ಅಶ್ವಗಂಧದಲ್ಲಿ ಹಲವಾರು ಆರೋಗ್ಯಕರ ಗುಣಗಳ ಜೊತೆಗೇ ಸೌಂದರ್ಯವರ್ಧಕ ಗುಣಗಳೂ ಇವೆ. ಯಾವುದಕ್ಕೆಲ್ಲಾ ಉತ್ತಮ ಎಂಬುದನ್ನು ಲೇಖನದಲ್ಲಿ ವಿವರಿಸಲಾಗಿದೆ.

ಅಶ್ವಗಂಧ ಒಂದು ಅದ್ಭುತ ಮೂಲಿಕೆಯಾಗಿದ್ದು ಭಾರತದ ಜಿನ್ಸೆಂಗ್ ಎಂಬ ಅನ್ವರ್ಥನಾಮವನ್ನೂ ಪಡೆದಿದೆ. ಈ ಅದ್ಭುತ ಮೂಲಿಕೆಗೆ ಕೊಂಚ ಭಿನ್ನವಾದ ಹೆಸರು ಬರಲು ಇದರ ವಾಸನೆಯೇ ಕಾರಣ. ಇದರ ವಾಸನೆ ಕುದುರೆಯ ಮೂತ್ರದ ವಾಸನೆಯನ್ನೇ ಹೋಲುವ ಕಾರಣ ಆಯುರ್ವೇದ ಇದಕ್ಕೆ ಅಶ್ವದ ಗಂಧ ಅಥವಾ ಅಶ್ವಗಂಧ ಎಂಬ ಹೆಸರನ್ನು ನೀಡಿದೆ. ಈ ಮೂಲಿಕೆ ಆರೋಗ್ಯವನ್ನು ವೃದ್ದಿಸುವ ಜೊತೆಗೇ ತಾರುಣ್ಯವನ್ನೂ ಕಾಪಾಡುತ್ತದೆ. ಇಂದಿನ ಲೇಖನದಲ್ಲಿ ಅಶ್ವಗಂಧ ಯಾವುದಕ್ಕೆಲ್ಲಾ ಉತ್ತಮ ಮದ್ದಿನ ರೂಪದಲ್ಲಿ ಪ್ರಯೋಜನಕಾರಿಯಾಗಿದೆ ಎಂಬುದನ್ನು ವಿವರಿಸಲಾಗಿದೆ.
ಕಾಮೋದ್ದೀಪಕ ಗುಣವುಳ್ಳ ಅಶ್ವಗಂಧದ ಪುಡಿಯನ್ನು ಲೈಂ *ಗಿಕ ದೌರ್ಬಲ್ಯ ನಿವಾರಿಸುವ ಎಲ್ಲ ಔಷಧಿಗಳಲ್ಲಿ ಬಳಸುತ್ತಾರೆ. ಅಶ್ವಗಂಧ ಕಫ ನಿವಾರಕ, ಶ್ವೇತ ಕುಷ್ಠ ನಿವಾರಕ, ಕ್ಷಯರೋಗ ನಿವಾರಕ ಮತ್ತು ವಾಯು ವಿಕಾರಗಳನ್ನು ಗುಣಪಡಿಸುವ ಔಷಧಿಯಾಗಿದೆ. ಧಾ ತು ದೌರ್ಬಲ್ಯ, ಯೋ *ನಿ ಶೂಲ, ಕೈಕಾಲುಗಳಲ್ಲಿನ ಸೆಳೆತ, ಆಮವಾತ, ಜ್ವರ, ದಾಹ, ಕೀಲುನೋವು, ಶ್ವಾಸರೋಗ, ಗರ್ಭಾ *ಶಯ ದೌರ್ಬಲ್ಯ, ತಲೆನೋವು, ನಿದ್ರಾಹೀನತೆ, ಆಯಾಸ, ವೃದ್ಧಾಪ್ಯದ ದೌರ್ಬಲ್ಯ,
ನೋವು ಮತ್ತು ಬಾವುಗಳಿಗೆ ದಿವ್ಯಔಷಧಿ ಈ ಅಶ್ವಗಂಧ | KANNADIGA WORLD
ರೋಗ ಗುಣಮುಖವಾದ ನಂತರ ಬರುವ ದೌ *ರ್ಬಲ್ಯ ಇತ್ಯಾದಿಗಳನ್ನು ಪರಿಣಾಮಕಾರಿಯಾಗಿ ಗುಣಪಡಿಸುತ್ತದೆ ಎಂದು ಆಯುರ್ವೇದ ತಿಳಿಸುತ್ತದೆ. ಅಶ್ವಗಂಧ ನಮಗೆ ಪುಡಿ ಮತ್ತು ಬೇರು ಎರಡು ರೂಪದಲ್ಲೂ ದೊರೆಯುತ್ತದೆ. ಬೇರಿನ ರೂಪದ ಅಶ್ವಗಂಧಕ್ಕೆ ಬೆಲೆ ಕಡಿಮೆ. ಅದನ್ನು ಮನೆಯಲ್ಲಿ ಕುಟ್ಟಿ ಪುಡಿ ಮಾಡಿ ಬಟ್ಟೆಯಿಂದ ಸೋಸಿದಾಗ ನುಣುಪಾದ ಪುಡಿ ದೊರಕುತ್ತದೆ. ಅದನ್ನು ಒಂದು ಡಬ್ಬಿಯಲ್ಲಿ ಹಾಕಿಟ್ಟುಕೊಂಡು ನಿಯಮಿತವಾಗಿ ಸೇವಿಸಬೇಕು.

ಸೇವಿಸುವ ವಿಧಾನ: ಅಶ್ವಗಂಧದ ಪುಡಿಯನ್ನು ಹಾಲು ಮತ್ತು ಜೇನುತುಪ್ಪದೊಂದಿಗೆ ಎರಡು ವಿಧದಲ್ಲಿ ಸೇವಿಸಬಹುದು. ಹಾಲಿನೊಂದಿಗೆ ಸೇವಿಸಬೇಕಾದರೆ ಹಾಲಿಗೆ ಕಲ್ಲು ಸಕ್ಕರೆಯನ್ನು ಬೆರೆಸಿ ಮುಂಜಾನೆ ಹಾಗೂ ರಾತ್ರಿ ಒಂದೊಂದು ಚಮಚೆಯನ್ನು ಸೇವಿಸಬೇಕು. ಅಶ್ವಗಂಧ, ಜಟಾಮಾಸಿ, ಬ್ರಾಹ್ಮಿ ಮೂರನ್ನೂ ಸಮಪ್ರಮಾಣದಲ್ಲಿ ಮಿಶ್ರ ಮಾಡಿ, ಒಂದರಿಂದ ಮೂರು ಗ್ರಾಂವರೆಗೆ ಜೇನುತುಪ್ಪದೊಂದಿಗೆ ಸೇವಿಸಿದರೆ ಅಧಿಕ ರಕ್ತದೊತ್ತಡ ಗುಣವಾಗುತ್ತದೆ. ಅಶ್ವಗಂಧದಿಂದ ಹಲವು ಔಷಧಗಳನ್ನು ತಯಾರಿಸುತ್ತಾರೆ. ಅಶ್ವಗಂಧಾರಿಷ್ಟಪಾಕ, ಅಶ್ವಗಂಧಾರಿಷ್ಟ ಘೃತ, ಅಶ್ವಗಂಧಾ ಚೂರ್ಣ, ಕಾ *ಮೇಶ್ವರ ಪಾಕ ಇತ್ಯಾದಿ. ಅಶ್ವಗಂಧ ಚೂರ್ಣಕ್ಕೆ ಬದಲಾಗಿ ಈ ಸಿದ್ಧ ಔಷಧಿಗಳನ್ನು ಕೂಡ ಸೇವಿಸಬಹುದು.




ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •