ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಮದುವೆಯ ನಂತರ ಹಲವರು ಮಂದಿ ಒಳ್ಳೆಯ ಅದೃಷ್ಟ ಪಡೆಯುತ್ತಾರೆ. ಇನ್ನು ಕೆಲವರು ಇರುವ ಅದೃಷ್ಟವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ ಕೇವಲ ಬರುವ ಹೆಣ್ಣು ಕಾರಣವಲ್ಲ..! ನೀವು ಕಾರಣವಾಗಿರಬಹುದು ಹೇಗೆ ಗೊತ್ತೇ..?

ಮದುವೆಯ ಮುಂಚೆ ನಿಮ್ಮ ಮತ್ತು ನಿಮ್ಮ ಸಂಗಾತಿಯ ಜಾತಕವನ್ನು ಪರೀಕ್ಷಿಸಿ. ಹೌದು. ಮದುವೆ ಮೊದಲು ನಿಮ್ಮ ಹಾಗೂ ನಿಮ್ಮ ಸಂಗಾತಿಯ ಜಾತಕವನ್ನು ತಾಳೆ ಮಾಡಿಸಿ. ಇದು ಕೂಡ ನಿಮ್ಮ ವೈವಾಹಿಕ ಜೀವನವನ್ನು ನಿರ್ಧರಿಸುತ್ತದೆ. ಒಂದು ವೇಳೆ ನಿಮ್ಮ ಜಾತಕ ಹೊಂದಾಣಿಕೆಯಾಗದೇ ಪಕ್ಷದಲ್ಲಿ ನಿಮ್ಮ ಜ್ಯೋತಿಷ್ಯ ಹೇಳುವವರ ಬಳಿ ಇದಕ್ಕೆ ಪರಿಹಾರವನ್ನು ತಿಳಿದುಕೊಂಡು ಅದೇ ರೀತಿ ಮುನ್ನಡೆಯಿರಿ.

* ಮದುವೆಯ ನಂತರ ನೀವು ಬಾಳುತ್ತಿರುವ ಮನೆಯೂ ಕಾರಣ: ಹೌದು. ಮದುವೆಯ ಮುಂಚೆ ನೀವು ಎಲ್ಲಿರುತ್ತೀರಿ ಅನ್ನುವುದು ಮುಖ್ಯವಲ್ಲ. ಮದುವೆಯ ನಂತರ ಎಲ್ಲಿರುತ್ತೀರಿ ಎನ್ನುವುದು ಮುಖ್ಯ. ಮದುವೆಯ ನಂತರ ನಿಮ್ಮಿಬ್ಬರಿಗೂ ಹೊಂದಾಣಿಕೆಯಾಗುವ ಮನೆಯನ್ನು ಕೊಂಡುಕೊಳ್ಳಿ. ಅಥವಾ ಬಾಡಿಗೆ ನೋಡಿಕೊಳ್ಳಿ. ನಿಮ್ಮ ಮನೆ ಕೂಡ ನಿಮ್ಮ ವೈವಾಹಿಕ ಜೀವನವನ್ನು ಬದಲಿಸಬಲ್ಲುದು. ಯಾವುದಕ್ಕೂ ನಂಬಿಕಸ್ತ ವಾಸ್ತು ಶಾಸ್ತ್ರಜ್ಞರನ್ನು ಭೇಟಿಯಾಗಿ ಪರಿಹಾರ ತಿಳಿದುಕೊಳ್ಳಿ.

* ನಿಮ್ಮ ಮನೆಯಲ್ಲಿ ಆದಷ್ಟು ಸಮಾಧಾನವಾಗಿರಿ: ನಿಮ್ಮ ಮನೆ ಪರಿಸರವನ್ನು ನೀವೇ ಗೊಂದಲಗಳಿಂದ ಹಾಳು ಮಾಡಿದರೆ ನಿಮಗೆ ಯಶಸ್ಸು ಎಲ್ಲಿಂದ ಬರುತ್ತೆ..? ಎಲ್ಲದಕ್ಕೂ ತಾಳ್ಮೆ ಅತ್ಯಂತ ಮುಖ್ಯ.

ಮದುವೆ ಮಾರುಕಟ್ಟೆ –

ನೀವು ಹಾಗೂ ನಿಮ್ಮ ಸಂಗಾತಿ ಪರಸ್ಪರ ಹೊಂದಾಣಿಕೆಯಿಂದ ಮನೆಯಲ್ಲಿ ಶಾಂತಿ ನೆಲೆಸುವಂತೆ ಮಾಡಿ. ಆಗ ನೋಡಿ ನಿಮಗೆ ಅದೃಷ್ಟ ತಾನಾಗಿಯೇ ಒಲಿದು ಬರುತ್ತದೆ.
* ಮನೆ ಬಾಗಿಲನ್ನು ಯಾವಾಗಲೂ ಹಾಕಿರಬೇಡಿ: ನಗರ ಪ್ರದೇಶಗಳಲ್ಲಿ ಮನೆಯ ಬಾಗಿಲನ್ನು ಯಾವಾಗಲೂ ಹಾಕಿರುವುದನ್ನು ನಾವು ನೋಡಿರುತ್ತೇವೆ. ಹೀಗೆ ಹಾಕುವುದರಿಂದ ನಿಮ್ಮ ಮನೆಯಲ್ಲಿ ಉತ್ಪತ್ತಿಯಾಗುವ ಋಣಾತ್ಮಕ ತರಂಗಗಳು ಹೊರಗೆ ಹೋಗದೆ ನಿಮ್ಮಲ್ಲೇ ಆವರಿಸಿ ದರಿದ್ರ ತನ ನೆಲೆಸುವಂತೆ ಮಾಡುತ್ತವೆ. ಇದರಿಂದ ನಿಮ್ಮ ಯಶಸ್ಸು / ವರ್ಚಸ್ಸು ಕುಂದುತ್ತದೆ.

* ನಿಮ್ಮ ಮನೆ ದೇವರಿಗೆ ಪ್ರತಿನಿತ್ಯ ಪಾರಾಯಣ ಮಾಡಿ / ಪೂಜೆ ಮಾಡಿ:
ಪ್ರತಿಯೊಬ್ಬರಿಗೂ ತಮ್ಮದೇ ಆದ ಮನೆ ದೇವರಿರುತ್ತಾರೆ. ಆ ದೇವರನ್ನು ಮನಸ್ಪೂರ್ವಕವಾಗಿ ಪ್ರತಿ ನಿತ್ಯ ನೀವು ನಿಮ್ಮ ಸಂಗಾತಿ ಪೂಜಿಸಿ ಇದರಿಂದ ನಿಮ್ಮ ಮನೆಯಲ್ಲಿ ಧನಾತ್ಮಕ ತರಂಗಗಳು ಉಂಟಾಗಿ ನಿಮ್ಮ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ. ಇದರಿಂದ ನಿಮ್ಮ ತೊಂದರೆ ತಾಪತ್ರಯಗಳು ಹೇಳ ಹೆಸರಿಲ್ಲದಂತೆ ಮಾಯವಾಗುತ್ತವೆ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •