ರಾಧಿಕಾ

ನಾಚಿ ನೀರಾದ ರಾಧಿಕಾ,ಪ್ರೀತಿಯಿಂದ ಕುಮಾರಣ್ಣನ ಹೇಗೆ ಕರೆಯುತ್ತಾರಂತೆ ಗೊತ್ತೇ?? ರಾಧಿಕಾ ರವನ್ನು ಪ್ರೀತಿಯಿಂದ ಏನು ಅನ್ನುತ್ತಾರೆ ಗೊತ್ತಾ??

Home

ನಮಸ್ಕಾರ ಸ್ನೇಹಿತರೇ ನಾವು ಇದು ಮಾತನಾಡಲು ಹೊರಟಿರುವುದು ರಾಧಿಕಾ ಕುಮಾರಸ್ವಾಮಿ ಹಾಗೂ ಕುಮಾರಸ್ವಾಮಿ ಅವರ ವೈವಾಹಿಕ ಜೀವನದ ಕುರಿತಂತೆ. ಕುಮಾರಸ್ವಾಮಿಯವರು ತಮ್ಮ ಈ ಮದುವೆಯ ಕುರಿತಂತೆ ಎಷ್ಟೇ ಮುಚ್ಚಿಟ್ಟುಕೊಳ್ಳಲು ಪ್ರಯತ್ನಿಸಿದರೂ ಕೂಡ ಮದುವೆ ಮದುವೆಯೇ ತಾನೇ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರಾಧಿಕಾ ಕುಮಾರಸ್ವಾಮಿಯವರು ಚಿತ್ರರಂಗಕ್ಕೂ ಕೂಡ ಕಾಲಿಡುವ ಮೊದಲೇ ರತನ್ ಕುಮಾರ್ ಎನ್ನುವವರನ್ನು ಮದುವೆಯಾಗಿದ್ದರು. ಒಂದು ವಿಧದಲ್ಲಿ ಇದು ಬಾಲ್ಯವಿವಾಹ ವಾಗಿತ್ತು.

ಇನ್ನೊಂದು ಕಡೆಯಲ್ಲಿ ಆತ ಹೃದಯದ ಸಮಸ್ಯೆಯಿಂದಾಗಿ ಅಸುನೀಗುತ್ತಾರೆ. ಅದಾದ ನಂತರ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಉನ್ನತ ಹಂತದಲ್ಲಿ ಇರಬೇಕಾದ ಸಂದರ್ಭದಲ್ಲಿ 2006 ರಲ್ಲಿ ಕುಮಾರಸ್ವಾಮಿಯವರು ತಮ್ಮ ಮೊದಲ ಹೆಂಡತಿ ಇರುವಾಗಲೇ ರಾಧಿಕಾ ಕುಮಾರಸ್ವಾಮಿ ಅವರನ್ನು ಮದುವೆಯಾಗುತ್ತಾರೆ. 2010 ರಲ್ಲಿ ಇವರಿಬ್ಬರ ಮದುವೆಯನ್ನು ಅಸಿಂಧು ಎಂದು ನ್ಯಾಯಾಲಯ ತೀರ್ಪು ನೀಡುತ್ತದೆ. ಆದರೂ ಕೂಡ ಇವರಿಬ್ಬರ ದಾಂಪತ್ಯದ ಫಲವಾಗಿ ಶಮಿಕ ಎನ್ನುವ ಹೆಣ್ಣುಮಗಳು ಜನಿಸಿರುತ್ತಾಳೆ.

ಹೊರನೋಟಕ್ಕೆ ಇವರಿಬ್ಬರ ಸಂಬಂಧಕ್ಕೆ ಬ್ರೇಕ್ ಬಿದ್ದಿದೆ ಇಬ್ಬರೂ ಕೂಡ ಒಬ್ಬರನ್ನೊಬ್ಬರು ಮಾತನಾಡಿಸುವುದಿಲ್ಲ ಎಂಬ ಸುದ್ದಿಗಳು ಕೇಳಿ ಬಂದರೂ ಒಳಗಡೆಯ ಮಾಹಿತಿಯ ಪ್ರಕಾರ ಇವರಿಬ್ಬರ ನಡುವೆ ಸ್ನೇಹ ಸಂಬಂಧ ಚೆನ್ನಾಗಿದೆ ಎಂದು ಬಲ್ಲವರು ಹೇಳುತ್ತಾರೆ. ರಾಧಿಕಾ ರವರ ಜೀವನವನ್ನು ನಡೆಸಲು ಯಾವುದೇ ಕುಂದು ಕೊರತೆ ಬಾರದಂತೆ ಕುಮಾರಸ್ವಾಮಿಯವರೇ ಎಲ್ಲವನ್ನು ನೋಡಿಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತದೆ.

ಇನ್ನು ಇತ್ತೀಚೆಗಷ್ಟೇ ನಡೆದಿರುವ ಸಂದರ್ಶನವೊಂದರಲ್ಲಿ ಕುಮಾರಸ್ವಾಮಿಯವರು ರಾಧಿಕಾ ರವರನ್ನು ಏನೆಂದು ಕರೆಯುತ್ತಾರೆ ಎಂದು ಕೇಳಿದ್ದಕ್ಕಾಗಿ ನಾಚಿ ಉತ್ತರವನ್ನು ನೀಡಿದ್ದಾರೆ. ಹೌದು ಕುಮಾರಸ್ವಾಮಿಯವರು ರಾಧಿಕಾ ರವರನ್ನು ಚಿನ್ನು ಎಂದು ಕರೆಯುತ್ತಾರೆ ಎಂಬುದಾಗಿ ಹೇಳಿದ್ದಾರೆ. ಇನ್ನು ಕುಮಾರಸ್ವಾಮಿಯವರನ್ನು ರಾಧಿಕಾ ರವರು ರೀ ಎಂದು ಕರೆಯುತ್ತಾರಂತೆ. ಇನ್ನು ಈ ವಿಚಾರವನ್ನು ಹೇಳುವಾಗ ರಾಧಿಕಾ ಕುಮಾರಸ್ವಾಮಿ ಅವರ ಕೆನ್ನೆ ನಾಚಿ ಕೆಂಪಾಗಿದ್ದಂತೂ ಸುಳ್ಳಲ್ಲ.ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...