ಮನೆಯ ಮಹಾಲಕ್ಷ್ಮಿ ಅಂತ ಹೇಳುತ್ತಾರೆ ಹೆಣ್ಣುಮಕ್ಕಳನ್ನು ಹೌದು ಈ ಮಾತು ತುಂಬ ಸತ್ಯವಾದದ್ದು ಅದೇ ರೀತಿ ಮನೆಯಲ್ಲಿರುವ ಹೆಣ್ಣು ಮಕ್ಕಳು ಲಕ್ಷ್ಮೀ ಕಳೆಯನ್ನು ಹೊಂದಿರುತ್ತಾರೆ. ಯಾವ ಹೆಣ್ಣು ಮಕ್ಕಳು ಮನೆಯಲ್ಲಿ ಚುರುಕಾಗಿ ಇರುತ್ತಾರೆ ಅಂಥವರ ಮನೆಯಲ್ಲಿ ಲಕ್ಷ್ಮೀದೇವಿ ಸದಾಕಾಲ ಇರುತ್ತಾಳೆ ಎಂಬ ನಂಬಿಕೆಯಿದೆ ಅದೇ ಕಾರಣಕ್ಕಾಗಿ ಹಿರಿಯರು ಹೆಣ್ಣು ಮಕ್ಕಳಿಗೆ ಕೆಲವೊಂದು ಸಂಪ್ರದಾಯವನ್ನು ತಪ್ಪದೆ ಪಾಲಿಸುವುದಕ್ಕಾಗಿ ತಿಳಿಸುತ್ತಾರೆ. ಲಕ್ಷ್ಮೀ ಕಳೆಯುಳ್ಳ ಹೆಣ್ಣುಮಕ್ಕಳು ಮನೆಯಲ್ಲಿದ್ದರೆ ಆ ಮನೆಯಲ್ಲಿ ಎಂದಿಗೂ ಕೂಡ ದಾರಿದ್ರ್ಯ ಲಕ್ಷ್ಮಿ ನೆಲೆಸುವುದಿಲ್ಲ ದಾರಿದ್ರ್ಯ ಲಕ್ಷ್ಮಿಯಂತಹ ಮನೆಗೆ ಪ್ರವೇಶ ಮಾಡುವುದಿಲ್ಲ ಕೂಡ.

quality

ಲಕ್ಷ್ಮೀ ಕಳೆಯುಳ್ಳ ಹೆಣ್ಣುಮಕ್ಕಳು ಅಂದರೆ ಯಾರ ಮುಖ ಲಕ್ಷಣಗಳು ಹೇಗಿರುತ್ತದೆ ಅಂದರೆ, ಅಗಲವಾದ ಹಣೆ ದಪ್ಪನೆಯ ಕಪ್ಪನೆಯ ಹುಬ್ಬು ಮತ್ತು ಶುಕ್ರನ ಛಾಯೆಯುಳ್ಳ ಅಂದರೆ ಶುಕ್ರನ ಛಾಯೆ ಎಂದರೆ ಕೆಂಪು ಛಾಯೆವುಳ್ಳ ಮುಖವು ಉದ್ದನೆಯ ಮೂಗು ಇಂತಹ ಲಕ್ಷಣವುಳ್ಳ ಹೆಣ್ಣುಮಕ್ಕಳು ಮನೆಯಲ್ಲಿದ್ದರೆ ಆ ಮನೆಯಲ್ಲಿ ಸದಾಕಾಲ ಲಕ್ಷ್ಮೀ ದೇವಿಯು ನೆಲೆಸಿರುತ್ತಾಳೆ. ಯಾವ ಮನೆಯಲ್ಲಿ ಹೆಣ್ಣುಮಕ್ಕಳು ನಗುತ್ತಾ ಸುಖವಾಗಿ ಇರುತ್ತಾರೆ ಹಾಗೂ ಆ ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಹೆಚ್ಚು ಬೆಲೆಯನ್ನು ನೀಡುತ್ತಾರೆ ಹೆಚ್ಚು ಗರುವವನು ನೀಡುತ್ತಾರೆ ಅಂತಹ ಮನೆಗಳಲ್ಲಿ ಲಕ್ಷ್ಮಿದೇವಿ ನೆಲೆಸಿರುತ್ತಾಳೆ.

ಹಿರಿಯರೇ ಹೇಳಿರುವ ಹಾಗೆ ಮತ್ತು ಶಾಸ್ತ್ರಗಳಲ್ಲಿ ಉಲ್ಲೇಖ ಆಗಿರುವ ಹಾಗೆ ಯಾರ ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಗೌರವ ನೀಡುವುದಿಲ್ಲ ಅಂತಹ ಮನೆಯಲ್ಲಿ ದಾರಿದ್ರ್ಯ ಲಕ್ಷ್ಮಿ ನೆಲೆಸಿರುತ್ತಾಳೆ ಅಷ್ಟೇ ಅಲ್ಲ ಲಕ್ಷ್ಮೀದೇವಿಯು ಕೂಡ ಹೆಣ್ಣಿನ ಸ್ವರೂಪ ರಾಗಿರುತ್ತಾರೆ ಆದ್ದರಿಂದ ಮನೆಯಲ್ಲಿ ಲಕ್ಷ್ಮೀದೇವಿ ನೆಲೆಸಬೇಕೆಂದರೆ ಮನೆಯಲ್ಲಿರುವ ಹೆಣ್ಣು ಮಕ್ಕಳನ್ನು ಗೌರವಿಸಬೇಕು.

quality

ಹೆಣ್ಣು ಮಕ್ಕಳನ್ನು ಪೂಜನೀಯ ಭಾವದಲ್ಲಿ ಕಾಣಬೇಕು ಯಾವುದೇ ಕಾರಣಕ್ಕೂ ಹೆಣ್ಣು ಮಕ್ಕಳಿಗೆ ಕೆಟ್ಟ ಅವಾಚ್ಯ ಪದಗಳಿಂದ ಆಕೆಯನ್ನು ಕರೆಯಬಾರದು. ಈ ರೀತಿ ಯಾರೂ ಹೆಣ್ಣು ಮಕ್ಕಳಿಗೆ ಗೌರವವನ್ನು ನೀಡುತ್ತಾರೊ, ಅಂಥವರಿಗೆ ಖಂಡಿತವಾಗಿಯೂ ಲಕ್ಷ್ಮೀ ದೇವಿಯ ಅನುಗ್ರಹ ಆಗುತ್ತದೆ ಅಂತಹ ಮನೆಯಲ್ಲಿ ಲಕ್ಷ್ಮೀದೇವಿ ಸ್ಥಿರ ನಿವಾಸ ಗೊಳ್ಳುತ್ತಾಳೆ.

ಹೆಣ್ಣು ಮಕ್ಕಳು ಕೂಡ ಪ್ರತಿ ದಿವಸ ಪಾಲಿಸಬೇಕಾಗಿರುವ ಇಂತಹ ಪದ್ಧತಿಗಳು ಕೂಡ ಇರುತ್ತದೆ ಇದರಿಂದಾಗಿ ಲಕ್ಷ್ಮಿ ದೇವಿಯ ಅನುಗ್ರಹ ವನ್ನು ಪಡೆಯಬಹುದು ಯಾರ ಮನೆಯಲ್ಲಿ ಹೆಣ್ಣು ಮಕ್ಕಳು ಸೂರ್ಯ ಉದಯವಾದರು ಮಲಗಿರುತ್ತಾರೆ ಮತ್ತು ಬೆಳಿಗ್ಗೆ ಎದ್ದ ಕೂಡಲೇ ಮನೆಯ ಅಂಗಳವನ್ನು ಸ್ವಚ್ಛ ಮಾಡಿ ತುಳಸಿ ಗಿಡಕ್ಕೆ ಯಾರು ನೀರನ್ನು ಅರ್ಪಿಸುವುದಿಲ್ಲ ಇಂಥವರ ಮನೆಯಲ್ಲಿ ದಾರಿದ್ರ್ಯ ತುಂಬಿರುತ್ತದೆ.

ಹೆಣ್ಣು ಮಕ್ಕಳು ಯಾವುದೇ ಕಾರಣಕ್ಕೂ ಮನೆಯಲ್ಲಿ ಅದರಲ್ಲಿಯೂ ಸೂರ್ಯಾಸ್ತದ ಸಮಯದಲ್ಲಿ ಕೂದಲನ್ನು ಬಿಟ್ಟುಕೊಂಡು ಓಡಾಡಬಾರದು ಹಾಗೂ ಮಲಗುವ ಮುನ್ನ ಕೂಡ ಕೂದಲನ್ನು ಬಿಚ್ಚಿ ಮಲಗಬಾರದು ಇದೆಲ್ಲವೂ ರಾಕ್ಷಸ ಗುಣ ವಾಗಿರುವ ಕಾರಣ ತಪ್ಪದೆ ಹೆಣ್ಣುಮಕ್ಕಳು ಪ್ರತಿದಿವಸ ಅಂದವಾಗಿ ತಯಾರಾಗಿ ಹಣೆಗೆ ಕುಂಕುಮ ಕೈಗೆ ಬಳೆ ಹಾಗೂ ಕೇಶರಾಶಿಗೆ ಹೂಗಳನ್ನು ಮುಡಿದು ಮನೇಲಿ ಓಡಾಡುತ್ತಾರೆ ಅಂತಹ ಮನೆಯಲ್ಲಿ ಲಕ್ಷ್ಮೀ ಕಳೆ ಹೆಚ್ಚಿರುತ್ತದೆ ಅಂತಹ ಮನೆಗೆ ದೇವರ ಸಾನಿಧ್ಯ ಸದಾಕಾಲ ಇರುತ್ತದೆ. ಇಂತಹ ಲಕ್ಷಣವುಳ್ಳ ಹೆಣ್ಣುಮಕ್ಕಳನ್ನು ಒರೆಸುವುದರಿಂದ ಗಂಡನಿಗೂ ಹೆಚ್ಚಿನ ಯಶಸ್ಸು ಅವನ ಜೀವನದಲ್ಲಿ ಲಭಿಸುತ್ತದೆ ಧನ್ಯವಾದ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •