ಈಗಿನ ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಎಷ್ಟಿದೆ ಅನ್ನುವುದರ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ಇದೆ ಎಂದು ಹೇಳಬಹುದು, ಹೌದು ಚಿನ್ನದ ಬೆಲೆ ಗಗನಕ್ಕೆ ಏರಿದ್ದು ಬಡವರ ಪಾಲಿಗೆ ಚಿನ್ನ ಅನ್ನುವುದು ಕನಸಿನ ವಸ್ತುವಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಚಿನ್ನದ ಬೆಲೆ ಎಂದೂ ಕಾಣದ ರೀತಿಯಲ್ಲಿ ಏರಿಕೆಯನ್ನ ಕಂಡಿದ್ದು ಚಿನ್ನವನ್ನ ಕೊಂಡುಕೊಳ್ಳಲು ಜನರು ಹಿಂದೆ ಮುಂದೆ ನೋಡುತ್ತಿದ್ದಾರೆ ಎಂದು ಹೇಳಬಹುದು. ಇನ್ನು ದೀಪಾವಳಿಯ ಸಮಯದಲ್ಲಿ ಚಿನ್ನದ ಬೆಲೆ ಕಡಿಮೆ ಆಗುತ್ತದೆ ಎಂದು ಜನರು ಆಸೆಯನ್ನ ಇಟ್ಟುಕೊಂಡಿದ್ದರು, ಆದರೆ ಈಗ ಆಗುತ್ತಿರುವ ಬೆಳವಣಿಗೆಯನ್ನ ನೋಡಿದರೆ ಚಿನ್ನದ ಬೆಲೆ ಕಡೀ ಆಗುವ ಯಾವ ಲಕ್ಷಣಗಳು ಕಾಣುತ್ತಿಲ್ಲ ಎಂದು ಹೇಳಬಹುದು.
ಇನ್ನು ಈಗ ದೇಶದ ದೊಡ್ಡ ಕಂಪನಿಗಳಲ್ಲಿ ಒಂದಾದ BharatPe ನೂತನ ಯೋಜನೆಯನ್ನ ಜಾರಿಗೆ ತಂದಿದ್ದು ಈ ಯೋಜನೆಯ ಮೂಲಕ ದೇಶದ ಜನರಿಗೆ ದೀಪಾವಳಿ ಹಬ್ಬದ ದೊಡ್ಡ ಉಡುಗೊರೆಯನ್ನ ನೀಡಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು BharatPe ಮೂಲಕ ನೀವು ಚಿನ್ನವನ್ನ ಒಂದು ರೂಪಾಯಿಗೆ ಕೂಡ ಖರೀದಿ ಮಾಡಬಹುದಾಗಿದೆ. ಹಾಗಾದರೆ ಈ ಯೋಜನೆ ಯಾವುದು ಮತ್ತು ಇಲ್ಲಿ ಚಿನ್ನವನ್ನ ಹೇಗೆ ಖರೀದಿ ಮಾಡುವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.
ಹೌದು ಹಬ್ಬದ ಋತುವಿನಲ್ಲಿ ಚಿನ್ನವನ್ನ ಖರೀದಿ ಮಾಡಬೇಕು ಅಂದುಕೊಂಡವರಿಗೆ BharatPe ಸುವರ್ಣಾವಕಾಶವನ್ನ ನೀಡಿದೆ ಎಂದು ಹೇಳಿದರೆ ತಪ್ಪಾಗಲ್ಲ. ಭಾರತ ದೇಶದ ಅತೀ ದೊಡ್ಡ ಮರ್ಚೆಂಟ್ ಕಂಪನಿಯಾಗಿರುವ BharatPe ತನ್ನ ಫ್ಲಾಟ್ ಫಾರ್ಮ್ ನಲ್ಲಿ ಡಿಜಿಟಲ್ ಗೋಲ್ಡ್ ಬಿಡುಗಡೆ ಮಾಡಿದೆ. ಇನ್ನು BharatPe ಗೋಲ್ಡ್ ಸೇಫ್ ಸಹಯೋಗದೊಂದಿದೆ ಈ ಸೇವೆಯನ್ನ ಆರಂಭ ಮಾಡಲು ತೀರ್ಮಾನವನ್ನ ಮಾಡಿದೆ. ಇನ್ನು ಗ್ರಾಹಕರು 24 ಕ್ಯಾರೆಟ್ ನ ಭೌತಿಕ ಚಿನ್ನವನ್ನ ಖರೀದಿ ಮಾಡಲು ಮತ್ತು ಮಾರಾಟ ಮಾಡಲು ಈ ಡಿಜಿಟಲ್ ಪ್ಲಾಟ್ಫಾರ್ಮ್ ಸೇವೆಯನ್ನ ಜಾರಿಗೆ ತರಲಾಗಿದೆ.
ಇನ್ನು ಭಾರತಪೇ ಮೂಲಕ 24 ಕ್ಯಾರೆಟ್ ನ ಚಿನ್ನವನ್ನ ವ್ಯಾಪಾರಿಗಳು ಭಾರತಪೇ ಅಪ್ಲಿಕೇಶನ್ ಮೂಲಕ ಯಾವ ಸಮಯದಲ್ಲಿ ಎಲ್ಲಿ ಬೇಕಾದರೂ ಖರೀದಿ ಮಾಡಬಹುದು ಮತ್ತು ಮಾರಾಟ ಮಾಡಬಹುದಾಗಿದೆ. ಇನ್ನು BharatPe ಮೂಲಕ ರೂಪಾಯಿ ಮತ್ತು ಗ್ರಾಂ ಪ್ರಕಾರ ಚಿನ್ನವನ್ನ ಮಾರಾಟ ಮಾಡಬಹುದು ಮತ್ತು ಖರೀದಿ ಮಾಡಬಹುದಾಗಿದೆ. ಇನ್ನು ಈ ಸೇವೆಯ ಇನ್ನೊಂದು ವಿಶೇಷ ಏನು ಅಂದರೆ ಕೇವಲ ಒಂದು ರೂಪಾಯಿಯಲ್ಲಿ ಕೂಡ ಚಿನ್ನವನ್ನ ನಾವು ಖರೀದಿ ಮಾಡಬಹುದಾಗಿದೆ. ಇನ್ನು ಚಿನ್ನವನ್ನ ಖರೀದಿ ಮಾಡುವಾಗ ಹಣವನ್ನ BharatPe ಅಥವಾ UPI ಮೂಲಕ ಪಾವತಿ ಮಾಡಬಹುದು. ಇನ್ನು ದೀಪಾವಳಿಯ ವರೆಗೆ ಸುಮಾರು 60 ಕೆಜಿ ಚಿನ್ನವನ್ನ ಮಾರಾಟ ಮಾಡುವ ಗುರಿಯನ್ನ BharatPe ಹೊಂದಿದೆ.
ಇನ್ನು ಇದರ ಜೊತೆಗೆ ಚಿನ್ನ ಖರೀದಿಗೆ ಸಂಬಂಧಿಸಿದಂತೆ ವ್ಯಾಪಾರಿಗಳ ಹಿತಾಸಕ್ತಿಗಳನ್ನು ಕಾಪಾಡಲು ಸೇಫ್ ಗೋಲ್ಡ್ ಐಡಿಬಿಐ ಟ್ರಸ್ಟೀಶಿಪ್ ಸೇವೆಗಳನ್ನು ನೇಮಿಸಿದೆ. ಖರೀದಿಸಿದ ಚಿನ್ನವನ್ನು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 100% ವಿಮೆ ಮಾಡಿದ ಲಾಕರ್ಗಳಲ್ಲಿ ಸೇಫ್ ಗೋಲ್ಡ್ ನೊಂದಿಗೆ ಸುರಕ್ಷಿತವಾಗಿ ಸಂಗ್ರಹಿಸಲಾಗುತ್ತದೆ ಎಂದು ಕಂಪನಿ ತಿಳಿಸಿದೆ. ಏನೇ ಆಗಲಿ ಇದು ಚಿನ್ನವನ್ನ ಖರೀದಿ ಮಾಡಲು ಸುವರ್ಣಾವಕಾಶ ಎಂದು ಹೇಳಿದರೆ ತಪ್ಪಾಗಲ್ಲ, ಸ್ನೇಹಿತರೆ ಈ ಮಾಹಿತಿಯನ್ನ ಪತಿಯೊಬ್ಬ ಚಿನ್ನ ಪ್ರಿಯರಿಗೆ ತಲುಪಿಸಿ.