ಮನೆಯೇ ಮಂತ್ರಾಲಯ ಅನ್ನೋ ಮಾತನ್ನು ನೀವು ಕೇಳಿರುತ್ತೀರ ಈ ಮನೆಯಲ್ಲಿ ಹೆಣ್ಣು ಮಕ್ಕಳು ಈ ರೀತಿಯಾಗಿ ಇದ್ದದ್ದೇ ಆದಲ್ಲಿ ಆ ಮನೆಗೆ ಏಳಿಗೆಯಾಗುವುದಿಲ್ಲ ಎಂದು ನಮ್ಮ ಹಿರಿಯರು ಹೇಳುತ್ತಾ ಇದ್ದರು, ಹೌದು ಸ್ನೇಹಿತರೆ ನಾನು ಈ ಮೊದಲೇ ಸಾಕಷ್ಟು ಮಾಹಿತಿಯಲ್ಲಿ ನಿಮಗೆ ತಿಳಿಸಿ ಹೇಳಿದ್ದೇನೆ .

ನಮ್ಮ ಹಿರಿಯರು ಏನನ್ನೇ ಹೇಳಿದರೂ ಅದರ ಹಿಂದೆ ಸಾಕಷ್ಟು ಅರ್ಥವಿರುತ್ತದೆ ಎಂದು. ಆದ ಕಾರಣ ಇಂದಿನ ಮಾಹಿತಿಯಲ್ಲಿ ತಿಳಿಯೋಣ ಯಾವ ರೀತಿಯ ಹೆಣ್ಣು ಮಕ್ಕಳು ಮನೆಯಲ್ಲಿ ಇದ್ದರೆ ಆ ಮನೆ ಏಳಿಗೆಯಾಗುವುದಿಲ್ಲ ಮತ್ತು ಹೆಣ್ಣು ಮಕ್ಕಳು ಮನೆಯಲ್ಲಿ ಲಕ್ಷ್ಮಿಯ ಸಾನ್ನಿಧ್ಯ ಆಗಬೇಕಾದರೆ ಹೇಗಿರಬೇಕು ಅನ್ನುವುದನ್ನು ತಿಳಿಯೋಣ ಬನ್ನಿ ಇಂದಿನ ಈ ಮಾಹಿತಿಯಲ್ಲಿ.

Prosperity

 ಹೆಣ್ಣನ್ನು ಲಕ್ಷ್ಮಿಗೆ ಹೋಲಿಸುತ್ತಾರೆ ಆದ ಕಾರಣ ಮನೆಯಲ್ಲಿ ಹೆಣ್ಣು ಮಕ್ಕಳು ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಮನೆಯನ್ನು ಸ್ವಚ್ಛ ಪಡಿಸಿ ಮನೆಯ ಮುಂದೆ ರಂಗೋಲಿಯನ್ನು ಹಾಕಿ ದೇವರ ಪೂಜೆಯನ್ನು ಮಾಡಬೇಕು.
 ಮನೆಯಲ್ಲಿ ಹೆಣ್ಣು ಮಕ್ಕಳು ಸಂಜೆಯ ಸಮಯದಲ್ಲಿ ಕೂದಲು ಬಿಟ್ಟುಕೊಂಡು ಓಡಾಡುವುದರಿಂದ ಆ ಮನೆಗೆ ದಾರಿದ್ರ್ಯ ಆಗುತ್ತದೆ ಆದ ಕಾರಣ ಸಂಜೆ ಸಮಯದಲ್ಲಿ ಜಡೆ ಕಟ್ಟಿಕೊಂಡು ಅಲಂಕಾರ ಮಾಡಿಕೊಂಡು ಮನೆಯಲ್ಲಿ ಓಡಾಡಿಕೊಂಡು ಇದ್ದರೆ ಆ ಮನೆಗೆ ದಾರಿದ್ರ್ಯ ಬರುವುದಿಲ್ಲ.
 ಇನ್ನು ಮನೆಯಲ್ಲಿ ಬೆಳಿಗ್ಗೆ ಎದ್ದ ಕೂಡಲೇ ಮನೆಯನ್ನು ಸ್ವಚ್ಛ ಮಾಡಿ ಮನೆಯ ಅಂಗಳದಲ್ಲಿ ಹೊಸ್ತಿಲಿಗೆ ಕುಂಕುಮ ಅರಿಶಿನವನ್ನು ಇಟ್ಟು ರಂಗೋಲಿಯನ್ನು ಬಿಡಬೇಕು ಮತ್ತು ಮನೆಯಲ್ಲಿರುವ ಹೆಣ್ಣು ಮಕ್ಕಳು ಸಮಯವಲ್ಲದ ಸಮಯದಲ್ಲಿ ಊಟವನ್ನು ಮಾಡಬಾರದು ಕೆಲವರು ಸಂಜೆ ಸಮಯದಲ್ಲಿ ತಟ್ಟೆಗೆ ಅನ್ನವನ್ನು ಹಾಕಿಕೊಂಡು ಊಟ ಮಾಡುತ್ತಾರೆ ಈ ರೀತಿ ಮಾಡುವುದರಿಂದ ಮನೆಗೆ ಲಕ್ಷ್ಮಿಯ ಸಾನ್ನಿಧ್ಯವೂ ಆಗುವುದಿಲ್ಲ ಇದರ ಬದಲಾಗಿ ಇನ್ನು ದಾರಿದ್ರ್ಯ ಉಂಟಾಗುತ್ತದೆ ಅಂತ ಹೇಳಲಾಗುತ್ತದೆ.
Prosperity

ಆದ ಕಾರಣ ಮನೆಯ ಲಕ್ಷ್ಮಿ ಾಗಿರುವ ಹೆಣ್ಣುಮಕ್ಕಳು ಸಂಜೆಯ ಸಮಯದಲ್ಲಿ ಮುಖವನ್ನು ತೊಳೆದು ದೇವರ ಪೂಜೆಯನ್ನು ಮಾಡಿ ಹಣೆಗೆ ಕುಂಕುಮವನ್ನು ಹಚ್ಚಿ ಸ್ವಲ್ಪ ಸಮಯ ದೇವರ ಧ್ಯಾನ ಮಾಡುವುದರಿಂದ ಮನೆಗೆ ಶುಭವಾಗುತ್ತದೆ ಎಂದು ಹೇಳಲಾಗುತ್ತದೆ.

ಇನ್ನು ಮನೆಯಲ್ಲಿ ಹೆಣ್ಣು ಮಕ್ಕಳು ಕೋಪ ಮಾಡಿಕೊಂಡು ಬೇಸರದಿಂದ ಅಳುತ್ತಾ ಇದ್ದರೆ ಆ ಮನೆಗೆ ಒಳ್ಳೆಯದಾಗುವುದಿಲ್ಲ ದಾರಿದ್ರ್ಯ ವಾಗುತ್ತದೆ ಎನ್ನುವ ಆಚೆ ಹೋದ ಹಿರಿಯರಿಗೆ ವ್ಯವಹಾರದಲ್ಲಿ ನಷ್ಟ ಸಂಭವ ವಾಗುತ್ತದೆ ಎಂದು ಹಿರಿಯರು ಹೇಳುತ್ತಾರೆ ಆದ ಕಾರಣ ಮನೆಯಲ್ಲಿ ಶುಕ್ರವಾರದ ದಿನದಂದು ಮಂಗಳವಾರದ ದಿನದಂದು ಹೆಣ್ಣು ಮಕ್ಕಳು ಕಣ್ಣೀರನ್ನು ಹಾಕಬಾರದು.

Prosperity

ಮನೆಯಲ್ಲಿ ಹೆಣ್ಣು ಮಕ್ಕಳು ಯಾವಾಗಲೂ ಸಪ್ಪೆ ಮುಖವನ್ನು ಹಾಕಿಕೊಂಡು ಇರುವುದರಿಂದ ಕೂಡ ಆ ಮನೆಗೆ ಏಳಿಗೆಯಾಗುವುದಿಲ್ಲ ಮನೆಯಲ್ಲಿ ಹೆಣ್ಣು ಮಕ್ಕಳು ನಗುತ್ತಾ ಓಡಾಡಿಕೊಂಡು ಇದ್ದರೆ ಆ ಮನೆಯಲ್ಲಿ ಲಕ್ಷ್ಮಿ ಓಡಾಡುತ್ತಾಳೆ ಲಕ್ಷ್ಮಿ ನೆಲೆಸುತ್ತಾಳೆ ಎಂದು ಹಿರಿಯರು ಹೇಳುತ್ತಿದ್ದರು, ಆದ ಕಾರಣ ನಮ್ಮ ಹಿರಿಯರು ಏನೇ ಹೇಳಿದರೂ ಕೂಡ ಆ ಮಾತಿಗೆ ಒಂದು ಸಮರ್ಪಕವಾದ ಕಾರಣವಿರುತ್ತದೆ.

ಇನ್ನು ಮುಂದೆ ಯಾವತ್ತಿಗೂ ಮನೆಯಲ್ಲಿ ಹೆಣ್ಣು ಮಕ್ಕಳು ಇಂತಹ ಕೆಲಸಗಳನ್ನು ಮಾಡಲು ಹೋಗಬೇಡಿ ಹಾಗೆಯೇ ಹಿರಿಯರು ಮನೆ ಅಲ್ಲಿ ಹೆಣ್ಣು ಮಕ್ಕಳು ಹೇಗಿರಬೇಕು ಅಂತ ಹೇಳುತ್ತಾರೋ ಆ ರೀತಿ ಮನೆಯ ಲಕ್ಷ್ಮಿ ಯಾದವರು ಇರುವುದರಿಂದ ಮನೆಗೂ ಒಳ್ಳೆಯದು ಹಾಗೂ ಮನೆಯ ಹಿರಿಯರಿಗೂ ಕೂಡ ವ್ಯವಹಾರ ವ್ಯಾಪಾರದಲ್ಲಿ ಲಾಭ ಆಗುತ್ತದೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •