ಜಮೀನು ಖರೀದಿಸಲು ಸರಕಾರದಿಂದ 20 ಲಕ್ಷ ರೂಪಾಯಿ ಸಹಾಯಧನ.

Home Kannada News/ಸುದ್ದಿಗಳು Ration Cards/ರೇಷನ್ ಕಾರ್ಡ್(ಪಡಿತರ ಚೀಟಿ) ಸರ್ಕಾರೀ ಉಚಿತ ಯೋಜನೆಗಳು

ಅಂಬೇಡ್ಕರ್ ಅಭಿವೃದ್ಧಿ ನಿಗಮ, ಆದಿ ಜಾಂಬವ ಅಭಿವೃದ್ಧಿ ನಿಗಮ, ಭೋವಿ ಅಭಿವೃದ್ಧಿ ನಿಗಮ, ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮ ಮತ್ತು ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವತಿಯಿಂದ ಭೂ ಒಡೆತನ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಮಹಿಳಾ ಫಲಾಪೇಕ್ಷಿಗಳಿಗೆ ಭೂಮಿ ಖರೀದಿಸಿ ಕೊಡಲಾಗುತ್ತದೆ. ಆಸಕ್ತರು ಜಾತಿ ಮತ್ತು ಆದಾಯ ಪ್ರಮಾಣಪತ್ರ, ಭೂರಹಿತ ಕೃಷಿ ಕಾರ್ಮಿಕರ ಪ್ರಮಾಣ ಪತ್ರ, ಆಧಾರ್‌ ಕಾರ್ಡ್, ಪಡಿತರ ಚೀಟಿ ಮತ್ತು ಚುನಾವಣಾ ಗುರುತಿನ ಚೀಟಿಯ ಜೆರಾಕ್ಸ್‌ ಪ್ರತಿಯೊಂದಿಗೆ ನಿಗಮದ ಜಿಲ್ಲಾ ಕಚೇರಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಅರ್ಜಿ ಸಲ್ಲಿಸಬಹುದು.

ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರಿದ ಆಸಕ್ತ ಭೂ ಮಾಲಿಕರು ಜಿಲ್ಲಾ ಅನುಷ್ಠಾನ ಸಮಿತಿಯು ನಿಗದಿಪಡಿಸಿದ ದರಕ್ಕೆ ಜಮೀನು ಮಾರಾಟ ಮಾಡಲು ಇಚ್ಛಿಸಿದರೆ ಅರ್ಜಿ ಸಲ್ಲಿಸಬಹುದು. ಅರ್ಜಿಯ ಜತೆಗೆ ಜಾತಿ ಪ್ರಮಾಣಪತ್ರ, ಭೂ ಮಾರಾಟ ಮಾಲು ಮುಚ್ಚಳಿಕೆ ಪ್ರಮಾಣಪತ್ರ, ಭೂ ಮಾಲೀಕರ ವಂಶಾವಳಿ, ಕುಟುಂಬ ಸದಸ್ಯರ ನಿರಾಕ್ಷೇಪಣಾ ಪತ್ರ, ಜಮೀನಿನ ಇತ್ತೀಚಿನ ಪಹಣಿ ಮತ್ತು ಹಕ್ಕು ಬದಲಾವಣೆ ಪ್ರತಿ, 13 ವರ್ಷಗಳ ಇ.ಸಿ ಪ್ರತಿಯನ್ನು ಕೊಡಬೇಕು. ಹೆಚ್ಚಿನ ಮಾಹಿತಿಗೆ 08152 -243561 ದೂರವಾಣಿ ಸಂಖ್ಯೆ ಸಂಪರ್ಕಿಸಬಹುದು.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...