ನಮ್ಮ ಕರುನಾಡ ಪ್ರೀತಿಯ ಅಪ್ಪು, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇನ್ನು ನೆನಪು ಮಾತ್ರ. ನೆನ್ನೆ ಅಪ್ಪು ಪುನೀತ್ ರಾಜಕುಮಾರ್ ಅವರು ಇಹಲೋಕ ತ್ಯಜಿಸಿದ್ದಾರೆ. ಮನೆಯಲ್ಲಿ ಜಿಮ್ ನಲ್ಲಿ ವರ್ಕೌಟ್ ಮಾಡುವಾಗ ಎದೆ ನೋವು ಕಾಣಿಸಿಕೊಂಡು, ಹೀಗೆ ಆಗಿದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಇನ್ನೂ ನಮ್ಮ ಪುನೀತ್ ರಾಜಕುಮಾರ್ ಅವರನ್ನು ನೋಡಲು ಇವತ್ತು ಲಕ್ಷಾಂತರ ಜನ ಅಭಿಮಾನಿಗಳು ಕಂಠೀರವ ಸ್ಟೇಡಿಯಂ ಗೆ ಬರುತಿದ್ದಾರೆ.

ಲಕ್ಷಾಂತರ ಜನ ಅಭಿಮಾನಿಗಳ ಜೊತೆ, ಸಾಕಷ್ಟು ತಾರೆಯರು, ಸಿನಿಮಾ ಕಲಾವಿದರು, ರಾಜಕಾರಣಿಗಳು ಕೂಡ ಬಂದು ಅಪ್ಪು ಅವರನ್ನು ಕೊನೆಯದಾಯಿ ನೋಡುತ್ತಿದ್ದಾರೆ. ತಾರೆಯರಾದ ಯಶ್, ದರ್ಶನ್, ಅಭಿಷೇಕ್ ಅಂಬರೀಷ್, ಸುಧಾರಾಣಿ, ಉಮಾಶ್ರೀ, ಶ್ರುತಿ, ರಾಮ್ ಕುಮಾರ್ ಸೇರಿದಂತೆ ಹಲವಾರು ನಟರು ಅಪ್ಪು ಅವರನ್ನು ನೋಡಲು ಕಂಠೀರವ ಸ್ಟೇಡಿಯಂ ನಲ್ಲಿ ಇದ್ದಾರೆ. ಇನ್ನೂ ಪುನೀತ್ ರಾಜಕುಮಾರ್ ಅವರ ಬಗ್ಗೆ, ಭಾರತೀಯ ಚಿತ್ರರಂಗದ ಗಣ್ಯರು ಏನೆಲ್ಲಾ ಹೇಳಿದ್ದಾರೆ ಗೊತ್ತಾ? ಈ ಕೆಳಗಿನ ವಿಡಿಯೋ ನೋಡಿ

Puneeth Rajkumar: ಪತ್ನಿ ಅಶ್ವಿನಿ ಜೊತೆ ಪುನೀತ್ ರಾಜ್ ಕುಮಾರ್ .. ಅಪರೂಪದ ಚಿತ್ರಗಳು

ದೇಶ ಕಂಡ ಮಹಾನ್ ನಟರಲ್ಲಿ ಒಬ್ಬರು ಡಾ.ರಾಜ್ ಕುಮಾರ್. ರಾಜ್ ಕುಮಾರ್ ಅವರ ಸಾಧನೆ ಬಗ್ಗೆ ಹೆಚ್ಚಾಗಿ ಮಾತನಾಡುವ ಹಾಗಿಲ್ಲ. ಡಾ.ರಾಜ್ ಕುಮಾರ್ ಅವರ ಮೂರು ಗಂಡು ಮಕ್ಕಳು ಕೂಡ ತಂದೆಯ ಹಾಗೆ ಸಿನಿರಂಗದಲ್ಲಿ ಸಾಧನೆ ಮಾಡುತ್ತಿದ್ದಾರೆ. ಶಿವ ರಾಜ್ ಕುಮಾರ್ ಅವರು ಸೆಂಚುರಿ ಸ್ಟಾರ್ ಆದರೆ, ರಾಘವೇಂದ್ರ ರಾಜ್ ಕುಮಾರ್ ಅವರು ನಟನೆಯ ಜೊತೆ ನಿರ್ಮಾಣ ಕೂಡ ಮಾಡುತ್ತಾರೆ.

ಪುನೀತ್ ರಾಜ್ ಕುಮಾರ್ ಅವರು ಪವರ್ ಸ್ಟಾರ್ ಎನಿಸಿಕೊಂಡು ಯೂತ್ ಐಕಾನ್ ಆಗಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿ ಬಳಗ ಹೇಗಿದೆ ಎಂಬುದು ನಮಗೆಲ್ಲರಿಗೂ ಗೊತ್ತು. ತಂದೆ ತಾಯಿಗೆ ಮುದ್ದಿನ ಮಗ ಅಪ್ಪು. ಸರಳತೆ ಮತ್ತು ಸಹಾಯ ಮಾಡುವುದರಲ್ಲಿ ಅಪ್ಪು ಹೆಸರುವಾಸಿಯಾಗಿದ್ದಾರೆ. ಇನ್ನು ಅಪ್ಪು ಅವರು ನಟಿಸುವ ಸಿನಿಮಾಗಳ ಯಶಸ್ಸಿನ ಬಗ್ಗೆ ಹೆಚ್ಚಾಗಿ ಹೇಳಬೇಕಿಲ್ಲ. ಅಪ್ಪು ಅವರ ವೈಯಕ್ತಿಕ ಜೀವನದ ಬಗ್ಗೆ ನಿಮಗೆ ಗೊತ್ತಾ ? ತಿಳಿಯಲು ಮುಂದೆ ಓದಿ..ಅಪ್ಪು ಮತ್ತು ಅಶ್ವಿನಿ ಅವರದ್ದು ಪ್ರೇಮ ವಿವಾಹ.

ಶನಿವಾರ ಸಂಜೆಯೇ ಪುನೀತ್ ರಾಜಕುಮಾರ್ ಅಂತ್ಯಕ್ರಿಯೆ! | Puneeth Rajkumar Funeral to held today evening - Kannada Oneindia

ಅಶ್ವಿನಿ ಅವರನ್ನು ಪ್ರೀತಿಸಿದ ಬಳಿಕ ಮನೆಯಲ್ಲಿ ಪ್ರೀತಿಯ ವಿಚಾರವನ್ನು ಹೇಳಲು ಬಹಳ ಕಷ್ಟ ಪಟ್ಟಿದ್ದರಂತೆ ಅಪ್ಪು. ಹೇಗೋ ಧೈರ್ಯ ಮಾಡಿ ತಂದೆಯ ಬಳಿ ಹೇಳಿದಾಗ, ರಾಜ್ ಕುಮಾರ್ ಅವರು ಪಾರ್ವತಮ್ಮನವರ ಜೊತೆ ಮಾತನಾಡಿದ್ದರಂತೆ. ನಂತರ ಎರಡು ಕುಟುಂಬಗಳನ್ನು ಒಪ್ಪಿಸಿ, ಡಿಸೆಂಬರ್ 1, 1999 ರಲ್ಲಿ ಅಶ್ವಿನಿ ಅವರೊಡನೆ ವಿವಾಹವಾದರು ಪುನೀತ್ ರಾಜ್ ಕುಮಾರ್. ಸ್ಯಾಂಡಲ್ ವುಡ್ ನಲ್ಲಿ ಇವರಿಬ್ಬರು ಐಡಿಯಲ್ ಕಪಲ್ ಎಂದೇ ಹೇಳಬಹುದು.

ಅಪ್ಪು ಅಶ್ವಿನಿ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮೊದಲ ಮಗಳು ಧೃತಿ, ಎರಡನೇ ಮಗಳು ವಂದಿತ. ಸ್ಟಾರ್ ನಟನ ಮಕ್ಳಳು ಎಂಬ ಅಹo-ಕಾರ ಇಲ್ಲದೆ, ಸರಳವಾಗಿ ಶಿಸ್ತುಬದ್ಧವಾಗಿ ಬೆಳೆಯುತ್ತಿದ್ದಾರೆ ಧೃತಿ ಮತ್ತು ವಂದಿತ. ಇಬ್ಬರು ಕೂಡ ಮಾಧ್ಯಮಗಳ ಮುಂದೆ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ.

ವಿದ್ಯಾಭ್ಯಾಸದಲ್ಲಿ ನಿರತರಾಗಿದ್ದಾರೆ. ಧೃತಿ ಮತ್ತು ವಂದಿತಾರಿಗೆ ಅಣ್ಣ ವಿನಯ್ ರಾಜ್ ಕುಮಾರ್ ಅಂದರೆ ಬಹಳ ಇಷ್ಟ ಎನ್ನಲಾಗಿದೆ. ವಿನಯ್ ರಾಜ್ ಕುಮಾರ್ ಅವರ ಇನ್ಸ್ಟಾಗ್ರಾಮ್ ಅಕೌಂಟ್ ನೋಡಿದರೆ ಇದು ತಿಳಿದುಬರುತ್ತದೆ. ಚಿಕ್ಕಪ್ಪನ ಮಕ್ಕಳ ಜೊತೆ ಮುದ್ದಾದ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ ವಿನಯ್ ರಾಜ್ ಕುಮಾರ್. ಇದಲ್ಲದೆ ಅಪ್ಪು ಅವರ ಮಕ್ಕಳು, ಅವರ ಸಿನಿಮಾಗಳನ್ನು ನೋಡಿ ಮೊದಲ ವಿಮರ್ಶೆ ಕೂಡ ನೀಡುತ್ತಾರಂತೆ.

ಅಪ್ಪು ದಂಪತಿಗಳ ಸುಂದರ ಫೋಟೋಗಳನ್ನು ನೀವು ಸಾಮಾಜಿಕ ಜಾಲತಾಣಗಳಲ್ಲಿ ನೋಡಿರುತ್ತೀರಾ. ಇದಲ್ಲದೆ ಅಪ್ಪು ದಂಪತಿಗಳು ಸಾಕಷ್ಟು ನ್ಯೂಸ್ ಮಾಧ್ಯಮದ ಸಂದರ್ಶನಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ.

 

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!