ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ಎಂದೇ ಖ್ಯಾತಿಯಾಗಿರುವ ರಚಿತಾ ರಾಮ್ ಸಿನಿ ರಂಗಕ್ಕೆ ಕಾಲಿಟ್ಟು 8 ವರ್ಷ ಕಳೆಯುತ್ತಿದೆ. ಸ್ಯಾಂಡಲ್ ವುಡ್ ಸ್ಟಾರ್ ಗಳಾದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಪವರ್ ಸ್ಟಾರ್ ಪುನೀತ್, ಗೋಲ್ಡನ್ ಸ್ಟಾರ್ ಗಣೇಶ್, ರೋರಿಂಗ್ ಸ್ಟಾರ್ ಶ್ರೀಮುರಳಿ ಸೇರಿದಂತೆ ಎಲ್ಲಾ ನಟರಿಗೂ ಹೀರೋಯಿನ್ ಆಗಿ ನಟಿಸಿ ಈಗ ತೆಲುಗು ಚಿತ್ರರಂಗಕ್ಕೂ ಎಂಟ್ರಿ ಕೊಡಲಿದ್ದಾರೆ. ನಿಜ ಜೀವನದಲ್ಲಿ ರಚಿತಾ ರಾಮ್ ಅವರ ಲೈಫ್ ಸ್ಟೈಲ್ ಹೇಗಿದೆ ಗೊತ್ತಾ? ತಿಳಿಯಲು ಮುಂದೆ ಓದಿ…

ರಚಿತಾ ರಾಮ್ ಅವರ ನಿಜವಾದ ಹೆಸರು ಬಿಂದ್ಯಾ ರಾಮ್. ಇವರ ನಿಕ್ ನೇಮ್ ರಚ್ಚು ಮತ್ತು ಡಿಂಪಲ್ ಕ್ವೀನ್. ವೃತ್ತಿಯಲ್ಲಿ ರಚಿತಾ ನಟಿ ಮತ್ತು ಮಾಡೆಲ್. ರಚಿತಾ ಮೊದಲ ಬಾರಿಗೆ ನಟಿಸಿದ್ದು ಅರಸಿ ಧಾರವಾಹಿಯಲ್ಲಿ, ಧಾರವಾಹಿಯಲ್ಲಿ ನಟಿಸುವಾಗ ದರ್ಶನ್ ಅವರ ಜೊತೆ ಬುಲ್ ಬುಲ್ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಮೊದಲ ಸಿನಿಮಾ ಹಿಟ್ ಆದ ನಂತರ ಹಲವಾರು ಸೂಪರ್ ಸಿನಿಮಾಗಳಲ್ಲಿ ನಟಿಸುವ ಅವಕಾಶ ರಚಿತಾ ಅವರಿಗೆ ಸಿಕ್ಕಿತು. ಬುಲ್ ಬುಲ್, ರನ್ನ, ಭರ್ಜರಿ, ರಥಾವರ, ಅಯೋಗ್ಯ ಮುಂತಾದವು ರಚಿತಾ ನಟಿಸಿದ ಸೂಪರ್ ಯೆಶಸ್ವಿ ಸಿನಿಮಾಗಳು.ರಚಿತಾ ರಾಮ್ ಹುಟ್ಟಿದ್ದು ಆಕ್ಟೊಬರ್ 3, 1992 ರಲ್ಲಿ. ಇವರು ಹುಟ್ಟಿದ್ದು ಬೆಳೆದಿದ್ದು ಎಲ್ಲವೂ ಬೆಂಗಳೂರಿನಲ್ಲಿ. ರಚಿತಾ ಅವರ ಹೈಟ್ 5.8ಅಡಿ ಮತ್ತು ತೂಕ 58 ಕೆಜಿ. ಇವರ ತಂದೆ ಕೆ.ಎಸ್.ರಾಮ್. ರಚಿತಾ ಸಹೋದರಿ ನಿತ್ಯಾ ರಾಮ್. ನಿತ್ಯಾ ಸಹ ಕಿರುತೆರೆಯಲ್ಲಿ ಬಹಳ ಜನಪ್ರಿಯತೆ ಇರುವ ನಟಿ. ರಚಿತಾ ಅವರದ್ದು ತುಲಾ ರಾಶಿ. ಇವರು ಓದಿದ್ದು, ಬೆಂಗಳೂರಿನ ಕ್ರೈಸ್ಟ್ ಸ್ಕೂಲ್ ನಲ್ಲಿ. ಪದವಿ ಓದಿರುವ ರಚಿತಾ ರಾಮ್ ಇನ್ನು ಸಿಂಗಲ್ ಆಗಿದ್ದಾರೆ. ರಚಿತಾ ಅವರ ಫೇವರೆಟ್ ನಟರು ಡಾ.ರಾಜ್ ಕುಮಾರ್ ಮತ್ತು ದರ್ಶನ್. ಫೇವರೆಟ್ ನಟಿ ಶ್ರೀದೇವಿ.ಇಷ್ಟದ ಊಟ ದೋಸೆ ಮತ್ತು ಬಿರಿಯಾನಿ. ಇಷ್ಟದ ಬಣ್ಣ ಕೆಂಪು. ರಚಿತಾ ಇಷ್ಟ ಪಡುವ ಸ್ಥಳ ದುಬೈ. ಇವರ ಹವ್ಯಾಸ ಟ್ರಾವೆಲ್ಲಿಂಗ್ ಮತ್ತು ಫೋಟೋಗ್ರಫಿ. ರಚಿತಾಗೆ ಎರಡು ಸಾರಿ ಸೈಮಾ ಪ್ರಶಸ್ತಿ ಬಂದಿದೆ. ಒಂದು ಸಿನಿಮಾಗೆ ರಚಿತಾ ಪಡೆಯುವ ಸಂಭಾವನೆ 50 ಲಕ್ಷ. ಇವರ ಒಟ್ಟು ಆಸ್ತಿ 15 ರಿಂದ 20 ಕೋಟಿ. ರಚಿತಾ ಅವರ ಬಳಿ ಫಾರ್ಚುನರ್ ಮತ್ತು Hyundai creta ಕಾರ್ ಇದೆ. ಭರತನಾಟ್ಯ ಕಲಿತಿರುವ ರಚಿತಾ ರಾಮ್, ಸಿನಿರಂಗಕ್ಕೆ ಬರುವ ಮೊದಲು 50ಕ್ಕೂ ಹೆಚ್ಚು ಕಡೆ ಪ್ರದರ್ಶನ ನೀಡಿದ್ದಾರೆ. ಇಲ್ಲಿಯವರೆಗೂ ರಚಿತಾ ಸಿನಿ ಕೆರಿಯರ್ ನಲ್ಲಿ ಆಗಿರುವ ಕಾಂಟ್ರವರ್ಸಿ ಎಂದರೆ ಐ ಲವ್ ಯೂ ಸಿನಿಮಾ ಹಾಡಿನಿಂದ.ಸದ್ಯಕ್ಕೆ ರಚಿತಾ ರಾಮ್ ಕನ್ನಡ ಚಿತ್ರರಂಗದ ನಂಬರ್ 1 ನಟಿ ಎಂದೇ ಹೇಳಬಹುದು. ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ಎಂದೇ ಖ್ಯಾತಿಯಾಗಿರುವ ರಚಿತಾ ರಾಮ್ ಸಿನಿ ರಂಗಕ್ಕೆ ಕಾಲಿಟ್ಟು 8 ವರ್ಷ ಕಳೆಯುತ್ತಿದೆ. ಸ್ಯಾಂಡಲ್ ವುಡ್ ಸ್ಟಾರ್ ಗಳಾದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಪವರ್ ಸ್ಟಾರ್ ಪುನೀತ್, ಗೋಲ್ಡನ್ ಸ್ಟಾರ್ ಗಣೇಶ್, ರೋರಿಂಗ್ ಸ್ಟಾರ್ ಶ್ರೀಮುರಳಿ ಸೇರಿದಂತೆ ಎಲ್ಲಾ ನಟರಿಗೂ ಹೀರೋಯಿನ್ ಆಗಿ ನಟಿಸಿ ಈಗ ತೆಲುಗು ಚಿತ್ರರಂಗಕ್ಕೂ ಎಂಟ್ರಿ ಕೊಡಲಿದ್ದಾರೆ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •