Radhika

ಮತ್ತೊಂದು ಸಿಹಿ ಸುದ್ದಿ ಜೊತೆಗೆ ಮಾದ್ಯಮದ ಮುಂದೆ ಬಂದ ರಾಧಿಕಾ ಕುಮಾರಸ್ವಾಮಿ..

Home

ರಾಧಿಕಾ ಕುಮಾರಸ್ವಾಮಿ.. ಒಂದು ಕಾಲದ ಕನ್ನಡದ ಸ್ಟಾರ್ ನಟಿಯರಲ್ಲಿ ಒಬ್ಬರಾಗಿದ್ದ ರಾಧಿಕಾ ಅವರು ವ್ಯಯಕ್ತಿಕ ವಿಚಾರಗಳಿಗಾಗಿ ಸಾಕಷ್ಟು ವರ್ಷಗಳ ಕಾಲ ಬೆಳ್ಳಿ ತೆರೆಯಿಂದ ಮರೆಯಾಗಿ ಅನೇಕ ವರ್ಷಗಳ ನಂತರ ಸಧ್ಯ ಸ್ಯಾಂಡಲ್ವುಡ್ ನಲ್ಲಿ ಎರಡನೇ ಬಾರಿ ಕಂಬ್ಯಾಕ್ ಮಾಡಿದ್ದರು.. ಆದರೆ ಅದೃಷ್ಟವೋ ಅಥವಾ ಈಗಿನ ಟ್ರೆಂಡ್ ಬದಲಾದ ಕಾರಣವೋ ರಾಧಿಕಾ ಕುಮಾರಸ್ವಾಮಿ ಅವರು ನಿರೀಕ್ಷಿಸಿದಷ್ಟು ಯಶಸ್ಸು

ಈ ಎರಡನೇ ಬಾರಿಯ ಕಂಬ್ಯಾಕ್ ನಲ್ಲಿ ದೊರೆಯಲಿಲ್ಲ.. ಇನ್ನು ಇತ್ತ ನಿರ್ಮಾಪಕಿಯಾಗಿಯೂ ಕಾಣಿಸಿಕೊಂಡಿದ್ದ ರಾಧಿಕಾ ಅವರು ನಟ ಆದಿತ್ಯಾ ಅವರನ್ನು ನಾಯಕನನ್ನಾಗಿ ಹಾಕಿಕೊಂಡು ಸಿನಿಮಾ ನಿರ್ಮಾಣವನ್ನೂ ಸಹ ಮಾಡಿದರು ಅದೂ ಸಹ ದೊಡ್ಡ ಮಟ್ಟದ ಲಾಭವನ್ನೇನು ತಂದುಕೊಡಲಿಲ್ಲ.. ಥ್ರಿಲ್ಲರ್ ಕಥಾನಕಗಳಲ್ಲಿ ಮಿಂಚಿದ್ದ ರಾಧಿಕಾ ಅವರು ಒಂದಷ್ಟು ಸುದ್ದಿಯಾಗಿದ್ದರು.. ಆದರೆ ಅದ್ಯಾಕೋ ಆನಂತರ ಎಲ್ಲದರಿಂದ ದೂರಾಗಿ ಸೈಲೆಂಟ್ ಆಗಿದ್ದ ರಾಧಿಕಾ ಅವರೀಗ ಹೊಸದೊಂದು ಸಿಹಿ ಸುದ್ದಿಯ ಜೊತೆ ಮಾದ್ಯಮದ ಮುಂದೆ ಬಂದಿದ್ದಾರೆ..

Radhika Kumaraswamy | Facebook | Lucky | hd Kumaraswamy | ನಮ್ಮ ರಾಧಿಕಾ  ಕುಮಾರಸ್ವಾಮಿ ''Facebook''ಗೂ ಬಂದ್ರು

ಹೌದು ಎಲ್ಲರಿಗೂ ತಿಳಿದಂತೆ ನಿನಗಾಗಿ ಸಿನಿಮಾ ಮೂಲಕ ದೊಡ್ಡ ಮಟ್ಟದ ಯಶಸ್ಸು ಪಡೆದಿದ್ದ ರಾಧಿಕಾ ಅವರು ಸ್ಯಾಂಡಲ್ವುಡ್ ನ ಟಾಪ್ ಹೀರೋಯಿನ್ ಗಳಾದ ರಮ್ಯ ರಕ್ಷಿತಾ ರಾಧಿಕಾ ಎಂದೇ ಫೇಮಸ್ ಆಗಿದ್ದರು.. ಕನ್ನಡದ ಟಾಪ್ ಮೂವರು ನಟಿಯರ ಪೈಕಿ ರಾಧಿಕಾ ಒಬ್ಬರಾಗಿದ್ದರು.. ಇತ್ತ ತವರಿಗೆ ಬಾ ತಂಗಿ ಅಣ್ಣ ತಂಗಿ ಯಂತಹ ಫ್ಯಾಮಿಲಿ ಹಿಟ್ ಸಿನಿಮಾದಲ್ಲಿ ಶಿವಣ್ಣನ ತಂಗಿಯಾಗಿ ಕಾಣಿಸಿಕೊಂಡ ರಾಧಿಕಾ ಹಿಂತಿರುಗಿ ನೋಡಿದ್ದೇ ಇಲ್ಲ.. ಈಗಲೂ ಸಹ ರಾಧಿಕಾ ಪ್ರತಿ ವರ್ಷ ಶಿವಣ್ಣನಿಗೆ ಬಂಗಾರದ ರಾಕಿ ಕಟ್ಟುವ ಅಭ್ಯಾಸವನ್ನು ಹೊಂದಿದ್ದು ಆ ಸಿನಿಮಾಗಳು ಯಾವ ಮಟ್ಟಕ್ಕೆ ಯಶಸ್ಸು ತಂದುಕೊಟ್ಟಿತ್ತೆಂದು ಊಹಿಸಬಹುದು.. ಇನ್ನು ರಾಧಿಕಾ ಎಷ್ಟು ಉತ್ತುಂಗದಲ್ಲಿದ್ದರು ಎಂದರೆ ಆಗಲೇ ನಾಯಕ ನಟಿ ಪ್ರಧಾನ ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡರು.. ಆದರೆ ಅದ್ಯಾಕೋ ಇದ್ದಕಿದ್ದ ಹಾಗೆ ಚಂದನವನದಿಂದ ರಾಧಿಕಾ ಅವರು ಇದ್ದಕಿದ್ದ ಹಾಗೆಯೇ ದೂರಾದರು..

Radhika Kumaraswamy - Wikipedia

ಕಾರಣವೇನು ಎಂದು ತಿಳಿಯುವಷ್ಟರಲ್ಲಿ ಅವರ ವ್ಯಯಕ್ತಿಕ ವಿಚಾರವಾಗಿ ದೊಡ್ಡದೊಂದು ಸುದ್ದಿ ಹೊರ ಬಂದಿತ್ತು.. ಹೌದು ಅದಾಗಲೇ ಮುಖ್ಯಮಂತ್ರಿಯಾಗಿ ಒಳ್ಳೆಯ ಹೆಸರು ಮಾಡಿದ್ದ ಕುಮಾರಸ್ವಾಮಿ ಅವರ ಜೊತೆಗೆ ರಾಧಿಕಾ ಅವರ ಹೆಸರು ತಳುಕು ಹಾಕಿಕೊಂಡಿತ್ತು.. ಇದು ರಾಜಕಾರಣಿಗಳಿಗೆ ಹೊಸ ವೊಚಾರವೇನೂ ಅಲ್ಲ.. ಸಾಕಷ್ಟು ರಾಜಕಾರಣಿಗಳಿಗೆ ಈ ರೀತಿಯ ಸಂಬಂಧಗಳಿದ್ದು ಆಗಾಗ ಸಿಡಿಗಳು ಬಿಡುಗಡೆಯಾಗುತ್ತಲೇ ಇರುವುದು ಎಲ್ಲರಿಗೂ ತಿಳಿದೇ ಇದೆ.. ಆದರೆ ಕುಮಾರಸ್ವಾಮಿ ಅವರ ವಿಚಾರದಲ್ಲಿ ಇದು ಬೇರೆಯದ್ದೇ ರೀತಿಯಿತ್ತು.. ಕುಮಾರಸ್ವಾಮಿ ಅವರು ಮಾಡಿದ್ದು ತಪ್ಪಾದರೂ ಸಹ ಅದನ್ನು ಬಹಿರಂಗವಾಗಿ ಹೇಳಿಕೊಂಡು ತಾವು ಮಾಡಿದ ತಪ್ಪಿನ ಬಗ್ಗೆ ಹೇಳಿಕೊಂಡು ಕ್ಷಮೆ ಕೇಳಿದ್ದರು.. ಇತ್ತ ರಾಧಿಕಾ ಅವರನ್ನು ಮದುವೆಯೂ ಸಹ ಆಗಿದ್ದ ಕುಮಾರಸ್ವಾಮಿ ಅವರು ಈ ದಂಪತಿಗೆ ಅದಾಗಲೇ ಒಂದು ಹೆಣ್ಣು ಮಗುವೂ ಆಗಿತ್ತು.. ಮಗಳ ಜೊತೆ ರಾಧಿಕಾ ವಿದೇಶದಲ್ಲಿ ನೆಲೆಸಿದ್ದಾರೆ ಎನ್ನುವ ಸುದ್ದಿ ಇತ್ತು.. ಆದರೆ ಸಾಕಷ್ಟು ವರ್ಷಗಳ ನಂತರ ರಾಧಿಕಾ ಮತ್ತೆ ಬೆಂಗಳೂರಿಗೆ ಮಗಳ ಜೊತೆ ಕಾಲಿಟ್ಟರು.. ಅದು ರಾಧಿಕಾ ಆಗಿಯಲ್ಲ.. ರಾಧಿಕಾ ಕುಮಾರಸ್ವಾಮಿ ಯಾಗಿ..

Radhika Says Marrying Kumaraswamy Was Her Fate | Radhika Kumaraswamy Is  Happy & Has No Regrets - Filmibeat

ಹೌದು ರಾಧಿಕಾ ಕುಮಾರಸ್ವಾಮಿ ಎಂದು ಅಧಿಕೃತವಾಗಿ ಹೆಸರನ್ನು ಹಾಕಿಕೊಂಡರು.. ಅಷ್ಟೇ ಅಲ್ಲದೇ ತಾವು ಮತ್ತೆ ಬೆಂಗಳೂರಿಗೆ ಮರಳಿದ ಕೂಡಲೇ ರಮ್ಯಾ ಹಾಗೂ ನಟ ಯಶ್ ಅವರನ್ನು ಹಾಕಿಕೊಂಡು ಲಕ್ಕಿ ಸಿನಿಮಾ ನಿರ್ಮಾಣ ಮಾಡಿದರು.. ಸಿನಿಮಾ ದೊಡ್ಡ ಯಶಸ್ಸು ನೀಡಿತು.. ಆ ಸಿನಿಮಾದಲ್ಲಿ ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಎಂದೇ ತೋರಿಕೊಂಡಿದ್ದರು.. ಈ ಮೂಲಕ ಬೇರೆ ಪ್ರಶ್ನೆ ಕೇಳಲು ಅವಕಾಶವೇ ಇಲ್ಲದಂತೆ ತಮ್ಮಿಬ್ಬರ ಸಂಬಂಧವನ್ನು ಅಧಿಕೃತ ಮಾಡಿಕೊಂಡಿದ್ದರು.. ಇನ್ನು ಇತ್ತ ಸಿನಿಮಾ ವಿಚಾರವನ್ನು ಹೊರತು ಪಡಿಸಿ ವ್ಯಯಕ್ತಿಕ ವಿಚಾರವಾಗಿಯೇ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಸದ್ದು ಮಾಡಿದ ರಾಧಿಕಾ ಅವರು ಕುಮಾರಸ್ವಾಮಿ ಅವರೊಟ್ಟಿಗೆ ಮಗು ಮತ್ತು ರಾಧಿಕಾ ಇರುವ ಸಾಕಷ್ಟು ಫೋಟೋಗಳು ವೈರಕ್ ಆದವು‌.. ಇದು ಬಹಳಷ್ಟು ಟೀಕೆಗೂ ಕಾರಣವಾಗಿ ಹೋಯ್ತು.. ಇನ್ನು ಇತ್ತ ಮನೆಯಲ್ಲಿ ನಡೆದ ಪೂಜೆಯೊಂದರ ಕಾರ್ಯಕ್ರಮದಲ್ಲಿಯೂ ಕುಮಾರಸ್ವಾಮಿ ಅವರು ರಾಧಿಕಾ ಅವರಿಗೆ ಸಿಂಧೂರ ಇಡುವ ವೀಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು ಇವರಿಬ್ಬರ ಸಂಬಂಧವನ್ನು ಅಧಿಕೃತಗೊಳಿಸಿದಂತೆ ಕಂಡಿತ್ತು..

ಅವಳು ನನ್ನ ತಂಗಿ ಅಲ್ಲ! ಎಂದ ನಿಖಿಲ್ ಕುಮಾರಸ್ವಾಮಿ ಗೆ ರಾಧಿಕಾ ಕುಮಾರಸ್ವಾಮಿ ತಿರುಗೇಟು  ಕೊಟ್ಟಿದ್ದಾರೆ | Bengaluru Adda

ಆದರೆ ಕೆಲ ವರ್ಷಗಳಿಂದ ಯಾಕೋ ರಾಧಿಕಾ ಹಾಗೂ ಕುಮಾರಸ್ವಾಮಿ ಅವರ ನಡುವಿನ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿದ್ದು ಇಬ್ಬರೂ ಸಹ ದೂರಾಗಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು.. ವರ್ಷದ ಹಿಂದೆ ಮಾದ್ಯಮದವರು ರಾಧಿಕಾ ಅವರ ಬಗ್ಗೆ ಪ್ರಶ್ನಿಸಲಾಗಿ ಯಾರ್ ಅವರು ಎಂದಿದ್ದರು ಕುಮಾರಸ್ವಾಮಿ ಅವರು.. ಅಷ್ಟೇ ಅಲ್ಲದೇ ಇತ್ತ ನಾನು ತಪ್ಪು ಮಾಡಿದ್ದು ನಿಜ ಆದರೀಗ ತಿದ್ದುಕೊಂಡಿದ್ದೀನಿ ಎಂದೂ ಸಹ ಕುಮಾರಸ್ವಾಮಿ ಅವರು ಹೇಳಿಕೊಂಡಿದ್ದು ನಂತರದಲ್ಲಿ ತಮ್ಮ ಕುಟುಂಬ ಮಗ ನಿಖಿಲ್ ಮದುವೆ ಮೊಮ್ಮಗು ಹೀಗೆ ಕುಟುಂಬದ ವಿಚಾರಗಳ ಜೊತೆ ರಾಜಕೀಯದಲ್ಲಿ ಬ್ಯುಸಿ ಆದರು.. ಆದರೆ ಅತ್ತ ರಾಧಿಕಾ ಅವರು ಮತ್ತೆ ಸಿನಿಮಾಗೆ ಕಂಬ್ಯಾಕ್ ಮಾಡಿ ಅಷ್ಟು ಯಶಸ್ಸು ಕಾಣದ ಕಾರಣ ಕೊಂಚ ಬ್ರೇಕ್ ಪಡೆದಂತೆ ಕಂಡಿತ್ತು.. ಆದರೆ ಇದೀಗ ಹೊಸದೊಂದು ಸಮಾಚಾರದ ಜೊತೆಗೆ ಮತ್ತೆ ಮಾದ್ಯಮದ ಮುಂದೆ ಬಂದಿದ್ದಾರೆ..

Haven't you heard of Radhika Kumaraswamy?

ಹೌದು ರಾಧಿಕಾ ಕುಮಾರಸ್ವಾಮಿ ಅವರು ಅದ್ಭುತ ಡ್ಯಾನ್ಸರ್ ಎಂಬ ವಿಚಾರ ಎಲ್ಲರಿಗೂ ತಿಳಿದೇ ಇದೆ.. ಜೊತೆಗೆ ಕಿರುತೆರೆಯ ಡ್ಯಾನ್ಸ್ ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ ನ ಡ್ಯಾನ್ಸ್ ಮಾಸ್ಟರ್ ಒಬ್ಬರ ಜೊತೆ ಬಹಳ ಹಾಟಾಗಿ ಹೆಜ್ಜೆ ಹಾಕಿದ್ದು ಸಿಕ್ಕಾಪಟ್ಟೆ ವೈರಲ್ ಆಗಿತ್ತು.. ಇದೀಗ ತಮ್ಮ ಮೋಹಕ ನೃತ್ಯದ ಮೂಲಕ ಮತ್ತೆ ಪಾರ್ಟಿಯೊಂದರಲ್ಲಿ ಕಾಣಿಸಿಕೊಂಡಿದ್ದಾರೆ.. ಹೌದು ಕಲರ್ಸ್ ಕನ್ನಡ ವಾಹಿನಿ ಹೊಸ ವರ್ಷದ ಪ್ರಯುಕ್ತ ಮಾಡಿರುವ ರಂಗು ರಂಗೋಲಿ ಎಂಬ ಪಾರ್ಟಿಯೊಂದರಲ್ಲಿ ರಾಧಿಕಾ ಕುಮಾರಸ್ವಾಮಿ ಪಡ್ಡೆ ಹೈಕಳ ನಿದ್ದೆ ಗೆಡಿಸುವಂತಹ ನೃತ್ಯಕ್ಕೆ ಹೆಜ್ಜೆ ಹಾಕಿದ್ದಾರೆ.. ಅಷ್ಟೇ ಅಲ್ಲದೇ ಮುಂಬರುವ ಕಲರ್ಸ್ ಕನ್ನಡದ ಡ್ಯಾನ್ಸಿಂಗ್ ಚಾಂಪಿಯನ್ ಡ್ಯಾನ್ಸ್ ಶೋನಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತು ಸಹ ಕೇಳಿ ಬಂದಿದ್ದು ಮತ್ತೆ ಮನರಂಜನಾ ಮಾದ್ಯಮದ ಮುಂದೆ ತಮ್ಮ ಡ್ಯಾನ್ಸ್ ಮೂಲಕ ಹಾಜರಾಗುತ್ತಿದ್ದಾರೆ‌ನ್ನಬಹುದು..

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...