ಸಾಮಾನ್ಯವಾಗಿ ಪರ್ಸ್ ಗಳನ್ನು ಎಲ್ಲರೂ ಬಳಸುತ್ತಾರೆ. ತಮ್ಮ ಜೇಬಿನಲ್ಲಿ ಪರ್ಸ್ ಗಳನ್ನು ಇಟ್ಟುಕೊಳ್ಳುವ ಹವ್ಯಾಸ ಎಲ್ಲರಿಗೂ ಇರುತ್ತದೆ. ಆದರೆ ಪರ್ಸ್ ನಲ್ಲಿ ಹಣದ ಜೊತೆ ಇನ್ನು ಅನೇಕ ವಸ್ತುಗಳನ್ನು ಕೂಡಾ ತುರುಕಿ ಇಟ್ಟುಕೊಳ್ಳುವ ಹವ್ಯಾಸವೂ ಅನೇಕರಲ್ಲಿದೆ. ಆದರೆ ಇದು ಸರಿಯಲ್ಲ. ವಾಸ್ತು ಶಾಸ್ತ್ರದ ಪ್ರಕಾರ ಪರ್ಸ್ ನಲ್ಲಿ ಹೀಗೆ ಇದ್ದಬದ್ದ ವಸ್ತುಗಳನ್ನು ಇಡುವುದು ಅಶುಭ ಫಲವನ್ನು ನೀಡುತ್ತದೆ. ಹಣದ ನಷ್ಟದಿಂದ ಹಿಡಿದು ಇತರ ಸಮಸ್ಯೆಗಳಿಗೂ ಇದು ಕಾರಣವಾಗಬಹುದು. ಹಾಗಿದ್ದರೆ ಅಂಥಹ ಯಾವ ವಸ್ತುಗಳನ್ನು ಪರ್ಸ್ ನಲ್ಲಿಡಬಾರದು ಎಂಬ ಮಾಹಿತಿ ಇಲ್ಲಿದೆ..

ಹಳೆಯ ಚೀಟಿಗಳು:
ಕೆಲವರಿಗೆ ಸಿಕ್ಕ ಸಿಕ್ಕ ಚಿಟಿಗಳನ್ನು ಪರ್ಸ್ ನಲ್ಲಿಡುವ ಅಭ್ಯಾಸವಿರುತ್ತದೆ. ಉದಾಹರಣೆಗೆ ಬಿಲ್ ಗಳಾಗಿರಬಹುದು. ಎಟಿಎಂ  ಸ್ಲಿಪ್ ಗಳಾಗಿರಬಹುದು ಹೀಗೆ ಯಾವ ಚೀಟಿ ಸಿಕ್ಕರೂ ಅದನ್ನು ಪರ್ಸ್ ನೊಳಗೆ ತುರುಕಿ ಬಿಡುತ್ತಾರೆ. ಆದರೆ ವಾಸ್ತು ಪ್ರಕಾರ,  ಹೀಗೆ ಮಾಡಬಾರದು. ಈ ರೀತಿ ಪರ್ಸ್ ನಲ್ಲಿ ಕಸ ರಾಶಿಯಿದ್ದರೆ ಹಣ ಉಳಿಯುವುದಿಲ್ಲ. ಲಕ್ಷ್ಮೀ ಯಾವತ್ತೂ ಸ್ವಚ್ಛತೆಯನ್ನು ಇಷ್ಟಪಡುವವಳು. ಲಕ್ಷ್ಮೀ ಇರಬೇಕಾದ ಸ್ಥಳದಲ್ಲಿ ಕಸವೇ ಇದ್ದರೆ ಖಂಡಿತವಾಗಿಯೂ ಅಲ್ಲಿ ಹಣ ಲಕ್ಷ್ಮೀ ಉಳಿಯುವುದಿಲ್ಲ. ಹಾಗಾಗಿ ಪರ್ಸ್ ನಲ್ಲಿ ಅನುಪಯುಕ್ತ ವಸ್ತುಗಳನ್ನು ಇಡಬೇಡಿ.

ಹರಿದ ನೋಟುಗಳನ್ನು ಇಡಬೇಡಿ :
ವಾಸ್ತು ಪ್ರಕಾರ, ಪರ್ಸ್‌ನಲ್ಲಿರುವ ನೋಟುಗಳನ್ನು ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಹರಿದ ನೊಟುಗಳನ್ನು ನಿಮ್ಮ ಪರ್ಸ್‌ನಲ್ಲಿ ಇಡಬೇಡಿ. ಹರಿದ ನೋಟುಗಳು ನೆಗೆಟಿವ್ ಎನರ್ಜಿಯನ್ನು ಹೆಚ್ಚಿಸುತ್ತದೆ.

ದೇವರ ಚಿತ್ರಗಳನ್ನು ಇಡಬೇಡಿ :
ಹೆಚ್ಚಿನವರಿಗೆ ಪರ್ಸ್ ನಲ್ಲಿ ದೇವರ ಫೋಟೋಗಳನ್ನು ಇಟ್ಟುಕೊಳ್ಳುವ ಅಭ್ಯಾಸವಿರುತ್ತದೆ. ನಿಮ್ಮ ಪರ್ಸ್ ನಲ್ಲಿಯೂ ದೇವರ ಫೋಟೋ ಇಟ್ಟುಕೊಂಡಿದ್ದರೆ ಈಗಲೇ ತೆಗೆದುಬಿಡಿ. ವಾಸ್ತು ನಿಯಮಗಳ ಪ್ರಕಾರ, ದೇವರ ಫೋಟೋಗಳನ್ನು ಪರ್ಸ್‌ನಲ್ಲಿ ಇಡಬಾರದು. ಆದರೆ ನೆನಪಿರಲಿ ದೇವರ ಯಂತ್ರದಂತಹ ಸಾಧನಗಳನ್ನು ಪರ್ಸ್ ನಲ್ಲಿ ಇಟ್ಟುಕೊಳ್ಳಬಹುದು.

ಇಂಥಹ ಫೋಟೋಗಳು ಕೂಡಾ ಪರ್ಸ್ ನಲ್ಲಿ ಬೇಡ :
ಪ್ರೀತಿ ಪಾತ್ರರು ಸತ್ತರೆ ಅಂಥವರ ಫೋಟೋವನ್ನು ಪರ್ಸ್ ನಲ್ಲಿಡುವ ಅಭ್ಯಾಸವೂ ಕೆಲವರಿಗೆ ಇರುತ್ತದೆ. ಆದರೆ ಹೀಗೆ ಮಾಡುವುದು ವಾಸ್ತು ಪ್ರಕಾರ ತಪ್ಪು. ಪರ್ಸ್ ಅನ್ನು ಲಕ್ಷ್ಮಿ ದೇವಿಯ ವಾಸಸ್ಥಾನವೆಂದು ಪರಿಗಣಿಸಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ಸತ್ತ ವ್ಯಕ್ತಿಯ ಚಿತ್ರವನ್ನು ಪರ್ಸ್‌ನಲ್ಲಿ ಇಡುವುದು ಅಶುಭ. ಆದ್ದರಿಂದ ಸತ್ತ ವ್ಯಕ್ತಿಯ ಫೋಟೋ ನಿಮ್ಮ ಪರ್ಸ್‌ನಲ್ಲಿ ಇಟ್ಟುಕೊಂಡಿದ್ದರೆ, ಅದನ್ನು ತಕ್ಷಣ ತೆಗೆದು ಬಿಡಿ.

ಸಾಲದ ಚಿಟಿಯನ್ನು ಕೂಡಾ ಇರಿಸಬೇಡಿ :
ನೀವು ಕ್ರೆಡಿಟ್ ಸ್ಲಿಪ್ ಅಥವಾ ಸಾಲದ ರಶೀದಿಯನ್ನು ಪರ್ಸ್‌ನಲ್ಲಿ ಇಟ್ಟುಕೊಂಡಿದ್ದರೆ, ಕೂಡಲೇ ತೆಗೆದು ಬಿಡಿ. ವಾಸ್ತು ಶಾಸ್ತ್ರದ ಪ್ರಕಾರ, ಸಾಲ ಪಡೆದಿರುವ ಚೀಟಿಗಳನ್ನು ಯಾವತ್ತೂ ಪರ್ಸ್ ನಲ್ಲಿಡಬಾರದು. ಇದು ಕೂಡಾ ಅಶುಭ ಫಲವನ್ನು ಸೂಚಿಸುತ್ತದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •