ಜಗತ್ತಿನಲ್ಲಿ ಒಬ್ಬ ಪುರುಷನ ಯಶಸ್ಸಿನ ಹಿಂದೆ ಒಬ್ಬ ಮಹಿಳೆಯ ಕೈ ಇರುತ್ತದೆ ಎಂದು ನಾವು ಕೇಳಿರುತ್ತೇವೆ. ಆದರೆ ಒಬ್ಬ ಮಹಿಳೆಯ ಯಶಸ್ಸಿನ ಹಿಂದೆ ಒಬ್ಬ ಪುರುಷನ ಕೈ ಇದೆ ಎಂಬ ಉದಾಹರಣೆಗಳು ನಮಗೆ ವಿರಳ. ಆದರೆ ಇಲ್ಲಿ ಹೇಳಲು ಹೊರಟಿರುವ ಕಥೆಯಲ್ಲಿ ಸ್ತ್ರೀ ಯಶಸ್ಸಿನ ಹಿಂದೆ ಒಬ್ಬ ಪುರುಷನ ಪರಿಶ್ರಮವಿದೆ. ಇವತ್ತಿನ ದಿನಗಳಲ್ಲಿ ಹೆಣ್ಣು ಮದುವೆಯಾದ ನಂತರ ಆಕೆಯ ಓದನ್ನು ಕೂಡ ನೆಲೆಸಿದ ಹಲವಾರು ಉದಾಹರಣೆಗಳನ್ನು ನಾವು ಕಣ್ಣಾರೆ ಕಾಣಬಹುದು. ಆದರೆ ಈ ವ್ಯಕ್ತಿ ಮಾತ್ರ ಮದುವೆಯಾದ ನಂತರ ತನ್ನ ಹೆಂಡತಿಯನ್ನು ಓದಿಸಿ ಉನ್ನತವಾದ ಹುದ್ದೆಗೆ ಸೇರಿಸಿದ್ದಾನೆ. ಈ ಮೂಲಕ ಆ ವ್ಯಕ್ತಿ ಒಬ್ಬ ಮಹಿಳೆ ಯಶಸ್ಸಿನ ಹಿಂದೆ ಒಬ್ಬ ಪುರುಷ ಕೂಡ ಇರುತ್ತಾನೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಹಾಗಾದರೆ ಆ ವ್ಯಕ್ತಿ ಯಾರು? ಏನು ಮಾಡಿದ್ದಾನೆ ಎಂಬುದರ ಸಂಪೂರ್ಣ ಮಾಹಿತಿ ಕೆಳಗೆ ನೀಡಲಾಗಿದ್ದು, ಇದನ್ನು ಸಂಪೂರ್ಣವಾಗಿ ಓದಿ.

ಹೌದು ಸಮಾಜದಲ್ಲಿ ಹೆಣ್ಣು ಎಂದರೆ ಕುಟುಂಬವನ್ನು ಸಂಭಾಳಿಸಬೇಕು ಹಾಗೂ ನಾಲ್ಕು ಗೋಡೆಗಳ ಮಧ್ಯೆ ಅಡುಗೆ ಮಾಡುತ್ತಾ ಗಂಡ ಹಾಗೂ ಮಕ್ಕಳನ್ನು ನೋಡಿಕೊಳ್ಳಬೇಕು ಎಂಬ ಭಾವನೆ ಇರುತ್ತದೆ. ಆದರೂ ಕೂಡ ಎಲ್ಲೋ ಒಂದು ಕಡೆ ಕೆಲವು ಹೆಣ್ಣುಮಕ್ಕಳು ಸಮಾಜದಲ್ಲಿ ಉನ್ನತ ಸ್ಥಾನವನ್ನು ಪಡೆದುಕೊಳ್ಳುತ್ತಾರೆ. ಅದೇ ರೀತಿ ಕೆಲವು ಹೆಣ್ಣು ಮಕ್ಕಳು ಮದುವೆಯಾದ ನಂತರ ಕೂಡ ತಮ್ಮ ಕನಸನ್ನು ಈಡೇರಿಸಿಕೊಳ್ಳುತ್ತಾರೆ. ಇಂತಹ ಹೆಣ್ಣುಮಕ್ಕಳಿಗೆ ಅವರ ಪತಿಯಿಂದ ಹಂಬಲವೂ ಕೂಡ ಇರುತ್ತದೆ. ಅದೇ ರೀತಿ ಇಲ್ಲೊಬ್ಬ ಪತಿದೇವ ತನ್ನ ಹೆಂಡತಿಗೆ ಮದುವೆಯಾದ ನಂತರ ಓದಿಸಿ ಉನ್ನತವಾದ ಹುದ್ದೆಯಲ್ಲಿ ಸ್ಥಾನ ಪಡೆಯುವಂತೆ ಮಾಡಿದ್ದಾನೆ.

IPS Wife

ಹೌದು ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಜಯದೇವ್ ಪಿಸಾಳ ಎಂಬುವವರು ಬಹಳ ಕಷ್ಟದಿಂದ ಬಂದವರು. ರೈಲು ನಿಲ್ದಾಣದ ಹೊರಗೆ ಕಬ್ಬಿನ ಹಾಲನ್ನು ಮಾರಿ ಜೀವನ ನಡೆಸುವವರು. ಇಂತಹ ಹಲವಾರು ಕಷ್ಟಗಳ ಮಧ್ಯೆ ತನ್ನ ಕನಸಿನ ಪರೀಕ್ಷೆ ಬರೆದು ಪಿ ಎಸ್ ಐ ಹುದ್ದೆಯನ್ನು ಕೂಡ ಪಡೆದಿದ್ದರು. ಆದರೆ ಇವರು ತಮ್ಮ ಊರಿನ ಸೇವೆ ಮಾಡಬೇಕೆಂಬ ಹಂಬಲ ಇದ್ದಿದ್ದರಿಂದ ಅವರು ಆ ಹುದ್ದೆಯನ್ನು ಸೇರಿಕೊಳ್ಳಲಿಲ್ಲ. ಆದ್ದರಿಂದ ಅವರು ತಮ್ಮ ಊರಿನ ಪಳಸಿಯ ಸರ್ಪಂಚ್ ಆಗಿ ಸೇರಿಕೊಂಡು ಊರಿನ ಸೇವೆಯಲ್ಲಿ ತೊಡಗಿಕೊಂಡರು.

ಇದೇ ಸಂದರ್ಭದಲ್ಲಿ ಕಲ್ಯಾಣಿ ಎಂಬ ಯುವತಿಯೊಂದಿಗೆ ಪ್ರೀತಿಯಾಗಿ ಹಾಗೆಯೇ ಹೆತ್ತವರನ್ನು ಕೇಳಲು ಹೋದಾಗ ಜಯದೀಪ ಅವರನ್ನು ನಿರಾಕರಿಸಿದರು. ಆದರೆ ಆಕೆಯನ್ನೇ ಮದುವೆಯಾಗುತ್ತೇನೆ ಎಂದು ಹಠ ಹಿಡಿದ ಜಯದೀಪ್ ಅವರು, ಅವರನ್ನು ನನಗೆ ಮದುವೆ ಮಾಡಿಕೊಟ್ಟರೆ ಎರಡು ವರ್ಷದಲ್ಲಿ ಪಿಎಸ್ಐ ಮಾಡಿ ತೋರಿಸುವೆ ಎಂದು ಮಾತುಕೊಟ್ಟರು. ಇದಕ್ಕೆ ಕಲ್ಯಾಣಿ ಮನೆಯವರು ಒಪ್ಪಿ ಮದುವೆ ಮಾಡಿಕೊಟ್ಟರು. ಜಯದೀಪ್ ಅವರು ಮದುವೆಯಾದ ನಂತರ ತಮ್ಮ ಮಾತು ತಪ್ಪಲಾರದು ತಮ್ಮ ಪತ್ನಿಯನ್ನು ಓದಿಸಿ, ಅವರಿಗೆ ತಾವೇ ಎಲ್ಲ ವಿಷಯಗಳನ್ನು ಅರ್ಥ ಮಾಡಿಸಿ ಕೊನೆಗೆ ಎರಡು ವರ್ಷದಲ್ಲಿ ಪಿಎಸ್ಐ ಹುದ್ದೆ ಸಿಗುವಂತೆ ಮಾಡಿದರು. ಇದೀಗ ಜಯದೀಪ್ ಅವರ ಪತ್ನಿ ಕಲ್ಯಾಣಿ ಪಿಎಸ್ಐ ಹುದ್ದೆಯಲ್ಲಿದ್ದಾರೆ. ಇನ್ನು ಪಿಎಸ್ಐ ಆಗಿ ಬಂದ ಪತ್ನಿಗೆ ಜಯದೀಪ್ ಅವರು ಸಲ್ಯೂಟ್ ಮಾಡಿದ್ದಾರೆ.

ನೋಡಿದ್ರಲ್ಲ ಸ್ನೇಹಿತರೆ ಮದುವೆಯಾದ ನಂತರ ಕುಟುಂಬ ಮತ್ತು ಮಕ್ಕಳ ನಿರ್ವಹಣೆಯಲ್ಲಿ ಮುಳುಗಿಹೋಗುವ ಎಷ್ಟು ಹೆಣ್ಣುಮಕ್ಕಳು ಇಂತಹ ಕನಸುಗಳನ್ನು ಹೊಂದಿರುತ್ತಾರೆ. ಆದರೆ ಸರಿಯಾದ ಬೆಂಬಲವಿಲ್ಲದೆ ಅವರು ತಮ್ಮ ಕನಸುಗಳನ್ನು ಬುತ್ತಿ ಕಟ್ಟಿ ಮುಳುಗಿರುತ್ತಾರೆ. ಆದರೆ ಇದೀಗ ಇದನ್ನು ಕೇಳಿದ ಅದಷ್ಟೋ ಹೆಣ್ಣುಮಕ್ಕಳು ಜಯದೀಪ್ ಅಂತಹ ಪತಿ ನಮಗೂ ಸಿಗಲಿ ಎಂದು ಬೇಡಿಕೊಳ್ಳುತ್ತಾರೆ. ಇನ್ನು ಜಯದೀಪ್ ಅವರ ಬಗ್ಗೆ ಹೇಳಬೇಕಾದರೆ ತಮ್ಮ ಮಾತಿನಂತೆ ತಮ್ಮ ಪತ್ನಿಯನ್ನು ಪಿಎಸ್ಐ ಮಾಡಿದ್ದು ಎಲ್ಲರ ದೃಷ್ಟಿಯಲ್ಲಿ ಗ್ರೇಟ್ ಎನಿಸಿಕೊಂಡಿದ್ದಾರೆ. ಇನ್ನು ಈ ಸುದ್ದಿ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •