ರಾಧಿಕಾ ಕುಮಾರಸ್ವಾಮಿ ಯಾರಿಗೆ ಗೊತ್ತಿಲ್ಲ ಹೇಳಿ? ಕೇವಲ ನಟಿ ಮಾತ್ರವಲ್ಲ ನಿರ್ಮಾಪಕಿ ಕೂಡ. ಅಂದಹಾಗೆ, 2002 ರಲ್ಲಿ ಬಿಡುಗಡೆಗೊಂಡ ನಿನಗಾಗಿ ಚಿತ್ರದ ಮೂಲಕ ಸಿನಿಲೋಕಕ್ಕೆ ಎಂಟ್ರಿ ಕೊಟ್ಟರು. ಅದಾಗಲೇ ಒಂಭತ್ತನೇ ತರಗತಿ ಓದುತ್ತಿದ್ದ ಈ ಹುಡುಗಿ ರಾಧಿಕಾ ಪರದೆಯ ಮೇಲೆ ಎಲ್ಲರಿಗೂ ಇಷ್ಟ ಆದರು. ತವರಿಗೆ ಬಾ ತಂಗಿ, ರಿಷಿ, ಮಂಡ್ಯ, ಅಟೋ ಶಂಕರ್ ,ಅಣ್ಣ ತಂಗಿ ಸೇರಿದಂತೆ ಸೂಪರ್ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಅಭಿಮಾನಿಗಳು ಇವರನ್ನು ಒಪ್ಪಿಕೊಂಡರು. ಶಿವರಾಜ್ ಕುಮಾರ್ ಅವರ ಜೊತೆಯಲ್ಲಿ ಮಾಡಿದ ತಂಗಿ ಪಾತ್ರವು ಪ್ರೇಕ್ಷಕವರ್ಗಕ್ಕೆ ಭಾರಿ ಮೆಚ್ಚುಗೆಯಾಯಿತು.

ಸಿನಿಮಾ ರಂಗದಿಂದ ಕೊಂಚ ಬ್ರೇಕ್ ಪಡೆದುಕೊಂಡ ರಾಧಿಕಾ ಕುಮಾರ್ ಸ್ ಸ್ವಾಮಿ ಮತ್ತೆ ಸಿನಿರಂಗಕ್ಕೆ ಮರಳಿದ್ದು, ಸ್ವೀಟಿ ನನ್ನ ಜೋಡಿ ಸಸಿನಿಮಾದ ಮೂಲಕ.ಆದರೆ ಈ ನಡುವೆ ತೆರೆಮೇಲೆ ನಟಿಸದಿದ್ದರೂ ಕೂಡ ಯಶ್ ಹಾಗೂ ರಮ್ಯಾ ಅಭಿನಯದ ಲಕ್ಕಿ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಸದ್ಯಕ್ಕೆ ನಟಿಯಾಗಿರುವ ರಾಧಿಕಾ ಕುಮಾರ ಸ್ವಾಮಿಯಾವರು ಶಮಿಕಾ ಎಂಟರ್‍ಪ್ರೈಸಸ್ ಮುನ್ನಡೆಸುತ್ತಿದ್ದು, ನಿರ್ಮಾಪಕಿಯಾಗಿ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಮಂಗಳೂರಿನವರಾದ ರಾಧಿಕಾ ಕುಮಾರ್ ಸ್ವಾಮಿ.ಹದಿನಾಲ್ಕನೇ ವಯಸ್ಸಿನಲ್ಲಿ ರತನ್ ಕುಮಾರ್ ಎಂಬುವವರ ಜೊತೆ ಇವರಿಗೆ ಬಾಲ್ಯ ವಿವಾಹವಾಗುತ್ತದೆ. ಆದರೆ ಇವರು 2002 ರಲ್ಲಿ ಇವರ ಪತಿ ಹೃದಯಘಾತದಿಂದ ಸಾವನ್ನಪ್ಪಿದ್ದರು.
ಇದಾದ ಬಳಿಕ 2006 ರಲ್ಲಿ ಕುಮಾರಸ್ವಾಮಿಯವರೊಂದಿಗೆ ಸಪ್ತ ಪದಿ ತುಳಿಯುತ್ತಾರೆ. ಇದೀಗರಾಧಿಕಾರಿಗೆ ಶಮಿಕಾ ಎಂಬ ಪುತ್ರಿಯಿದ್ದಾಳೆ. ಕುಮಾರ ಸ್ವಾಮಿಯವರೊಂದಿಗೆ ಮದುವೆಯಾದ ವಿಚಾರವನ್ನು ಗೌಪ್ಯವಾಗಿಟ್ಟು ಕೊಂಡಿದ್ದ ರಾಧಿಕಾ 2010 ರಲ್ಲಿ ಈ ವಿಷಯವನ್ನು ಎಲ್ಲರೊಂದಿಗೆ ಹಂಚಿಕೊಂಡರು.
ಸಿನಿಮಾ ಬಿಟ್ಟರೆ ಬೇರೆ ಯಾವುದರಲ್ಲಿಯೂ ಹೆಚ್ಚಾಗಿ ಕಾಣಿಸಿಕೊಳ್ಳದ ನಟಿ ರಾಧಿಕಾ, ಹೌದು, ಕಳೆದ ಕೆಲವು ತಿಂಗಳ ಹಿಂದೆ, ನಟಿ, ಸ್ಯಾಂಡಲ್‌ವುಡ್‌ ನಟಿ, ನಿರ್ಮಾಪಕಿ ರಾಧಿಕಾ ಕುಮಾರ ಸ್ವಾಮಿಇದೀಗ ಯುವರಾಜನ ಪ್ರಕರಣದಲ್ಲಿ ಸಿಸಿಬಿ ವಿಚಾರಣೆಗೆ ಒಳಗಾಗಿದ್ದರು. ಈ ಕುರಿತಾಗಿ ರಾಜಕಾರಣಿ ಕುಮಾರ ಸ್ವಾಮಿ ಬಳಿ ಕೇಳಿದಾಗ ಯಾರಪ್ಪ ಅದು.ಈಗಿರುವಾಗಲೇ ರಾಧಿಕಾ ಕುಮಾರ ಸ್ವಾಮಿಯವರು ಹೊರದೇಶಕ್ಕೆ ಪಯಣ ಬೆಳೆಸಿದರು. ಈ ಮಧ್ಯೆ ರಾಧಿಕಾಳನ್ನು ನೋಡಲು ಕುಮಾರಸ್ವಾಮಿಯವರು ಕೂಡ ವಿದೇಶಕ್ಕೆ ಪಯಣ ಬೆಳೆಸುತ್ತಿದ್ದರು. ಮಗುವಿನ ಮೂರು ವರ್ಷವಾದ ಬಳಿಕ ರಾಧಿಕಾ ನಾಡಿಗೆ ಮರಳಿದರು. ಅದು ಅಲ್ಲದೇ ತಮ್ಮ ಹೆಸರಿನ ಜೊತೆ ರಾಧಿಕಾ ಕೆ ಸ್ವಾಮಿ ಎಂಬುದನ್ನು ನೋಡಿದ ಎಲ್ಲರಿಗೂ ಸಹಜವಾಗಿಯೇ ಅನುಮಾನ ಮೂಡಿತ್ತು.ಅದು ಅಲ್ಲದೇ ಕೊನೆಗೂ ನಟಿ ರಾಧಿಕಾ ಕುಮಾರ ಸ್ವಾಮಿಯವರು ತಮ್ಮ ಮದುವೆಯ ವಿಚಾರವಾಗಿ ಫೋಟೊ ಹಂಚಿಕೊಂಡರು.
ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •