ದೇಶದ ಮಾಜಿ ಪ್ರಧಾನಿ ಹಾಗೂ ಜಾತ್ಯತೀತ ಜನತಾ ದಳ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಎಚ್. ಡಿ. ದೇವೇಗೌಡ ಅವರು ನಿನ್ನೆಯಷ್ಟೇ ೮೯ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ವೇಳೆ ಅವರು ತಮ್ಮ ಕುಟುಂಬದ ಸದಸ್ಯರ ಜೊತೆಗೆ ಹುಟ್ಟು ಹಬ್ಬಹಬ್ಬವನ್ನು ಆಚರಣೆ ಮಾಡಿಕೊಂಡಿದ್ದಾರೆ. ಪ್ರತಿ ವರ್ಷ ಇವರಿಗೆ ಜೆಡಿಎಸ್‌ ನ ಕಾರ್ಯಕರ್ತರು ಅದ್ಧೂತಿಯಾಗಿ ಹುಟ್ಟುಹಬ್ಬವನ್ನು ಆಚರಣೆ ಮಾಡುತ್ತಿದ್ದರು.

 

 

ಆದರೆ ಈ ಬಾರಿ ರಾಜ್ಯದಲ್ಲಿ ಕೊರೊನಾ ಸಂಕಷ್ಟ ಎದುರಾಗಿರುವುದರಿಂದ ಹಾಗೂ ಲಾಕ್‌ ಡೌನ್‌ ವಿಧಿಸಿರುವುದರಿಂದ ಯಾರೂ ಮನೆಯಿಂದ ಹೊರಬರದೇ ಕೇವಲ ಸಾಮಾಜಿಕ ಮಾಧ್ಯಮದ ಮೂಲಕವೇ ಹುಟ್ಟುಹಬ್ಬಕ್ಕೆ ಶುಭಾಶಯವನ್ನು ಕೋರಿದ್ದಾರೆ. ಆದರೆ ಈ ಬಾರಿ ಮಾತ್ರ ದೇವೇಗೌಡ ಅವರ ಹುಟ್ಟುಹಬ್ಬ ವಿಶಿಷ್ಟವಾಗಿಯೇ ಇತ್ತು. ಈ ವರ್ಷ ರಾಧಿಕಾ ಕುಮಾರಸ್ವಾಮಿ ಅವರು ತಮ್ಮ ಪ್ರೀತಿಯ ಮಾವನವರಿಗೆ ವಿಶೇಷವಾದ ಉಡುಗೊರೆಯನ್ನು ಕಳುಹಿಸಿಕೊಡುವ ಮೂಲಕ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದಾರೆ.

ಆದರೆ ರಾಧಿಕಾ ಕುಮಾರಸ್ವಾಮಿ ಅವರು ಕಳುಹಿದ ಉಡುಗೊರೆಯಿಂದಾಗಿ ಪತಿ ಎಚ್. ಡಿ. ಕುಮಾರಸ್ವಾಮಿ ಸೇರಿದಂತೆ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಅವರ ಕುಟುಂಬದ ಸದಸ್ಯರೆಲ್ಲರೂ ಶಾಕ್‌ ಆಗಿದ್ದಾರೆ.
ಹೌದು ರಾಧಿಕಾ ಕುಮಾರಸ್ವಾಮಿ ಹಾಗೂ ಕುಮಾರಸ್ವಾಮಿ ಕುಟುಂಬ ಈಗ ಗಳಸ್ಯ ಕಂಟಸ್ಯ ಎಂಬಂತಾಗಿದೆ. ಈ ಮೊದಲು ಇದ್ದ ಬಾಂಧವ್ಯ ಈಗ ಉಳಿದಿಲ್ಲ ಎಂಬ ಸುದ್ದಿ ಎಲ್ಲೆಡೆ ಸಾಕಷ್ಟು ಸದ್ದು ಮಾಡುತ್ತಿದೆ. ಆದರೆ ಇದೇ ವೇಳೆ ರಾಧಿಕಾ ಕುಮಾರಸ್ವಾಮಿ ಅವರು ತಮ್ಮ ಮಾವನವರ ಹುಟ್ಟುಹಬ್ಬಕ್ಕೆ ಉಡುಗೊರೆ ಕಳುಹಿಸಿರುವುದು ಮತ್ತಷ್ಟು ಆಶ್ಚರ್ಯವನ್ನುಂಟು ಮಾಡಿದೆ.

 

 

ರಾಧಿಕಾ ಅವರು ತಮ್ಮ ಮಾವನವರಿಗೆ ತುಂಬಾ ಇಷ್ಟವಾಗುವ ರೇಷ್ಮೆ ಪಂಚೆ, ಶರ್ಟ್‌ ಹಾಗೂ ಶಲ್ಯದ ಜೊತೆಗೆ ಹೂಗುಚ್ಛವನ್ನು ಉಡುಗೊರೆಯಾಗಿ ಕಳುಹಿಸಿದ್ದರು. ಆ ಮೂಲಕ ತಮ್ಮ ಮಾವನವರ ಕುಟುಂಬಕ್ಕೆ ಹತ್ತಿರವಾಗುವ ಪ್ರಯತ್ನ ಮಾಡಿದ್ದರು. ಆದರೆ ಇದನ್ನು ಕಂಡ ಕುಮಾರಸ್ವಾಮಿ ಅವರು ಸ್ವತಃ ಕೆಂಡಾಮಂಡಲವಾಗಿದ್ದಾರೆ. ಇದರ ಜೊತೆಗೆ ನಿಖಿಲ್‌ ಕುಮಾರಸ್ವಾಮಿ ಕೂಡ ರಾಧಿಕಾ ಅವರ ನಡೆಯನ್ನು ಕಂಡು ಕೋಪಗೊಂಡಿದ್ದಾರೆ ಎನ್ನಲಾಗಿದೆ.

ಆದರೆ ರಾಧಿಕಾ ಕುಮಾರಸ್ವಾಮಿ ಅವರು ಮಾತ್ರ ಇದಾವುದಕ್ಕೂ ತಲೆಕಡೆಸಿಕೊಳ್ಳದೇ ತಮ್ಮ ಮಾವನವರ ಹುಟ್ಟುಹಬ್ಬಕ್ಕೆ ವಿಶ್‌ ಮಾಡಿದ್ದಾರೆ. ಒಟ್ಟಾರೆ ದೊಡ್ಡವರ ಮನೆಯಲ್ಲಿ ನಡೆಯುವ ಸಣ್ಣ ಸಣ್ಣ ವಿಚಾರಗಳು ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತದೆ. ಸದ್ಯ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಟ್ರೋಲ್‌ ಆಗುತ್ತಿದೆ. ಹೋಗಲಿ ಬಿಡಿ ದೊಡ್ಡವರ ಮನೆಯ ಉಸಾಬರಿ ನಮಗ್ಯಾಕೆ?

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •