ಕೇವಲ PUC ಮಾಡಿ,ತಿಂಗಳಿಗೆ 2 ಲಕ್ಷ ದುಡಿಯುತ್ತಿರುವ ಹುಡುಗಿ!ಅದು ಹೇಗೆ ಗೊತ್ತಾ,ನೀವು ಲಕ್ಷ ದುಡಿಯಿರಿ

Home Kannada News/ಸುದ್ದಿಗಳು ಸರ್ಕಾರೀ ಉಚಿತ ಯೋಜನೆಗಳು

ಜೀವನದಲ್ಲಿ ಯಾವುದೇ ಕಷ್ಟ ಶಾಶ್ವತ ಅಲ್ಲ. ನಮ್ಮ ಮೇಲೆ ನಮಗೆ ನಂಬಕೆ ಇದ್ದು ಶ್ರದ್ಧೆ ಭಕ್ತಿಯಿಂದ ಕೆಲಸ ಮಾಡಿದರೆ ಎಂತಹ ಕಷ್ಟವನ್ನಾದರು ಧೈರ್ಯದಿಂದ ಎದುರಿಸಬಹುದು. ಕಷ್ಟಗಳನ್ನು ಗೆದ್ದು, ಕುಟುಂಬದವರಿಗೆ ಸಂತೋಷ ತರಬಹುದು. ಜೊತೆಗೆ ಇನ್ನಿತರರಿಗೂ ಸಹಾಯ ಮಾಡಬಹುದು. ಹೀಗೆ, ನನ್ನಿಂದ ಎಲ್ಲವೂ ಸಾಧ್ಯ ಎಂದು ಧೈರ್ಯದಿಂದ ಮುನ್ನುಗ್ಗಿ ಯಶಸ್ಸು ಗಳಿಸಿದಂತಹ ಹಲವಾರು ವ್ಯಕ್ತಿಗಳ ಕಥೆಯನ್ನು ನಾವು ಕೇಳಿರುತ್ತೇವೆ. ಅದೇ ರೀತಿಯ ಒಂದು ಸ್ಪೂರ್ತಿದಾಯಕ ಕಥೆಯನ್ನು ಇಂದು ನಿಮಗೆ ಹೇಳ ಹೊರಟಿದ್ದೇವೆ..

ಜೀವನದ ಬಗ್ಗೆ ಬಹಳಷ್ಟು ಕನಸು ಕಟ್ಟಿಕೊಂಡಿದ್ದ ಈ ಹುಡುಗಿಗೆ ಪಿಯುಸಿ ನಂತರ ಓದಲು ಅವಕಾಶ ಸಿಗಲಿಲ್ಲ. ಆದರೆ ಇಂದು ಹೆ-ಣ್ಣುಮಕ್ಕಳಿಗೆ ಮಾದರಿಯಾಗಿ ನಿಂತಿದ್ದಾರೆ. ಅವರ ಜೀವನದಲ್ಲಿ ನಡೆದಿದ್ದಾದರು ಏನು ? ಈ ಹುಡುಗಿ PUC ನಂತರ ಮಾಡಿದ ಪ್ಲಾನ್ ಏನು ಗೊತ್ತಾ! ಅವರ ಸಂಪೂರ್ಣ ಕಥೆಯನ್ನು ತಿಳಿಯಲು ಮುಂದೆ ಓದಿ…ಈ ಹುಡುಗಿಯ ಹೆಸರು ನಂದಿನಿ, ಇವರು ಬೆಂಗಳೂರು ಗ್ರಾಮಾಂತರ ಪ್ರದೇಶದವರು. ನಂದಿನಿ ಅವರ ತಂದೆ ದೇವಸ್ಥಾನದಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಿದ್ದರು. ನಂದಿನಿ ಅವರಿಗೆ ಚೆನ್ನಾಗಿ ಓದಿ ಡಾಕ್ಟರ್ ಆಗಬೇಕು ಎಂಬ ಆಸೆ ಇತ್ತು ಆದರೆ ಮನೆಯ ಆರ್ಥಿಕ ಪರಿಸ್ಥಿತಿ ಇಂದಾಗಿ ವಿದ್ಯಾಭ್ಯಾಸ ಮುಂದುವರೆಸಲು ಸಾಧ್ಯವಾಗಲಿಲ್ಲ.

ಪಿಯುಸಿ ಮುಗಿದ ನಂತರ ನಂದಿನಿ ಅವರಿಗೆ ಮದುವೆ ಮಾಡಿಬಿಟ್ಟರು. ಕೆಲವು ವರ್ಷಗಳ ನಂತರ ನಂದಿನಿ ಅವರ ತಂದೆ ಇಹ ಲೋಕ ತ್ಯಜಿಸಿದರು. ತಂದೆ ಅಗಲಿಕೆಯ ನಂತರ ಮನೆಯ ಜವಾಬ್ದಾರಿ ಮತ್ತು ತಂಗಿ ಮದುವೆ ಮಾಡುವ ಜವಾಬ್ದಾರಿ ನಂದಿನಿ ಅವರ ಮೇಲೆ ಬಂದಿತು.ಕೆಲವು ಸ್ನೇಹಿತರ ಸಲಹೆಯಂತೆ ತಮ್ಮ ಆಭರಣಗಳನ್ನು ಒತ್ತೆ ಇಟ್ಟು, ಒಂದು ಕಾರ್ ಅನ್ನು ಖರೀದಿಸಿದರು, ಒಬ್ಬ ಡ್ರೈವರ್ ಅನ್ನು ನೇಮಿಸಿಕೊಂಡು ಊಬರ್ ಕ್ಯಾಬ್ ಡ್ರೈವ್ ಮಾಡಿಸಲು ಶುರು ಮಾಡಿದರು. ನಂತರ ಇವರಿಗೆ ತಿಳಿದುಬಂದ ವಿಷಯ ಏನೆಂದರೆ, ಊಬರ್ ಕಂಪನಿಗೆ ಡ್ರೈವರ್ ಗಳನ್ನು ರೆಫರ್ ಮಾಡಿದರೆ ರೂ.3000 ಕಮಿಷನ್ ಬರುತ್ತದೆ ಎಂಬ ವಿಷಯ ತಿಳಿಯಿತು. ಮೊದಲಿಗೆ ತಮಗೆ ತಿಳಿದಿದ್ದ ಕೆಲವು ಡ್ರೈವರ್ ಗಳನ್ನು ರೆಫರ್ ಮಾಡಿದ ನಂದಿನಿ ಅವರಿಗೆ ಕಮಿಷನ್ ಬರಲು ಶುರುವಾಯಿತು. ನಂತರ ಬಸ್ ಸ್ಟ್ಯಾಂಡ್ ಗಳಲ್ಲಿ,

ರೈಲ್ವೆ ಸ್ಟೇಶನ್ ಗಳಲ್ಲಿ ಡ್ರೈವರ್ ಗಳು ಬೇಕಾಗಿದ್ದಾರೆ ಎಂದು ಪೋಸ್ಟರ್ ಹಂಚಲು ಶುರು ಮಾಡಿದರು.ಇಂದಿನವರೆಗೆ ಸುಮಾರು 2000 ಡ್ರೈವರ್ ಗಳನ್ನು ಊಬರ್ ಕಂಪನಿಗೆ ರೆಫರ್ ಮಾಡಿ, ತಿಂಗಳಿಗೆ ಸುಮಾರು 2ಲಕ್ಷ ಕಮಿಷನ್ ಪಡೆದು, ತಂಗಿ ಮದುವೆಯನ್ನು ಸುಸೂತ್ರವಾಗಿ ಮಾಡಿ. ಎಲ್ಲಾ ಸಾಲ ತೀರಿಸಿ ಸ್ವಂತ ಮನೆ ಕಟ್ಟಿಕೊಂಡು ಸುಖ ಜೀವನ ನಡೆಸುತ್ತಿದ್ದಾರೆ ನಂದಿನಿ. ಜೊತೆಗೆ, ತಮ್ಮದೇ ಆದ ಹೊಸ ಆಫೀಸ್ ಆರಂಭಿಸಿ, 6 ಜನರಿಗೆ ಕೆಲಸ ನೀಡಿದ್ದಾರೆ. ನಂದಿನಿ ಅವರು ತೆಗೆದುಕೊಂಡ ನಿರ್ಧಾರಗಳಿಂದ ನಾವು ಕಲಿಯುವುದು ಬಹಳಷ್ಟಿದೆ.

ಈಗ ಲಾಕ್ ಡೌನ್ ಅಲ್ಲಿ ಕೂಡ, ತಮ್ಮ ಕೆಲಸಗಳನ್ನು ಮುಂದು ವರಿಸಿ, ಸಾಕಷ್ಟು ಕಾರ್ ಗಳನ್ನೂ ಬಾಡಿಗೆಗೆ ನೀಡಿ, ಸಾಕಷ್ಟು ಡ್ರೈವರ್ ಗಳಿಗೆ ಕೆಲಸ ಕೂಡ ಕೊಟ್ಟಿದ್ದಾರೆ. ಇವರ ಸದ್ಯದ ತಿಂಗಳ ಸಂಪಾದನೆ ಸುಮಾರು 4 ಲಕ್ಷ ಅಂತೇ! ಈ ಹುಡುಗಿ ಎಲ್ಲರಿಗೂ ಸ್ಫೂರ್ತಿ!ಇಂತಹ ಮತ್ತಷ್ಟು ಉಪಯುಕ್ತ ಹಾಗು ಇಂಟೆರೆಸ್ಟಿಂಗ್ ಸುದ್ದಿಗಳಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ನಟ ನಟಿಯರ ಬಗ್ಗೆ, ಕನ್ನಡ ದರವಾಹಯಿಗಳ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...