ನಟಿ ರಚಿತಾ ರಾಮ್ ಸ್ಯಾಂಡಲ್ವುಡ್ ನ ಟಾಪ್‌ ನಟಿಯರಲ್ಲಿ ಒಬ್ಬರು..‌ ಧಾರಾವಾಹಿ‌ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ‌ ಕೊಟ್ಟ ರಚಿತಾ ರಾಮ್.. ಮೊದಲ ಸಿನಿಮಾದಲ್ಲಿಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ಅಭಿನಯಿಸುವ ದೊಡ್ಡ ಅವಕಾಶ ಪಡೆಯುತ್ತಾರೆ.. ನಂತರ ನಡೆದದ್ದೇಲ್ಲಾ ಒಂದು ರೀತಿ ಮ್ಯಾಜಿಕ್ ಎನ್ನಬಹುದು.. ಬುಲ್ ಬುಲ್ ಸಿನಿಮಾ ಮೂಲಕ ಬೆಳ್ಳಿ ತೆರೆ ಪ್ರವೇಶ ಪಡೆದ ರಚಿತಾ ರಾಮ್ ಡಿಂಪಲ್ ಕ್ವೀನ್ ಎಂದೇ ಫೇಮಸ್ ಆದರು.. ಸಾಲು ಸಾಲು ಸ್ಟಾರ್ ಹೀರೋಗಳ ಜೊತೆ ಅಭಿನಯಿಸಿದ ರಚಿತಾ ರಾಮ್ ಸುದೀಪ್, ಗಣೇಶ್, ಉಪೇಂದ್ರ, ಅಪ್ಪು, ನಿಖಿಲ್ ಹೀಗೆ ಎಲ್ಲರ ಜೊತೆ ತೆರೆ ಮೇಲೆ ಕಾಣಿಸಿಕೊಂಡರು..

ಸದ್ಯ ತಮಿಳು ಹಾಗೂ ತೆಲುಗು ಇಂಡಸ್ಟ್ರಿಗೂ ರಚಿತಾ ರಾಮ್ ಕಾಲಿಟ್ಟಿದ್ದು ಅಲ್ಲಿಯೂ ಡಿಂಪಲ್ ಕ್ವೀನ್ ಮಿಂಚಲಿದ್ದಾರೆ.. ಇನ್ನು ಸಿನಿಮಾ ವಿಚಾರಕ್ಕೆ ಮಾತ್ರವಲ್ಲದೇ ರಚಿತಾ ರಾಮ್ ಆಗಾಗ ವ್ಯಯಕ್ತಿಕ ವಿಚಾರಗಳ‌ ಕಾರಣಕ್ಕೂ ಸುದ್ದಿಯಾಗುತ್ತಲೇ ಇರುತ್ತಾರೆ.. ಹೌದು ಸಾಮಾಜಿಕ ಜಾಲತಾಣದಲ್ಲಿ ರಚಿತಾ ರಾಮ್ ಒಂದು ರೀತಿ ಸೆನ್ಸೇಷನ್ ಎನ್ನಬಹುದು.. ಕೆಲ ದಿನಗಳ ಹಿಂದಷ್ಟೇ ಮದುವೆ ವಿಚಾರವಾಗಿ ಸುದ್ದಿಯಾಗಿದ್ದ ರಚಿತಾ ರಾಮ್ ಗೌಡರ ಹುಡುಗ ಧನ್ವೀರ್ ಜೊತೆಗಿನ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಅವರೇನಾ ರಚ್ಚು ಮದುವೆಯಾಗುವ ಹುಡುಗ ಎಂದು ಸುದ್ದಿ ಹಬ್ಬಿತ್ತು.. ಕೊನೆಗೆ ರಚಿತಾ ರಾಮ್ ಖುದ್ದಾಗಿ ಪ್ರತಿಕ್ರಿಯೆ ನೀಡಿ ಅದೆಲ್ಲಾ ಅಂತೆಕಂತೆಯ ವಿಚಾರವಷ್ಟೇ..

Rachita-Ram-new

ಧನ್ವೀರ್ ಮನೆ ಇರುವ ಏರಿಯಾ ಕಡೆ ಸ್ನೇಹಿತೆಯನ್ನು ಭೇಟಿ‌ ಮಾಡಲು ಹೋದ ಸಮಯದಲ್ಲಿ ಧನ್ವೀರ್ ಮನೆಗೂ ಹೋಗಿದ್ದೆ ಅಷ್ಟೇ ಎಂದು ವಿಚಾರಕ್ಕೆ ತೆರೆ ಎಳೆದಿದ್ದರು.. ಇನ್ನು ನಿಖಿಲ್ ಹಾಗೂ ರಚಿತಾ ಅವರ ಕಲ್ಯಾಣದ ವಿಚಾರವಾಗಿಯಂತೂ ಸಾಲು ಸಾಲೂ ಗಾಸಿಪ್ ಗಳು ಹರಿದಾಡಿದ್ದವು‌‌.. ಕೊನೆಗೆ ಇದಕ್ಕೂ ರಚಿತಾ ರಾಮ್ ಅವರೇ ಇಲ್ಲವೆಂದು ತೆರೆ ಎಳೆದಿದ್ದರು..

ಇನ್ನು ಈ ವರ್ಷದ ಶುರುವಿನಲ್ಲಿ ಏಕ್ ಲವ್ ಯಾ ಸಿನಿಮಾದಲ್ಲಿ ರಚಿತಾ ರಾಮ್ ಸಿಗರೇಟ್ ಸೇದುವ ಫೋಟೋಗಳು ಸಿಕ್ಕಾಪಟ್ಟೆ ಸದ್ದು ಮಾಡಿದ್ದವು.. ಫೋಟೋಗಳನ್ನು‌ ನೋಡಿದ ಸಿನಿಮಾ ಪ್ರಿಯರು ರಚಿತಾ ಇಷ್ಟು ನ್ಯಾಚುರಲ್ ಆಗಿ ಕಾಣಿಸಿಕೊಂಡಿದ್ದಾರೆ.. ಅವರಿಗೆ ಅಭ್ಯಾಸ ಇದೆಯಾ ಎಂದು ಪ್ರಶ್ನಿಸಿದ್ದರು.. ಇದೀಗ ರಚಿತಾ ರಾಮ್ ಮಾದ್ಯಮದ ಸಂದರ್ಶನವೊಂದರಲ್ಲಿ ಆ ಕುರಿತು ಸೀಕ್ರೆಟ್ ರಿವೀಲ್‌‌ ಮಾಡಿದ್ದಾರೆ..

ರಚಿತಾ ರಾಮ್ ಸಿಗರೇಟ್ ಬಳಸಲು ಸ್ಪೂರ್ತಿಯೇ ಡಾಲಿ ಧನಂಜಯ್ ಅಂತೆ.. ಹೌದು ನಿಜ ಹೇಳಬೇಕೆಂದರೆ ನನಗೆ ಸಿಗರೇಟ್ ಅಭ್ಯಾಸವಿಲ್ಲ.. ನಾನು ಎಂದೂ ಸಹ ಬಳಸಿದವಳಲ್ಲ.. ಆದರೆ ಸಿನಿಮಾಗಾಗಿ ನಿಜವಾಗಿ ಬಳಸಲೇ ಬೇಕಾಯ್ತು.. ನಾಟಕೀಯವಾಗಿ ಅಭಿನಯಿಸಲು ಸಾಧ್ಯವಾಗಲಿಲ್ಲ.. ಪಾತ್ರ ಡಿಮ್ಯಾಂಡ್ ಮಾಡ್ತು.. ನಾಟಕೀಯವಾಗಿ ಮಾಡಿದ್ರೆ ಪಾತ್ರಕ್ಕೆ ಧಕ್ಕೆ ತರುವ ರೀತಿ ಆಗುತಿತ್ತು.. ನನಗೆ ಇದಕ್ಕೆ‌ ಸ್ಪೂರ್ತಿ ಡಾಲಿ ಧನಂಜಯ್.. ಈ ಬಗ್ಗೆ ಧನಂಜಯ್ ಗೂ ಕೂಡ ಹೇಳಿದ್ದೆ.. ನಿಮ್ಮ ಟಗರು ಡಾಲಿ ಪಾತ್ರ ಬಹಳಷ್ಟು ಪಾತ್ರಕ್ಕೆ.. ಬಹಳಷ್ಟು ಸನ್ನಿವೇಶಕ್ಕೆ ಸ್ಪೂರ್ತಿ.. ನನಗೂ ಕೂಡ ಅದೇ ರೀತಿ ನಿಮ್ಮ ಪಾತ್ರ ಸ್ಪೂರ್ತಿಯಾಗಿದೆ ಎಂದಿದ್ದೆ..‌ ಎಂದಿದ್ದಾರೆ..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •