ಗುಟ್ಟಾಗಿ ಮದುವೆ ಆದ್ರಾ ರಚಿತಾ ರಾಮ್! ನಟಿ ಮಾಂಗಲ್ಯ ಧರಿಸಿದ ಫೋಟೋ ನೋಡಿ ಬೆಚ್ಚಿಬಿದ್ದ ಜನತೆ.!

Cinema/ಸಿನಿಮಾ Home Kannada News/ಸುದ್ದಿಗಳು

ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ರಚಿತಾ ರಾಮ್ ಅಂದರೆ ಹುಡುಗರಿಗಷ್ಟೇ ಅಲ್ಲ, ಹೆಣ್ಮಕ್ಕಳಿಗೂ ಇಷ್ಟ. ಅದಕ್ಕೆ ಕಾರಣ ರಚಿತಾ ರಾಮ್ ಅವರ ಕ್ಯೂಟ್ ನಗು, ಅವರು ಮಕ್ಕಳಂತೆ ನಡೆದುಕೊಳ್ಳುವ ರೀತಿ. ರಚಿತಾ ರಾಮ್ ಅವರು ಕನ್ನಡ ಸಿನಿಮಾ ರಂಗದ ಬಹು ಬೇಡಿಕೆಯ ನಟಿ. ಸ್ಯಾಂಡಲ್ ವುಡ್ ನ ಬ್ಯೂಟಿಫುಲ್ ನಟಿಯಾಗಿರುವ ರಚಿತಾ ರಾಮ್ ಸೂಪರ್ ಸ್ಟಾರ್ ಗಳಾದ ಸುದೀಪ್, ದರ್ಶನ್, ಪುನೀತ್ ರಾಜ್ ಕುಮಾರ್, ಮುರಳಿ ಮುಂತಾದವರ ಜೊತೆ ನಟಿಸಿದ್ದಾರೆ. ಅಷ್ಟೇ ಅಲ್ಲ ಹೊಸ ಪ್ರತಿಭೆಗಳ ಜೊತೆಯೂ ತೆರೆ ಹಂಚಿಕೊಂಡಿದ್ದಾರೆ.

ಇದೀಗ ಅಜಯ್ ರಾವ್ ಜೊತೆಗಿನ ’ ರಚ್ಚು’ ಸಿನಿಮಾದಲ್ಲಿಯೂ ಕಾಣಿಸಿಕೊಂಡಿದ್ದಾರೆ. ರಮೇಶ್ ಅರವಿಂದ್ ಅವರ ೧೦೦ ಸಿನಿಮಾದಲ್ಲಿ ಹೊಸ ಲುಕ್ ನಲ್ಲಿ ಕಾಣಿಸಿಕೊಂಡ ರಚಿತಾ ಎಲ್ಲರಿಗೂ ಇಷ್ಟ ಆಗಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ನಂಬರ್ ವನ್ ಸ್ಥಾನದಲ್ಲಿರುವ ನಟಿ ರಚಿತಾ ರಾಮ್ ಇದೀಗ ಗುಟ್ಟಾಗಿ ಮದುವೆ ಆಗಿದ್ದಾರಾ ಅನ್ನುವ ಸುದ್ದಿ ಎಲ್ಲೆಡೆ ಹಬ್ಬಿದೆ. ಅದಕ್ಕೆ ಕಾರಣ ರಚಿತಾ ರಾಮ್ ಅವರು ಮಾಂಗಲ್ಯ ತೊಟ್ಟ ಒಂದು ಫೋಟೋ.

ಕಿತ್ತೀಚಿನ ಕನ್ನಡದ ಯಾವ ಸಿನಿಮಾಗಳಲ್ಲೂ ರಚಿತಾ ರಾಮ್ ಅವರ ಮಾಂಗಲ್ಯ ಧರಿಸಿರುವ ಈ ರೀತಿಯ ಶ್ಯಗಳು ಇಲ್ಲ. ಹೀಗಾಗಿಯೇ ರಚಿತಾ ರಾಮ್ ಅಭಿಮಾನಿಗಳು ಶಾಕ್ ಆಗಿದ್ದಾರೆ. ಆದರೆ ಆ ಫೊಟೋ ರಚಿತಾ ರಾಮ್ ಅವರು ತೆಲುಗಿನಲ್ಲಿ ನಟಿಸುತ್ತಿರುವ ಹೊಸ ಸಿನಿಮಾದ್ದು ಅನ್ನುವುದು ತಿಳಿದು ಬಂದಿದೆ. ತೆಲುಗಿನ ಯಾವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಅನ್ನುವ ಮಾಹಿತಿ ಮಾತ್ರ ಈ ವರೆಗೆ ಹೊರ ಬಿದ್ದಿಲ್ಲ, ಆದರೆ ಚಿತ್ರೀಕರಣದ ಸಂದರ್ಭದಲ್ಲಿ ಯಾರೋ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾರೆ.

ಯಾರೋ ಕಿಡಿಗೇಡಿಗಳು ಮಾಡಿರುವ ಈ ಕೆಲಸದಿಂದ ರಚಿತಾ ರಾಮ್ ಮದುವೆ ಆಗಿದ್ದಾರೆ ಅನ್ನುವ ಊಹಾ ಪೋಹಗಳು ಷ್ಟಿಯಾಗಿದೆ. ಕನ್ನಡ ಕಿರುತೆರೆಯ ಅರಸಿ ಧಾರವಾಹಿ ಮೂಲಕ ಬಣ್ಣ ಹಚ್ಚಿದ್ದ ರಚಿತಾ ರಾಮ್ , ಕನ್ನಡದ ಬುಲ್ ಬುಲ್ ಚಿತ್ರದಲ್ಲಿ ದರ್ಶನ್ ಜೊತೆ ಅಭಿನಯಿಸುವುದರ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಆ ನಂತರ ರಚಿತಾ ರಾಮ್ ಅವರು ಕನ್ನಡ ಸಿನಿಮಾ ರಂಗದ ನೆಚ್ಚಿನ ನಟಿಯಾಗಿ ಯಶಸ್ಸು ಗಲಿಸಿದ್ದಾರೆ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...