಲ್ಲ. ಮಾಧ್ಯಮಗಳಲ್ಲಿ ಅವರ ವಿಚಾರ ಬಹಿರಂಗವಾದಾಗ ಅವರ ನಿಜ ವ್ಯಕ್ತಿತ್ವ ಎಂಥದ್ದು ಎಂಬುದು ಗೊತ್ತಾಯಿತು. ಅವರ ಜೊತೆ ಸಿನಿಮಾ ಮಾಡುವುದು ಬೇಡ, ಅವರ ಸಹವಾಸವು ಬೇಡ..” ಎಂದು ಹೇಳಿ ಎಲ್ಲಾ ವಿಷಯಗಳಿಗೂ ರಾಧಿಕಾ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

ಮಾಧ್ಯಮಗಳಲ್ಲಿ ಬಂದಿದ್ದ ವಿಷಯಗಳ ಪ್ರಕಾರ ಯುವರಾಜ್ ಅಲಿಯಾಸ್ ಕ-ಳ್ಳ ಸ್ವಾಮಿ ರಾಧಿಕಾ ಅವರನ್ನು ಕೆಲವು ರಾಜಕಾರಣಿಗಳ ಜೊತೆ ಭೇಟಿ ಮಾಡಿಸಿದ್ದರು ಎನ್ನಲಾಗಿತ್ತು. ಈ ಎಲ್ಲದಕ್ಕೂ ಪ್ರೆಸ್ ಮೀಟ್ ಮೂಲಕ ರಾಧಿಕಾ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ಯುವರಾಜ್ ಅಲಿಯಾಸ್ ಕ-ಳ್ಳ ಸ್ವಾಮಿ ಹೆಸರು ರಾಧಿಕಾ ಕುಮಾರಸ್ವಾಮಿ ವಿಷಯದಲ್ಲಿ ಮಾತ್ರವಲ್ಲದೆ ಇನ್ನು ಹಲವಾರು ಹೈ ಪ್ರೊಫೈಲ್ ವ್ಯಕ್ತಿಗಳಿಗೆ ಈತ ಮೋಸ ಮಾಡಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ನಿವೃತ್ತ ಜಡ್ಜ್ ಆಗಿರುವ ಇಂದ್ರಕಲಾ ಅವರನ್ನು ರಾಜ್ಯಪಾಲರನ್ನಾಗಿ ಮಾಡುತ್ತೇನೆ ಎಂದು ತಿಳಿಸಿ ಅವರಿಂದ ಸುಮಾರು 4.5ಕೋಟಿ ಹಣ ಪಡೆದಿದ್ದಾನೆ ಯುವರಾಜ್. ರಿಯಲ್ ಎಸ್ಟೇಟ್ ಉದ್ಯಮಿಗಳು, ರಾಜಕಾರಣಿಗಳು, ಸಿನಿಮಾ ಕಲಾವಿದರು ಸೇರಿದಂತೆ ಹಲವಾರು ಜನರಿಗೆ ಮೋಸ ಮಾಡಿದ್ದಾನೆ.

Radhika-Kumaraswamy

ಸ್ಯಾಂಡಲ್ ವುಡ್ ನಟಿ , ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪತ್ನಿ ರಾಧಿಕಾ ಕುಮಾರಸ್ವಾಮಿ ಅವರ ಅಕೌಂಟ್ ಗೆ ಯುವರಾಜ್ ಅಲಿಯಾಸ್ ಕ-ಳ್ಳ ಸ್ವಾಮಿ ಅವರ ಅಕೌಂಟ್ ಇಂದ ಒಂದೂವರೆ ಕೋಟಿ ಹಣ ಟ್ರಾನ್ಸ್ಫರ್ ಆಗಿದೆ ಎಂಬ ಸುದ್ದಿ ಒಂದೆರಡು ದಿನಗಳ ಹಿಂದೆ ಎಲ್ಲೆಡೆ ಬಹಳ ಚರ್ಚೆಯಾಗುತ್ತಿತ್ತು. ಈ ವಿಚಾರದ ಕುರಿತು ನಟಿ ರಾಧಿಕಾ ಡಾಲರ್ಸ್ ಕಾಲೋನಿಯಲ್ಲಿರುವ ತಮ್ಮ ಮನೆಯಲ್ಲಿ ಪ್ರೆಸ್ ಮೀಟ್ ಕರೆದು ಸ್ಪಷ್ಟನೆ ನೀಡಿದ್ದಾರೆ. ಪ್ರೆಸ್ ಮೀಟ್ ನಲ್ಲಿ ರಾಧಿಕಾ ಕುಮಾರಸ್ವಾಮಿ ಅವರ ಅಣ್ಣ ರವಿ ರಾಜ್ ಕೂಡ ಇದ್ದರು. 17 ವರ್ಷಗಳಿಂದ ಯುವರಾಜ್ ಅವರ ಪರಿಚಯ ತಮಗೆ ಮತ್ತು ತಮ್ಮ ಕುಟುಂಬಕ್ಕೆ ಇದೆ ಎಂದು ಒಪ್ಪಿಕೊಂಡಿದ್ದಾರೆ ರಾಧಿಕಾ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •